11:44 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕಲಾ ಪ್ರಕಾರದಿಂದ ಧರ್ಮಜಾಗೃತಿಯೊಂದಿಗೆ ಆನಂದ: ರಾಷ್ಟ್ರ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್

13/07/2025, 23:52

ಬಂಟ್ವಾಳ(reporterlarnataka.com): ಯಾವುದೇ ಕಲಾ ಪ್ರಕಾರ ಧರ್ಮ ಪ್ರಕಾರ ಧರ್ಮಜಾಗೃತಿಯನ್ನು ಮಾಡಬೇಕು. ಆನಂದವನ್ನು ನೀಡಬೇಕು ಎಂದು ಹಿರಿಯ ಯಕ್ಷಗಾನ ಕಲಾವಿದ ದಶಾವತಾರಿ ರಾಷ್ಟ್ರ ಪ್ರಶಸ್ತಿ ವಿಜೇತ ಕೆ. ಗೋವಿಂದ ಭಟ್ ಹೇಳಿದರು.
ಅವರು ಬಿ.ಸಿ. ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಸಂಸ್ಕಾರ ಭಾರತೀ ದ.ಕ.ಜಿಲ್ಲಾ ಬಂಟ್ವಾಳ ಘಟಕದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ನಟರಾಜ ಪೂಜನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಲೆ ಎಂಬುದು ಅಮೂರ್ತವಾದುದು. ಕಲೆಗಳ ಮೂಲ ಉದ್ದೇಶವಿರುವುದು ಜನರ ಶಾಂತಿ, ಸಮಾಧಾನ. ಯಕ್ಷಗಾನವು ಸೃಜನಶೀಲ ಕಲೆಯಾಗಿದ್ದು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಿದ್ದು, ಸತ್ಯ, ಸಾಕ್ಷತ್ಕಾರವೇ ಕಲೆಯ ಪರಮ ಗುರಿ ಎಂದು ಹೇಳಿದರು.
ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಅಭಿನಂದನಾ ಭಾಷಣ ಮಾಡಿ ಮೇರು ವ್ಯಕ್ತಿತ್ವ ಹಾಗೂ ವಿದ್ವತ್ತು ಹೊಂದಿರುವ ಗೋವಿಂದ ಭಟ್ಟರಿಗೆ ತನ್ನೊಂದಿಗೆ ಇತರ ಕಲಾವಿದರನ್ನೂ ರಂಗದಲ್ಲಿ ಬೆಳೆಸಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷರಾದ ತೇವು ತಾರಾನಾಥ ಕೊಟ್ಟಾರಿ ಮಾತನಾಡಿ, ಸನಾತನ ಹಿಂದೂ ಧರ್ಮದ ಪರಂಪರೆಯೇ ಗುರು- ಶಿಷ್ಯ ಸಂಸ್ಕೃತಿ. ಗುರುವನ್ನು ಮರೆಯದ ಕ್ಷೇತ್ರವಿದ್ದರೆ ಅದು ಕಲಾ ಕ್ಷೇತ್ರ. ಕಲೆಯು ವ್ಯಕ್ತಿಯ ವಿಕಸನದೊಂದಿಗೆ ರಾಷ್ಟ್ರದ ವಿಕಾಸಕ್ಕೆ ಪೂರಕವಾಗಿದೆ. ಧರ್ಮ ಸಂಸ್ಕೃತಿ, ಸಂಸ್ಕಾರವನ್ನು ಸೇವೆ ಮತ್ತು ತ್ಯಾಗದ ಮೂಲಕ ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದರು.
ಪ್ರಮುಖರಾದ ಸಂಘ ಚಾಲಕ ಡಾ. ಬಾಲಕೃಷ್ಣ ಬಿ.ಸಿ.ರೋಡ್, ಉಪಾಧ್ಯಕ್ಷರಾದ ಶಶಿ ಕುಮಾರ್ ಇಂದ್ರ ವೇಣೂರು, ಕೋಶಾಧಿಕಾರಿ ವಿಜಯ ಶೆಟ್ಟಿ ಸಾಲೆತ್ತೂರ್, ಸಂಕಪ್ಪ ಶೆಟ್ಟಿ ಬಿ. ಸಿ.ರೋಡ್, ಜನಾರ್ದನ ಅಮುoಜೆ ಮತ್ತಿತರರಿದ್ದರು.
ಜಿಲ್ಲಾ ಗೌರವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದರು, ಸಂಸ್ಕಾರ ಭಾರತೀ ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ ಸ್ವಾಗತಿಸಿ, ಮಾನಸ ಕಡೆಗೋಳಿ ಸಂಸ್ಕಾರ ಧ್ಯೇಯ ಗೀತೆ ಹಾಡಿದರು, ವಿಜಯ ಶೆಟ್ಟಿ ಸಾಲೆತ್ತೂರು ಸನ್ಮಾನ ಪತ್ರವಾಚಿಸಿದರು, ಜಗದೀಶ ಕಡೆಗೋಳಿ ಧನ್ಯವಾದವಿತ್ತರು, ಮಹಿಮಾ ಬಿ. ರೈ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿ, ಜಗದೀಶ ಕಡೆಗೋಳಿ ವಂದಿಸಿದರು.
ಸೂರಿಕುಮೇರು ಕೆ ಗೋವಿಂದ ಭಟ್ ರೊಡನೆ ಸಂವಾದ ಕಾರ್ಯಕ್ರಮ ನಡೆಯಿತು.
ಆರಂಭದಲ್ಲಿ ಉಪನ್ಯಾಸಕ ಜಯಾನಂದ ಪೆರಾಜೆ ಹಾಗೂ ಡಾ.ವಾರಿಜ ನಿರ್ಬೈಲು ಅವರು ಗಮಕ ಕಾರ್ಯಕ್ರಮ ನಡೆಸಿಕೊಟ್ಟರು.

ಇತ್ತೀಚಿನ ಸುದ್ದಿ

ಜಾಹೀರಾತು