ಇತ್ತೀಚಿನ ಸುದ್ದಿ
ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ ಡಿಕ್ಕಿ: ವಾಹನ ನಿಯಂತ್ರಿಸಲು ಪೊಲೀಸರ ಹರಸಾಹಸ
19/07/2025, 20:01

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಈ ಮಧ್ಯೆ ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮತ್ತು ಜೀಪ್ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಕಾರು-ಬೈಕ್-ಟಿಟಿ ಸೇರಿ 1850 ವಾಹನಗಳು ಗಿರಿಭಾಗಕ್ಕೆ ಆಗಮಿಸಿವೆ. ಅಪಘಾತದಲ್ಲಿ ಕಾರು-ಜೀಪ್ ನ ಮುಂಭಾಗ ಜಖಂಗೊಂಡಿದೆ. ಕಾರು ಮುಳ್ಳಯ್ಯನಗಿರಿಯಿಂದ ಕೆಳಗೆ ಇಳಿಯುವಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.
ಅದೃಷ್ಟವಶಾತ್ ಯಾರಿಗೂ ಯಾವುದೇ ಅನಾಹುತ ಸಂಭವಿಸಿಲ್ಲ. ಗಿರಿಯಲ್ಲಿ ವಾಹನ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ವಾಹನಗಳನ್ನು ನಿಯಂತ್ರಿಸಲಾಗದೆ 2 ಗಂಟೆಗಳ ಕಾಲ ವಾಹನಗಳನ್ನು ಪೊಲೀಸರು ಸ್ಟಾಪ್ ಮಾಡಬೇಕಾಯಿತು. ಗಿರಿಯಲ್ಲಿ ವಾಹನಗಳು ಕಡಿಮೆ ಆದ ಮೇಲೆ ಮತ್ತೆ ವಾಹಕಗಳನ್ನು ಬಿಡಲಾಯಿತು. ಸುರಿಯುತ್ತಿರೋ ಮಳೆ ಮಧ್ಯೆ ವಾಹನ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.