ಇತ್ತೀಚಿನ ಸುದ್ದಿ
ವಿದ್ಯುತ್ ಶಾಕ್: ಲೈನ್ ಮ್ಯಾನ್ ದಾರುಣ ಸಾವು; ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಪವರ್ ಮ್ಯಾನ್
18/07/2025, 19:46

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ವಿದ್ಯುತ್ ಶಾಕ್ ನಿಂದ ಯುವ ಲೈನ್ ಮ್ಯಾನ್ ಸಾವನ್ನಪ್ಪಿದ ದಾರುಣ ಘಟನೆ ಎನ್.ಆರ್. ಪುರ ತಾಲೂಕಿನ ಹೊನ್ನೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಪ್ರವೀಣ್ (26) ಮೃತ ದುರ್ದೈವಿ. ಕಳೆದ ಒಂದೂವರೆ ತಿಂಗಳ ಹಿಂದಷ್ಟೆ ಪ್ರವೀಣ್ ಅವರ ಮದುವೆಯಾಗಿತ್ತು.
ವಿದ್ಯುತ್ ಲೈನ್ ದುರಸ್ತಿಗೆ ಕಂಬ ಹತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕಂಬ ಹತ್ತಿ ಫ್ಯೂಸ್ ಹಾಕುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಕೆಳಗೆ ಬಿದ್ದು ಒದ್ದಾಡುತ್ತಿದ್ದ ಪ್ರವೀಣ್ ಅವರನ್ನು ಸ್ಥಳಿಯರು ಹಾಗೂ ಸಿಬ್ಬಂದಿಗಳು ಸೇರಿ ಆಸ್ಪತ್ರೆಗೆ ಸಾಗಿಸಿದರೂ ತೀವ್ರ ಅಸ್ವಸ್ಥತನಾಗಿದ್ದ ಪ್ರವೀಣ್ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.
ಮೂಲತಃ ಬಾಗಲಕೋಟೆಯವರಾದ ಪ್ರವೀಣ್ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಈ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕಡಬಗೆರೆ ಸಮೀಪದ ಹೊನ್ನೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.