9:21 AM Wednesday5 - November 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ…

ಇತ್ತೀಚಿನ ಸುದ್ದಿ

ವಿರಾಜಪೇಟೆ | ದೊಣ್ಣೆಯಿಂದ ಹೊಡೆದು ಮಲ ಮಗಳ ಹತ್ಯೆ; ಇನ್ನೊಬ್ಬಳನ್ನೂ ನೀರಿಗೆ ತಳ್ಳಿ ಕೊಲ್ಲಲು ಯತ್ನ: ಆರೋಪಿ ಬಂಧನ

21/07/2025, 12:57

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಈತ ತನ್ನ ಪತ್ನಿಯ ಮೊದಲನೇ ಗಂಡನ ಹೆಣ್ಣು ಮಗುವನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದರೆ ಮತ್ತೊಬ್ಬಳು ಹೆಣ್ಣು ಮಗುವಿನ ಮೈ, ಕೈ, ಕಾಲುಗಳನ್ನು ಸುಟ್ಟು ದೊಣ್ಣೆಯಿಂದ ಹೊಡೆದು ಹರಿಯುವ ನೀರಿನ ತೋಡಿಗೆ ತಳ್ಳಿ ಸಾಯಿಸಲು ಯತ್ನಿಸಿದ್ದಾನೆ. ಇದೀಗ ಪೊಲೀಸರು ಹೆಣೆದ ಬಲೆಗೆ ಬಿದ್ದು
ಕಾರಾಗೃಹ ಸೇರಿದ್ದಾನೆ. ದೇವರಪುರ, ತಿತಿಮತಿ ಗ್ರಾಮದ ಪಂಜಿರ ಎರವರ ರವಿ (42) ಎಂಬಾತನೇ ತನ್ನ ಕ್ರೂರ ಕ್ರೌರ್ಯಕ್ಕಾಗಿ ಜೈಲು ಪಾಲಾಗಿರುವ ಆರೋಪಿ ಆಗಿದ್ದಾನೆ.
ಪೊಲೀಸರು ಸಕಾಲಿಕವಾಗಿ ನೆರವಿಗೆ ಧಾವಿಸಿ, ಈತನ ಹೀನ ಕೃತ್ಯದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿಗೆ ಚಿಕಿತ್ಸೆ ಕೊಡಿಸುವ ಮೂಲಕ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 11-07-2025 ರಂದು ಸುಮಾರು 5 ವರ್ಷದ ಒಂದು ಹೆಣ್ಣು ಮಗು ಮೈ ಕೈ ಗಾಯಗೊಂಡು ಬಿಳಿಗೆರೆ ಸಮೀಪ ಒಂಟಿಯಾಗಿ ನಿಂತಿದ್ದಳು. ಈ ಬಗ್ಗೆ ತುರ್ತು ಸಹಾಯವಾಣಿ ಸಂಖ್ಯೆ 112 ಕ್ಕೆ ಕರೆ ಸ್ವೀಕರಿಸಿದ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಮಗುವನ್ನು ರಕ್ಷಿಸಿ ಜಿಲ್ಲಾಸ್ಪತ್ರೆ ಮಡಿಕೇರಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ದಿನಾಂಕ 14-07-2025 ರಂದು ಮಡಿಕೇರಿಯ ಸರ್ಕಾರಿ “ಮಡಿಲು” ಕೇಂದ್ರಕ್ಕೆ ಸೇರಿಸಿದ್ದಾರೆ.
*5 ವರ್ಷದ ಮಗುವಿನ ಮೈ ಕೈ ಸುಟ್ಟು ತೋcಡಿಗೆ ತಳ್ಳಿದ್ದ:*
ಪೊಲೀಸರು ದಿನಾಂಕ 14-07-2025 ರಂದು ಈ ಮಗುವಿನ ತಾಯಿ ಪಣಿ ಎರವರ ಭಾಗ್ಯರವರನ್ನು ಪತ್ತೆ ಮಾಡಿ ತನ್ನ ಮಗಳ ಭೇಟಿ ಮಾಡಿಸಿದ್ದಾರೆ. ಮಗುವಿನ ಮೂಗು, ಹಣೆ ಎರಡೂ ಮೈ, ಕೈ ಮತ್ತು ಕಾಲುಗಳ ಮೇಲೆ ಸುಟ್ಟ ಗಾಯಗಳಾಗಿದ್ದು ಕಂಡು ಬಂದಿದೆ. ಮಗಳನ್ನು ವಿಚಾರಿಸಿದಾಗ, ತಂದೆ ರವಿ ಬೆಂಕಿಯಿಂದ ಸುಟ್ಟು, ದೊಣ್ಣೆಯಿಂದ ಹೊಡೆದು “ನಿನ್ನನ್ನು ಸಾಯಿಸುತ್ತೇನೆ” ಎಂದು ಹೇಳಿ ನೀರಿನ ತೋಡಿಗೆ ತಳ್ಳಿ ಹೋಗಿದ್ದು, ನಂತರ ತೋಡಿನಿಂದ ಎದ್ದು ರಸ್ತೆಯಲ್ಲಿ ನಿಂತಿದ್ದಾಗ ನನ್ನನ್ನು ಪೊಲೀಸರು ಅಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಮಾಡಿಸಿರುತ್ತಾರೆ ಎಂದು ತಿಳಿಸಿದ್ದಾಳೆ.
ಹೀಗಾಗಿ ಮಗುವಿನ ಕೈ ಮೈ ಬೆಂಕಿಯಿಂದ ಸುಟ್ಟು ಹಾಗೂ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುವ ಪಂಜರಿ ಎರವರ ರವಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸ್ವೀಕರಿಸಿದ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 115(2), 118(1), 109 BNS ಕಾಯ್ದೆ 2023 ಮತ್ತು 75 ಜೆ.ಜೆ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

*ಮತ್ತೊಬ್ಬಳನ್ನು ದೊಣ್ಣಯಿಂದ ಥಳಿಸಿ ಕೊಂದಿದ್ದ:*
ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ರುದ್ರಗುಪ್ಪೆ ಗ್ರಾಮದ ನಿವಾಸಿ ಕಳ್ಳಿಯಪ್ಪಂಡ ಸೋಮಯ್ಯರವರ ಲೈನ್ ಮನೆಯಲ್ಲಿ ವಾಸವಾಗಿರುವ ಪಣಿ ಎರವರ ಭಾಗ್ಯರವರ ಎರಡನೇ ಗಂಡನಾದ ಆರೋಪಿ ಪಣಿ ಎರವರ ರವಿ, ಮಂಚಳ್ಳಿ ಗ್ರಾಮದ ಲೈನ್ ಮನೆಯಲ್ಲಿ ವಾಸವಿದ್ದಾಗ ಒಂದು ತಿಂಗಳ ಹಿಂದೆ ಭಾಗ್ಯಳ ಮೊದಲನೇ ಗಂಡನ ಮತ್ತೊಬ್ಬಳು ಹೆಣ್ಣು ಮಗುವನ್ನು ದೊಣ್ಣೆಯಿಂದ ಹೊಡೆದು ಕೊಂದಿರುವ ಬಗ್ಗೆ ಕೂಡ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಾದ ಹಿನ್ನೆಲೆ, ಕುಟ್ಟ ಪೊಲೀಸ್ ಠಾಣೆಯಲ್ಲಿ ಕಲಂ 103(1), 238(ಎ) BNS ಕಾಯ್ದೆ 2023ರ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಈ ಎರಡು ಪ್ರಕರಣಗಳ ತನಿಖೆಗಾಗಿ ವಿರಾಜಪೇಟೆ ಉಪ ವಿಭಾಗ ಡಿ.ಎಸ್.ಪಿ ಮಹೇಶ್ ಕುಮಾರ್ ಮತ್ತು ಮಡಿಕೇರಿ ಉಪ ವಿಭಾಗ ಡಿ.ಎಸ್.ಪಿ. ಸೂರಜ್, ಕುಟ್ಟ ವೃತ್ತ ನಿರೀಕ್ಷಕ ಶಿವರುದ್ರ, ಮಡಿಕೇರಿ ಮತ್ತು ಉಪ ವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ 19-07-2025 ರಂದು ದೇವರಪುರ ತಿತಿಮತಿ ನಿವಾಸಿ ಆರೋಪಿ ಪಂಜರಿ ಎರವರ ರವಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು