ಇತ್ತೀಚಿನ ಸುದ್ದಿ
ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು
17/07/2025, 19:12

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@gmail.com
ಕೊಡಗಿನಲ್ಲಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯ ಬಿರುಸುಗೊಂಡಿದ್ದು, ಎರಡು ದಿನದ ಹಿಂದೆಯಷ್ಟೇ ತಿತಿಮತಿ ಭಾಗದಿಂದ ಯಶಸ್ವಿಯಾಗಿ ದೊಡ್ಡ ಗಾತ್ರದ ಹಿಂಡುವೊಂದನ್ನು ಕಾಡಿಗೆ ಅಟ್ಟಿದ್ದ ಬೆನ್ನಲ್ಲೇ ಇಂದು ಮರಿಗಳು ಇರುವ ಮತ್ತೊಂದು ತಂಡವನ್ನು ಕಾಡಿಗೆ ಅಟ್ಟಲಾಯಿತು.
ಶಾಸಕ ಎ. ಎಸ್. ಪೊನ್ನಣ್ಣ ಸೂಚನೆ ಹಿನ್ನಲೆ ಮಾಯಮುಡಿ, ತಿತಿಮತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಆನೆಗಳನ್ನು ಗ್ರಾಮ ವ್ಯಾಪ್ತಿಯಿಂದ ಕಾಡಿಗೆ ಅಟ್ಟುವ ಕಾರ್ಯಚರಣೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.