ಇತ್ತೀಚಿನ ಸುದ್ದಿ
Chikkamagaluru | ಕಡೂರು ಬಳಿ ಹಾರಾಡುತ್ತಿದ್ದ ನವಿಲು ಸರಕಾರಿ ಬಸ್ಸಿಗೆ ಡಿಕ್ಕಿ: ದಾರುಣ ಸಾವು
12/07/2025, 11:50

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹಾರುತ್ತಿರುವಾಗ ನವಿಲೊಂದು ಸರ್ಕಾರಿ ಬಸ್ಸಿಗೆ ಡಿಕ್ಕಿಯೊಡೆದು ಸಾವನ್ನಪ್ಪಿದ ಘಟನೆ ಕಡೂರು ತಾಲೂಕಿನ ಮಚ್ಚೇರಿ ಬಳಿ ನಡೆದಿದೆ.
ನವಿಲು ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಗಾಜು ಒಡೆದು ಹೋಗಿದೆ. ದುರಾದೃಷ್ಟವಶಾತ್ ನವಿಲು ಕೊನೆಯುಸಿರೆಳೆದಿದೆ.
ಕಡೂರಿನಿಂದ ಬೆಂಗಳೂರಿಗೆ ಹೊರಟಿದ್ದ ಬಸ್ಸಿಗೆ ನವಿಲು ಡಿಕ್ಕಿ ಹೊಡೆದಿದೆ.ನವಿಲು ಕಂಡು ಬಸ್ ತಕ್ಷಣ ಬಸ್ ನಿಲ್ಲಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.