ಇತ್ತೀಚಿನ ಸುದ್ದಿ
Kodagu | ಬೈಲಕುಪ್ಪೆ ಟಿಬೇಟಿಯನ್ ಕ್ಯಾಂಪ್ ಬಳಿ ಬ್ರೌನ್ ಶುಗರ್ ಮಾರಾಟ ಯತ್ನ: 4 ಮಂದಿ ಬಂಧನ
18/07/2025, 10:57

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ ಸಮೀಪದ ಬೈಲಕುಪ್ಪೆ ಟಿಬೇಟಿಯನ್ ಕ್ಯಾಂಪ್ ವ್ಯಾಪ್ತಿಯಲ್ಲಿ ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದ ಕುಶಾಲನಗರದ ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರನ್ನು ಬೈಲಕುಪ್ಪೆ ಪೊಲೀಸರು ಬಂಧಿಸಿದ್ದಾರೆ. ಕುಶಾಲನಗರದ ಕಿಶನ್ (22), ವಿದ್ಯಾರ್ಥಿಗಳಾದ ಉಲ್ಲಾಸ್ (22) ಮತ್ತು ಚೆರೀಶ್ (22) ಹಾಗೂ ಮೈಸೂರಿನ ಮೇಟ ಗಳ್ಳಿ ನಿವಾಸಿ ಅಖಿಲೇಶ್ (22) ರನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಬೈಲಕುಪ್ಪೆ ಪೊಲೀಸ್ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ರವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಬಂಧಿತರಿಂದ ಬೆಂಗಳೂರಿನಿಂದ ಸರಬರಾಜು ಆಗಿದ್ದ 8 ಗ್ರಾಂ ಬ್ರೌನ್ ಶುಗರ್ ಟಿಬೇಟಿಯನ್ ವ್ಯಕ್ತಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.