7:00 PM Friday5 - September 2025
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ ಕೊಡಗು ಗೌಡ ಸಮಾಜಕ್ಕೆ ಸುಳ್ಯದ ಕುರುಂಜಿ ವೆಂಕರಮಣ ಗೌಡ ಕುಟುಂಬದಿಂದ 3.5… ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ Mysore | ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಬಾನು ಮಸ್ತಾಕ್… ಜಿಎಸ್ ಟಿ ಸರಳೀಕರಣ ಗ್ರಾಹಕ ಸ್ನೇಹಿ ತೀರ್ಮಾನ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮುಳ್ಳಯ್ಯನಗಿರಿ, ದತ್ತಪೀಠ ಮಾರ್ಗದಲ್ಲಿ ರಸ್ತೆ ಕುಸಿತದ ಭೀತಿ: ಸೆ. 14ವರೆಗೆ ಪ್ರವಾಸ ಮುಂದೂಡುವಂತೆ… ದಾವಣಗೆರೆಯಲ್ಲಿ ಎಸ್‌ಎಸ್ ಕೇರ್ ಟ್ರಸ್ಟ್ ವಿದ್ಯಾರ್ಥಿ ವಿಭಾಗದ “ಆರಂಭ”ಕ್ಕೆ ಚಾಲನೆ ಅಕ್ರಮ ಮಾದಕ ವಸ್ತು ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್: 2… ಸೌಜನ್ಯ ಪ್ರಕರಣ | ಸುಪ್ರೀಂಕೋರ್ಟ್ ಮೊರೆ ಹೋದರೆ ಸಂಪೂರ್ಣ ಬೆಂಬಲ: ಬಿಜೆಪಿ ರಾಜ್ಯಾಧ್ಯಕ್ಷ… ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್… ಕೊಡಗಿನಾದ್ಯoತ ಕೈಲೂ ಮುಹೂರ್ತ ಹಬ್ಬ ಸಂಭ್ರಮ: ಮಾಂಸ ಖರೀದಿ ಜೋರು

ಇತ್ತೀಚಿನ ಸುದ್ದಿ

ರಾಹುಲ್ ಗಾಂಧಿಯ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯ

18/07/2025, 19:25

ಗದಗ(reporterkarnataka.com): ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಯಾರಿಗೆ ನ್ಯಾಯ ಕೊಟ್ಟರು ಯಾರಿಗೂ ಗೊತ್ತಿಲ್ಲ. ಅವರ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ ಕೊಟ್ಟಿದ್ದಾರೆ. ಅವರಿಗೆ ಶುಭವಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಐಸಿಸಿ ಹಿಂದುಳಿದ ವರ್ಗಗಳ ಸಮಿತಿಯಿಂದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಗೆ ನ್ಯಾಯ ಯೋಧ ಬಿರುದು ಕೊಟ್ಟಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರು ಯಾರಿಗೆ ನ್ಯಾಯ ಕೊಟ್ಟರು ಯಾರಿಗೂ ಗೊತ್ತಿಲ್ಲ. ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ ಕೊಟ್ಟಿದ್ದಾರೆ. ಅವರಿಗೆ ಶುಭವಾಗಲಿ ಎಂದರು.
ಏರೋ ಸ್ಪೇಸ್ ಉದ್ಯಮಕ್ಕೆ ಆಂಧ್ರಪ್ರದೇಶ ಸರ್ಕಾರ ಆಹ್ವಾನದ ಕುರಿತು ಕೇಳಿದ ಪ್ರಶ್ನೆಗೆ ಏರೋಸ್ಪೇಸ್ ಟೆಕ್ನಾಲಜಿ ಕಳೆದ ಆರೇಳು ದಶಕದಿಂದ ಕರ್ನಾಟದಲ್ಲಿದೆ. ಕರ್ನಾಟಕ ಬಿಟ್ಟು ಏರೋಸ್ಪೇಸ್ ಟೆಕ್ನಾಲಜಿ ಉದ್ಯಮ ಹೋಗುವುದಿಲ್ಲ ಎಂದರು
ಮಾಜಿ ಸಚಿವರಾದ ಬಿ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿಯವರನ್ನು ಒಂದು ಮಾಡಲಾಗುತ್ತಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರನ್ನು ಒಂದು ಮಾಡುವ ಅಗತ್ಯ ಇಲ್ಲ. ಅವರು ಮೊದಲಿನಿಂದಲೂ ಒಂದೇ ಇದ್ದಾರೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು