6:58 PM Saturday22 - November 2025
ಬ್ರೇಕಿಂಗ್ ನ್ಯೂಸ್
ಮಂಡ್ಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಆಯ್ಕೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಾಟ: ಸ್ಥಳೀಯರ ತೀವ್ರ ಆಕ್ಷೇಪ; ಮೌನ ವಹಿಸಿದ… ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ

ಇತ್ತೀಚಿನ ಸುದ್ದಿ

ಆರಗ ಜ್ಞಾನೇಂದ್ರ ಅವರು ವಿವೇಚನೆ ಇಲ್ಲದೆ ಅಧಿಕಾರಿಗಳ ಜೊತೆಗೆ ಏಕವಚನದಲ್ಲಿ ಮಾತನಾಡುತ್ತಾರೆ: ಕಿಮ್ಮನೆ ರತ್ನಾಕರ್

14/07/2025, 19:23

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳ ಜೊತೆಗೆ ಮಾತನಾಡುವ ರೀತಿ ತೀರಾ ಧೋರಣೆಯಿಂದ ಕೂಡಿದ್ದಾಗಿದೆ. ಏಕವಚನದಲ್ಲಿ ಮಾತನಾಡುವಂತಹದ್ದು, ಅಧಿಕಾರಿಗಳಿಗೆ ಬಯ್ಯುವಂತಹದ್ದು, ದಲಿತ ಸಮಾಜಕ್ಕೆ ಸೇರಿದ ಪಪಂ ಮುಖ್ಯ ಅಧಿಕಾರಿಗೆ ಬೈದಿದ್ದಾರೆ. ಅದು ಯಾವುದೊ ಒಳ್ಳೆಯ ಕೆಲಸಕ್ಕೆ ಆದರೆ ಬೇಸರವಿಲ್ಲ ಅದನ್ನು ಬಿಟ್ಟು ತಮ್ಮ ಬಿಜೆಪಿ ಕಾರ್ಯಕರ್ತರಿಗಾಗಿ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಸೋಮವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಾರ್ವಜನಿಕರ ಎದುರು ಓರ್ವ ಅಧಿಕಾರಿಗೆ ಹೊಟ್ಟೆಗೆ ಏನು ತಿನ್ನುತ್ತಿಯ ಎಂದು ಏಕ ವಚನದಲ್ಲಿ ಮಾತನಾಡುತ್ತಾರೆ. ವಿವೇಚನೆ ಇಲ್ಲದೆ ಮಾತನಾಡುತ್ತಾರೆ. ಅವರ ಸರ್ಕಾರ ಹಾಗೆ ಮಂತ್ರಿ ಇದ್ದಾಗ ಮಾತನಾಡುವುದು ಬೇರೆ ಆದರೆ ಈಗ ತಮಗೆ ಬೇಕಾದ ಹಾಗೆ ಮಾತನಾಡುವುದು ಸರಿಯಲ್ಲ, ಸರ್ಕಾರಿ ಕಾರ್ಯಕ್ರಮದಲ್ಲಿ ತಮ್ಮ ಪಕ್ಕದಲ್ಲಿ ಯಾರನ್ನೋ ತಂದು ಕೂರಿಸಿಕೊಳ್ಳುತ್ತಾರೆ. ನಾವು ಯಾವತ್ತೂ ಆ ರೀತಿ ಮಾಡಿಲ್ಲ. ಇವರ ಜೊತೆಗೆ ಇದ್ದವರು ಅಷ್ಟೇ ಮರ್ಯಾದೆ ಇಲ್ಲದೆ ಹೋಗಿ ಕೂರುತ್ತಾರೆ. ನಾವು ಅಧಿಕಾರಿಗಳಿಗೆ ಕಂಪ್ಲೇಂಟ್ ಮಾಡಲು ಹೇಳಿದ್ದೇನೆ ಇಲ್ಲದಿದ್ದರೆ ನಾವೇ ಕಂಪ್ಲೇಂಟ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
*ಆಸ್ಪತ್ರೆಯಲ್ಲಿ ಪ್ರತಿಭಟನೆ ಮಾಡುವ ಅವಶ್ಯಕತೆ ಏನಿತ್ತು?:* ಪಕ್ಷಾತೀತವಾಗಿ ಎಂದಿದ್ದಕ್ಕೆ ನಮ್ಮವರು ಹೋಗಿದ್ದಾರೆ. ಆದರೆ ನಾವು ಪಕ್ಷಾತೀತವಾಗಿ ಎಂದು ಪ್ರತಿಭಟನೆಗೆ ಕರೆದರೆ ಬರುತ್ತಾರಾ? ಬಿಜೆಪಿ ಅವರಿಗೆ ಮೋಸ ಮಾಡುವುದು ಹೇಳಿಕೊಡಬೇಕಾಗಿಲ್ಲ, ಆಸ್ಪತ್ರೆಯಲ್ಲಿ ದಶಕಗಳಿಂದ ಇರುವ ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ. 48 ಗಂಟೆಯಾದರೂ ಬೇರೆ ವೈದ್ಯರು ಬಂದಿಲ್ಲ ಎಂದಾದರೆ ಪ್ರತಿಭಟನೆ ಮಾಡಿದ್ದರೆ ನಾನೆ ಸಹಕಾರ ನೀಡುತ್ತಿದ್ದೆ. ಆದರೆ ಅಷ್ಟೊಂದು ತಾರಾತುರಿ ಏನಿತ್ತು ಗೊತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಶಚಿಂದ್ರ ಹೆಗಡೆ, ಮುಡುಬಾ ರಾಘವೇಂದ್ರ, ರಹಮತ್ ಉಲ್ಲಾ ಆಸಾದಿ, ಡಾ. ಸುಂದರೇಶ್, ಗೀತಾ ರಮೇಶ್, ಶಬನಮ್, ಮಂಜುಳಾ ನಾಗೇಂದ್ರ, ಸುಶೀಲ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು