ಇತ್ತೀಚಿನ ಸುದ್ದಿ
ಆಸ್ಟ್ರೇಲಿಯಾದಲ್ಲಿ ಕೊಡಗಿನ ‘ಶೇಡ್ ಕಾಫಿ’ ಯ ಸುವಾಸನೆ: ಡೆಪ್ಯುಟಿ ಕೌನ್ಸಿಲ್ ಜನರಲ್ ಜತೆ ಶಾಸಕ ಮಂತರ್ ಮಾತುಕತೆ
11/07/2025, 17:43

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnatatk@gmail.com
ಹದವಾದ ನೆರಳಿನಲ್ಲಿ ಬೆಳೆಯುವ ಕೊಡಗಿನ ‘ಶೇಡ್ ಕಾಫಿ’ ಯ ಸುವಾಸನೆ ಮತ್ತು ಸ್ವಾದವನ್ನು ವಿಶ್ವ ಸ್ತರದಲ್ಲಿ ಪರಿಚಯಿಸುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿದೆ.
ಇದರ ಭಾಗವಾಗಿ ಕೊಡಗಿನ ಕಾಫಿಗೆ ಆಸ್ಟ್ರೇಲಿಯಾ ದಲ್ಲಿ ಮಾರುಕಟ್ಟೆ ಸೃಷ್ಟಿಸುವ ಚಿಂತನೆಗಳೊಂದಿಗೆ ಮಡಿಕೇರಿ ನಗರದ ಖಾಸಗಿ ಹೊಟೇಲ್ ನಲ್ಲಿ ಬೆಂಗಳೂರಿನ ಆಸ್ಟ್ರೇಲಿಯಾದ ಡೆಪ್ಯುಟಿ ಕೌನ್ಸಿಲ್ ಜನರಲ್ ರವರೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ ಅವರು ಭಾಗವಹಿಸಿ ಮಾತುಕತೆ ನಡೆಸಿ
ದರು.