ಇತ್ತೀಚಿನ ಸುದ್ದಿ
Madikeri | ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಭಾರಿ ವಾಹನ ಸಂಚಾರ:12 ಲಾರಿಗಳು ವಶ
14/07/2025, 20:19

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಳೆಯಿಂದ ಭೂಕುಸಿತ ಸಾಧ್ಯತೆ ಹಿನ್ನಲೆ ಮುಂಜಾಗ್ರತ ಕ್ರಮವಾಗಿ ಕೊಡಗು ಜಿಲ್ಲೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಹೊರಡಿಸಿದ್ದ ಆದೇಶ ಉಲ್ಲoಘಿಸಿ ರಾತ್ರಿ ವೇಳೆಯಲ್ಲಿ ಮಡಿಕೇರಿಗೆ ಆಗಮಿಸಿದ ಲಾರಿಗಳನ್ನು ಪೊಲೀಸರು, ಆರ್.ಟಿ.ಓ ಅಧಿಕಾರಿಗಳು ವಶಕ್ಕೆ ಪಡೆದು ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ.
ಜುಲೈ 6 ರಿಂದ ಆಗಸ್ಟ್ 5ರ ವರೆಗೆ ಭಾರಿ ವಾಹನಗಳ ನೋಂದಣಿ ತೂಕ 18,500 ಕೆಜಿ ಗಿಂತ ಹೆಚ್ಚಿನ ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ವೆಂಕಟ ರಾಜ್ ಆದೇಶ ಹೊರಡಿಸಿದ್ದಾರೂ ಮಡಿಕೇರಿ ಮಾರ್ಗವಾಗಿ ಮಂಗಳೂರು ಹಾಸನ, ಮೈಸೂರು ಭಾಗಕ್ಕೆ ತೆರಳುತ್ತಿದ್ದ 12 ವಾಹನಗಳ ಮೇಲೆ ಕ್ರಮ ಉಂಟಾಗಿದೆ.ಚೆಕ್ ಪೋಸ್ಟ್ ಗಳಲ್ಲಿ ಜಿಲ್ಲಾಡಳಿತ ಆದೇಶದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಆದ್ರೂ ಕೆಲವು ಲಾರಿ ಗಳು ಹೆದ್ದಾರಿ ಪ್ರವೇಶ ಮಾಡುತ್ತಿರುವ ಬಗ್ಗೆ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತ ಅದೇಶಿಸಿದೆ.