11:46 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಪುದು ಗ್ರಾಮ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಪೀಕರ್ ಖಾದರ್ ಉದ್ಘಾಟನೆ

13/07/2025, 10:58

ಬಂಟ್ವಾಳ(reporterkarnataka.com): ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು ಉದ್ಘಾಟಿಸಿದರು.


ಈ ವೇಳೆ ಮಾತನಾಡಿದ ಅವರು, ತನ್ನನ್ನು ಶಾಸಕನಾಗಿ, ಸಚಿವನಾಗಿ, ವಿಪಕ್ಷ ಉಪನಾಯಕನಾಗಿ ಹಾಗೂ ವಿಧಾನಸಭಾಧ್ಯಕ್ಷನಾಗಿ ಆಯ್ಕೆ ಮಾಡುವಲ್ಲಿ ಪುದು ಗ್ರಾಮಸ್ಥರ ಸಹಕಾರ ವಿಶೇಷವಾಗಿದ್ದು, ಪ್ರಸ್ತುತ ಗ್ರಾಮಕ್ಕೆ ೨.೧೦ ಕೋಟಿ ರೂ. ಅನುದಾನ ನೀಡಿ ಶೀಘ್ರ ಅದರ ಕಾಮಗಾರಿಗಳು ಆರಂಭಗೊಳ್ಳಲಿದೆ. ೨೪ ಗಂಟೆಯೂ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿಯೂ ಕೊನೆಯ ಹಂತದಲ್ಲಿದೆ ಎಂದರು.
ಸ್ಥಳೀಯ ಸಾಮಾಜಿಕ ಮುಂದಾಳು ಅಬೂಬಕ್ಕರ್ ಕುಂಜತ್ಕಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ, ಗ್ರಾ.ಪಂ.ಉಪಾಧ್ಯಕ್ಷ ಇಕ್ಬಾಲ್ ಸುಜೀರು, ಮಾಜಿ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ, ಮೊಹಮ್ಮದ್ ಹನೀಫ್, ತ್ವಾಹ ಜುಮಾ ಮಸೀದಿ ಅಧ್ಯಕ್ಷ ಎಸ್.ಹಸನಬ್ಬ, ಧರ್ಮಗುರು ರಹಮಾ ಶಾಫಿ ಕೊಡಗು, ಮಾಜಿ ತಾ.ಪಂ.ಸದಸ್ಯ ಇಕ್ಬಾಲ್ ದರ್ಬಾರ್, ಗ್ರಾ.ಪಂ.ಸದಸ್ಯರಾದ ಅಬೂಬಕ್ಕರ್ ನಝೀರ್, ಇಶಾಮ್ ಫರಂಗಿಪೇಟೆ, ರಝಾಕ್ ಅಮ್ಮೆಮಾರ್, ಇಕ್ಬಾಲ್ ಪಾಡಿ, ಹನ್ಸ್ ಅಮ್ಮೆಮಾರ್, ಉದ್ಯಮಿ ಅಬ್ದುಲ್ ರಹಿಮಾನ್, ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಪಿಎಸ್‌ಐ ಸುತೇಶ್ ಕೆ.ಪಿ, ಪ್ರಮುಖರಾದ ಮಹಮ್ಮದ್ ಬುಕಾರಿ, ನಜೀರ್ ಎನ್.ಎಂ, ನಿಜಾಮ್, ಶಾಕೀರ್, ಇಸ್ಮಾಯಿಲ್ ಐ.ಕೆ., ಅಬೂಬಕ್ಕರ್ ಸಿದ್ದೀಕ್, ಇಸ್ಮಾಯಿಲ್ ಕುಂಜತ್ಕಳ, ಲತೀಫ್ ಕರ್ಮಾರ್, ಶರೀಫ್, ನಿಶಾರ್, ಖಾಲಿದ್, ಸಫ್ವಾನ್ ಮೊದಲಾದವರಿದ್ದರು.
ಕೆ. ಮಹಮ್ಮದ್ ಮುಸ್ತಾಫ ಸ್ವಾಗತಿಸಿದರು. ಇರಾ ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು