5:23 PM Saturday26 - July 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ… Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;… ಕಳಸ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಹಾರಿದ ಜೀಪ್; 23ರ… ಮೈಸೂರು ದಸರಾ: ಜಂಬೂ ಸವಾರಿಯ ಮೊದಲ ಹಂತದ ಸಾಕಾನೆಗಳ ಪಟ್ಟಿ ಬಿಡುಗಡೆ Kodagu | ಬಿರುಸಿನ ಮಳೆ: ಕೊಡಗು ಜಿಲ್ಲೆಯಲ್ಲಿ ನಾಳೆ ಶಾಲೆ, ಪಿಯು ಕಾಲೇಜುಗಳಿಗೆ… ಬಿಜೆಪಿ ನಡೆಸಿರುವ ಅಕ್ರಮವೇ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಎನ್ನುವ ಸತ್ಯ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಎಸ್ ಐಟಿಯಿಂದ ಹಿರಿಯ ಐಪಿಎಸ್ ಅಧಿಕಾರಿ ಸೌಮ್ಯಲತಾ…

ಇತ್ತೀಚಿನ ಸುದ್ದಿ

Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ ಉದ್ಘಾಟನೆ

26/07/2025, 17:05

*ಆಸ್ಟ್ರೇಲಿಯನ್ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಎನ್‌ಜಿಒ ‘ರಾಂಪ್ ಮೈ ಸಿಟಿ’ ನಿರ್ಮಿಸಿದ ಶೌಚಾಲಯ*

ಬೆಂಗಳೂರು(reporterkarnataka.com): ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರವರು ಶನಿವಾರ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯವನ್ನು ಉದ್ಘಾಟಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ವಿಕಲಚೇತನರಿಗೆ ಪ್ರವೇಶವನ್ನು ಸುಧಾರಿಸುವ ನಿಟ್ಟಿನಲ್ಲಿ ಸಂಸದರ ಕಚೇರಿಯ ಪ್ರಯತ್ನಗಳಿಗೆ ಮತ್ತಷ್ಟು ಸೇರ್ಪಡೆಯಾಗಿದೆ.
ಸಂಸದರ ಕಚೇರಿಯು ಶೌಚಾಲಯದ ಸ್ಥಳವನ್ನು ಗುರುತಿಸಿದ್ದು, ಎನ್‌ಜಿಒ ರಾಂಪ್ ಮೈ ಸಿಟಿ ಆಸ್ಟ್ರೇಲಿಯನ್ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಶೌಚಾಲಯವನ್ನು ನಿರ್ಮಿಸಿದೆ. ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನ ಉಸ್ತುವಾರಿಗಳಾಗಿರುವ ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯು ನಿರ್ಮಾಣಕ್ಕಾಗಿ ಜಾಗವನ್ನು ಒದಗಿಸಿದ್ದು, ಆಸ್ಟ್ರೇಲಿಯಾದ ಭಾರತದ ಹೈ ಕಮಿಷನರ್ ಫಿಲಿಪ್ ಗ್ರೀನ್, ಬೆಂಗಳೂರಿನ ಆಸ್ಟ್ರೇಲಿಯನ್ ಕಾನ್ಸಲ್-ಜನರಲ್ ಹಿಲರಿ ಮೆಕ್‌ಗ್ರೀಚಿ, ಮತ್ತು ರಾಂಪ್ ಮೈ ಸಿಟಿ ಸಂಸ್ಥಾಪಕ ಪ್ರತೀಕ್ ಖಂಡೇವಾಲ್ ಅವರ ಸಮ್ಮುಖದಲ್ಲಿ ಶೌಚಾಲಯವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, “ಈ ಸೌಲಭ್ಯವು ನಮ್ಮ ಸಾರ್ವಜನಿಕ ಸ್ಥಳಗಳನ್ನು ನಿಜವಾಗಿಯೂ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಒಂದು ಸಣ್ಣ ಆದರೆ, ಪ್ರಬಲ ಹೆಜ್ಜೆಯಾಗಿದೆ. ಇದು ವಿಕಲಚೇತನರಿಗೆ ಅವಶ್ಯಕ ಲಭ್ಯವಾಗಬೇಕಿರುವ ಘನತೆ ಮತ್ತು ಸ್ವಾತಂತ್ರ್ಯವನ್ನು ನೀಡುತ್ತದೆ. ನಗರ ಪ್ರದೇಶಗಳಲ್ಲಿ ವಿಕಲಚೇತನರಿಗೆ ಹೆಚ್ಚು ಸುಲಭವಾಗಿ ಪ್ರವೇಶಿಸಲು ಅದ್ಭುತ ಕೆಲಸ ಮಾಡುತ್ತಿರುವ ರಾಂಪ್ ಮೈ ಸಿಟಿಯೊಂದಿಗೆ ಮತ್ತೊಮ್ಮೆ ಕೆಲಸ ಮಾಡಲು ನಾವು ಹೆಮ್ಮೆಪಡುತ್ತೇವೆ. ಅವರ ಬದ್ಧತೆ ಮತ್ತು ವಿವರಗಳೆಡೆಗಿನ ಗಮನ ಶ್ಲಾಘನೀಯ” ಎಂದು ತಿಳಿಸಿದರು.
ಆಸ್ಟ್ರೇಲಿಯನ್ ದೂತಾವಾಸಕ್ಕೆ ಅವರ ನಿರಂತರ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿರುವ ಸಂಸದರು,. “ಸರ್ಕಾರಗಳು ಮತ್ತು ನಾಗರಿಕ ಸಮಾಜದ ನಡುವಿನ ಇಂತಹ ಸಹಭಾಗಿತ್ವಗಳು ಅತೀ ಮುಖ್ಯವಾಗಿದ್ದು, ಸಾರ್ವಜನಿಕ ಮೂಲಸೌಕರ್ಯದಲ್ಲಿ ಎಲ್ಲರನ್ನೂ ಒಳಗೊಳ್ಳುವುದು ಮುಖ್ಯವಾಗಿದೆ” ಎಂದರು.
ಈ ಹಿಂದೆ ಸಂಸದರ ಕಚೇರಿಯ ನೇತೃತ್ವದಲ್ಲಿ, 15ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳು ಮತ್ತು ಪೊಲೀಸ್ ಠಾಣೆಗಳಲ್ಲಿ ರಾಂಪ್‌ಗಳನ್ನು ಅಳವಡಿಸಲು ರಾಂಪ್ ಮೈ ಸಿಟಿಯ ಸಹಕಾರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಸಂಸದರು, ಈ ಎನ್‌ಜಿಒ ಜಯನಗರದಲ್ಲಿನ ಬೆಂಗಳೂರು ದಕ್ಷಿಣ ಸಂಸದರ ಕಚೇರಿಯ ಹೊರಗೆ ಗಿಗ್ ಕೆಲಸಗಾರರಿಗಾಗಿ ವೀಲ್‌ಚೇರ್ ಸ್ನೇಹಿ ವಿಶ್ರಾಂತಿ ಸ್ಥಳವನ್ನು ಸಹ ನಿರ್ಮಿಸಿದ್ದು, ಇದನ್ನು ದಿವ್ಯಾಂಗಜನರು ಮತ್ತು ಇತರರು ವ್ಯಾಪಕವಾಗಿ ಬಳಸುತ್ತಿದ್ದಾರೆ.


“ಸಣ್ಣ ಬದಲಾವಣೆಗಳು ಹೇಗೆ ದೊಡ್ಡ ವ್ಯತ್ಯಾಸವನ್ನು ಮಾಡುತ್ತವೆ & ಇದು ಬೆಂಗಳೂರು ಮತ್ತು ಅದರಾಚೆ ಇಂತಹ ಹೆಚ್ಚಿನ ಉಪಕ್ರಮಗಳಿಗೆ ಸ್ಫೂರ್ತಿ ನೀಡುತ್ತದೆ “ ಎಂದು ತಿಳಿಸಿದರು.
ಹೊಸದಾಗಿ ಉದ್ಘಾಟಿಸಲಾದ ಶೌಚಾಲಯದಿಂದ, ಲಾಲ್‌ಬಾಗ್‌ಗೆ ಭೇಟಿ ನೀಡುವ ನೂರಾರು ವಿಕಲಚೇತನ ಸಂದರ್ಶಕರಿಗೆ ಪ್ರಯೋಜನವಾಗಲಿದೆ. ಬೆಂಗಳೂರಿನ ಹೆಮ್ಮೆಯ ಹಾಗೂ ಸಾರ್ವಜನಿಕ ಉದ್ಯಾನವನಗಳಲ್ಲಿ ಒಂದಾದ ಲಾಲ್‌ ಬಾಗ್ ನಲ್ಲಿ ಮೂಲಭೂತ ಸೌಕರ್ಯಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ “ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು