1:47 PM Sunday20 - July 2025
ಬ್ರೇಕಿಂಗ್ ನ್ಯೂಸ್
ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ… ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ… Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ… ಮಂಗಳೂರು – ಬೆಂಗಳೂರು 4 ತಾಸಿನ ಆಂಬುಲೆನ್ಸ್ ಪ್ರಯಾಣ!: ಹೃದಯ ಕಾಯಿಲೆಯ 14… ವಿದ್ಯುತ್ ಶಾಕ್: ಲೈನ್ ಮ್ಯಾನ್ ದಾರುಣ ಸಾವು; ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ… ರಾಹುಲ್ ಗಾಂಧಿಯ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು ಭಾರೀ ಮಳೆ: ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ: ಶಾಲೆ- ಕಾಲೇಜುಗಳಿಗೆ ನಾಳೆಯೂ… ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ…

ಇತ್ತೀಚಿನ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ಆರೋಪ: ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ವಿರುದ್ಧ ಎಫ್ ಐಆರ್

20/07/2025, 11:35

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಪೂಮಾಲೆ ವಾರಪತ್ರಿಕೆ ಸಂಪಾದಕ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರು,
ವಾಟ್ಸಪ್ ಗ್ರೂಪ್ ಗಳಲ್ಲಿ ವೈಯಕ್ತಿಕ
ದ್ವೇಷದಿಂದ ಮಾನಹಾನಿಕಾರಕವಾಗಿ ನನ್ನನ್ನು ಚಿತ್ರಿಸಿ ತೇಜೋವಧೆ ಮಾಡಿದ್ದಾರೆ” ಎಂದು ಆರೋಪಿಸಿ ಬ್ರಹ್ಮಗಿರಿ ವಾರಪತ್ರಿಕೆ ಉಪ ಸಂಪಾದಕಿ ಉಳ್ಳಿಯಡ ಡಾಟಿ ಪೂವಯ್ಯ ಅವರು ಮಡಿಕೇರಿ ಮಹಿಳಾ ಪೊಲೀಸ್ ಠಾಣೆಗೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅಜ್ಜನಿಕಂಡ ಮಹೇಶ್ ನಾಚಯ್ಯರವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

*ದೂರಿನಲ್ಲಿ ಏನಿದೆ;?*
ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಪೂಮಾಲೆ ವಾರಪತ್ರಿಕೆ ಸಂಪಾದಕ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರು, ವೈಯಕ್ತಿಕ ದ್ವೇಷ ಎಂಬಂತೆ ಮಾನಹಾನಿ ಮಾಡುವ ಉದ್ದೇಶದಿಂದ 06-07-2025 ರಂದು ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗುಂಪುಗಳಲ್ಲಿ ಹಾಗೂ ಬೇರೆಯವರ ವಾಟ್ಸಪ್ ನಂಬರ್ ಗಳಿಗೆ ಕೊಡವ ಭಾಷೆಯಲ್ಲಿ ತೀರಾ ಆಕ್ಷೇಪಣೆಕಾರಿಯಾಗಿಯೂ ಮತ್ತು ಆಘಾತಕಾರಿಯಾಗಿಯೂ ಟಿಪ್ಪಣಿ ಬರೆದು, ಸುಮಾರು ಇಪ್ಪತ್ತು ವರ್ಷದ ಹಿಂದೆ ಆಗಿ ಹೋದ ಘಟನೆಯನ್ನೂ, ಅಂದು ನ್ಯಾಯಾಲಯ ನಿರಪರಾಧಿ ಎಂದು ಘೋಷಿಸಿರುವುದನ್ನು ಲೆಕ್ಕಿಸದೆ ವ್ಯಾಪಕ ಪ್ರಚಾರ, ತೇಜೋವಧೆ ಮಾಡಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತೆ ಮಾಡಿರುತ್ತಾರೆ. ತಪ್ಪಿತಸ್ಥೆ ಅಲ್ಲವೆಂದು ಮಡಿಕೇರಿ ನ್ಯಾಯಾಲಯವು ತೀರ್ಪು ಹೊರಡಿಸಿರುವುದನ್ನು ಮರೆಮಾಚಿ
ಅಂದು ಕುತಂತ್ರಿಗಳು ಅರೋಪಿಸಿದ್ದ ಹಳೇ ವದಂತಿಗಳನ್ನು ಫೋಟೋ ಸಮೇತ ಪ್ರಕಟಿಸಿ ಎಲ್ಲ ಗ್ರೂಪ್ ಗಳಿಗೆ ಹರಡಿ ಆರೋಪ, ಅಸಹ್ಯಕರ ಲೈಂಗಿಕ ಛಾಯೆ ಬರುವಂತಹ ಶಬ್ದ ಬಳಸಿ ಆಕ್ಷೇಪವಾದ ವಾಕ್ಯಗಳನ್ನು ದುರುದ್ದೇಶದಿಂದ ಬಳಸಿ ಲೈಂಗಿಕವಾಗಿ ಬಣ್ಣದ ಟೀಕೆಗಳ ಪದಗಳನ್ನು ಉಪಯೋಗಿಸಿ ಕಿರುಕುಳ ಕೊಟ್ಟಿದ್ದು ಕಳಂಕಿತ ಮಹಿಳೆ ಎಂಬಂತೆ ಬಿಂಬಿಸಿ ಮಾನಸಿಕ ಆಘಾತ ಉಂಟು ಮಾಡಿರುತ್ತಾರೆ. ಇದರಿಂದ ಮಾನಸಿಕವಾಗಿ ಬಹಳಷ್ಟು ನೊಂದು ಕುಗ್ಗಿ ಹೋಗಿರುತ್ತೇನೆ. ಆದ್ದರಿಂದ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಡಾಟಿ ಪೂವಯ್ಯ ಅವರು ಮಡಿಕೇರಿ ಮಹಿಳಾ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಕೋರಿದ್ದಾರೆ.
ಇವರ ಪುಕಾರನ್ನು ದಾಖಲಿಸಿಕೊಂಡಿರುವ ಪೊಲೀಸರು, ಮಹೇಶ್ ನಾಚಯ್ಯರವರ ವಿರುದ್ಧ BNS 2023 ರ ಸೆಕ್ಷನ್ 75(1) (iv) ಅಡಿಯಲ್ಲಿ FIR ದಾಖಲಿಸಿಕೊಂಡು ಪ್ರಿನ್ಸ್ಪಲ್ ಸಿವಿಲ್ ಜಡ್ಜ್ (ಜೂನಿಯರ್ ಡಿವಿಷನ್ ಮತ್ತು JMFC ಮಡಿಕೇರಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು