ಇತ್ತೀಚಿನ ಸುದ್ದಿ
ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ
11/07/2025, 10:16

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ತಾಲೂಕಿನ ಭಾಗದಲ್ಲಿ ಸತತವಾಗಿ ಆನೆಗಳ ದಾಳಿಯಿಂದ ಉಂಟಾಗುತ್ತಿದ್ದ ಬಲಿ ಮತ್ತು ದಾoಧಲೆಯಿಂದ ಅರಣ್ಯ ಇಲಾಖೆಯ ಮೇಲೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದ ಬೆನ್ನಲ್ಲೇ ಅರಣ್ಯ ಇಲಾಖೆಯ ಎಚೆತ್ತುಕೊಂಡು ಕಾರ್ಯಾಚರಣೆಗೆ ಇಳಿದಿದೆ.
ತಿತಿಮತಿ ವ್ಯಾಪ್ತಿಯ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯ ಬಿರುಸುಗೊಂಡಿದೆ. ಒಂದೆಡೆ ಜೀವ ಉಳಿಸಿಕೊಳ್ಳುವ ಭರದಲ್ಲಿ ಓಡೋಡಿ ಬಂದಿರುವ ಕಾಡಾನೆಗಳು ಬೇಲಿಯ ತಂತಿ ಹಾಗೂ ಕಂಬಗಳನ್ನು ತುಳಿದು ಪಲಾಯನಗೈದಿವೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ರಸ್ತೆಗೆ ಅಡ್ಡಲಾಗಿ ಓಡುವ ಸಂದರ್ಭ ಹಲವು ತೋಟಗಳ ಬೇಲಿಗಳು ಪುಡಿಗಟ್ಟಿವೆ, ಇತ್ತ ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೂ ದಾಳಿ ಮಾಡಲು ಮುಂದಾಗಿರುವ ಘಟನೆಗಳು ನಡೆದಿದ್ದು, ಜೀವ ಕೈ ನಲ್ಲಿ ಹಿಡಿದು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕಾರ್ಯಾಚಾರಣೆ ಹಿನ್ನಲೆಯಲ್ಲಿ ಸ್ಥಳೀಯರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮುನ್ಸೂಚನೆ ನೀಡಿದೆ.