ಇತ್ತೀಚಿನ ಸುದ್ದಿ
ಎದೆಯ ಮೇಲೆ ಕುಳಿತು ಪತಿಯ ಅಣ್ಣನ ಮಗನಿಂದ ಹಲ್ಲೆ: ಚಿಕ್ಕಮ್ಮಆಸ್ಪತ್ರೆಗೆ ದಾಖಲು
19/07/2025, 21:42

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಪೊನ್ನಂಪೇಟೆ ತಾಲ್ಲೂಕಿನ ಬೆಸಗೂರು ಗ್ರಾಮದಲ್ಲಿ ಪತಿಯ ಅಣ್ಣನ ಮಗನಿಂದ ಚಿಕ್ಕಮ್ಮಳ ಮೇಲೆ ಗುದ್ದಲಿ ಯಿಂದ ಹಲ್ಲೆ ಮಾಡಿದ ಘಟನೆ ಸಂಭಾವಿಸಿದೆ.ಅರಮಣಮಾಡ ಬಾಗು (56) ಎಂಬುವರ ಮೇಲೆ ಪುತ್ರ ಸಮನನಾದ ಸಚಿನ್ ಗದ್ದೆಗೆ ತೆರಳುವ ಮಾರ್ಗ ಮಧ್ಯೆ
ಎದೆ ಮೇಲೆ ಕುಳಿತು ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ಗಾಯಾಳು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಇವರ ಸ್ವಂತ ಪುತ್ರ ಸೇನೆಯಲ್ಲಿರುವ ಕಾರಣ ಬೆಂಗಳೂರಿನ ಸೇನಾ ಆಸ್ಪತ್ರೆಗೆ ಸಾಗಿಸಿ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿದ್ದು, ಕೃತ್ಯ ಬಳಿಕ ಪರಾರಿಯಾಗಿರುವ ಸಚಿನ್ ನ ಶೋಧ ಕಾರ್ಯ ನಡೆಸಲಾಗುತ್ತಿದೆ.