10:16 PM Saturday12 - July 2025
ಬ್ರೇಕಿಂಗ್ ನ್ಯೂಸ್
ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು Kodagu | ವಿರಾಜಪೇಟೆ ಕ್ಷೇತ್ರದ 1600 ಆದಿವಾಸಿಗಳಿಗೆ ಜಮೀನು ಹಕ್ಕುಪತ್ರ ವಿತರಣೆಗೆ ಅಸ್ತು:… ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ Bangaluru | ನಾಗರಬಾವಿಯ ವಿಟಿಯು ಹಬ್ ಆ್ಯಂಡ್ ಸ್ಪೋಕ್ ಕೇಂದ್ರ ಉದ್ಘಾಟನೆ: ಕೇಂದ್ರ… SCSP-TSP ಯೋಜನೆ | ಅಧಿಕಾರಿಗಳು ಮೈಮರೆತರೆ ಪ್ರಕರಣ ದಾಖಲು ಗ್ಯಾರಂಟಿ: ಸಚಿವ ಡಾ.… New Delhi | ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ಚಿಕ್ಕಮಗಳೂರಿನ ವಂಶಿ ಮುಖ್ಯಮಂತ್ರಿ… Kodagu | ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು ಮಂಗಳೂರಿನ ಪೆಟ್ರೋಲಿಯಂ ಕಂಪನಿಗಳ ಸಂಬಂಧಿತ ದುರಂತ ನಿರ್ವಹಣೆಗೆ ಅಗ್ನಿಶಾಮಕ ಇಲಾಖೆಯ ಸಶಕ್ತಗೊಳಿಸಲಾಗಿದೆ: ಗೃಹ…

ಇತ್ತೀಚಿನ ಸುದ್ದಿ

ನಂಜ ಈ ಪಣಿ ಮಾಡಿತಾಮಿ ಸಾರೂ: ವಿರಾಜಪೇಟೆ ಶಾಸಕರ ಮುಂದೆ ಕೆದರಿದ ಕೂದಲಿನ, ಕೃಶಕಾಯ ಮಹಿಳೆಯ ಅಳಲು

09/07/2025, 15:46

ತೆನ್ನಿರ ಮೈನಾ ಮಡಿಕೇರಿ ಕೊಡಗು

info.reporterkarnataka@gmail.com

ಕೆದರಿದ ಕೂದಲುಗಳು, ಕಠಿಣ ದುಡಿಮೆಯಿಂದ ಜರ್ಜರಿತವಾದ ಕೃಶಕಾಯ ಶರೀರ.
ಮಾಸಿದ ಬಟ್ಟೆಗಳು ಧರಿಸಿದ ಮಧ್ಯವಯಸ್ಸಿನ ಹೆಣ್ಣು ಮಗಳು ತನ್ನ ಹಾಡಿಯ ಜನರ ನಡುವೆ ಅರ್ಜಿಯೊಂದನ್ನು ಕೈಯಲ್ಲಿ ಹಿಡಿದು
” ನಂಜ ಈ ಪಣಿ ಮಾಡಿತಾಮಿ ಸಾರು”
( ನನ್ನ ಈ ಕೆಲಸವನ್ನು ಮಾಡಿಕೊಡಿ ಸಾರ್)
ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ನವರನ್ನು ವಿನಂತಿ ಮಾಡಿಕೊಂಡಾಗ ಆಕೆಯ ಕಣ್ಣುಗಳನ್ನು ಗಮನಿಸಿದೆ.ಆ ಕಣ್ಣುಗಳಲ್ಲಿ ಆತ್ಮವಿಶ್ವಾಸ ಎದ್ದು ಕಾಣಿಸುತ್ತಿತ್ತು.
ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಸಂತೃಪ್ತಿ ಆಕೆಯ ವದನಗಳ ಹೊಳಪಿನಲ್ಲಿ ಗೋಚರಿಸುತ್ತಿತ್ತು.
ಆಕೆಯ ಅರ್ಜಿಯನ್ನು ಪರಿಶೀಲಿಸಿದ ಪೊನ್ನಣ್ಣ ನವರು ಅಲ್ಲಿಯೇ ಇದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಆ ಮಹಿಳೆಯ ಹಾಡಿಗೆ ಬಂದು ವೀಕ್ಷಿಸಿ
ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ ಬಳಿಕ ಆ ಮಹಿಳೆ ತನ್ನ ಸಂಗಡಿಗರೊಂದಿಗೆ ತೆರಳಿದರು.
ಇದೊಂದು ಸಾಮಾನ್ಯ,ಸಹಜ ವಿಚಾರ.ಆದರೆ ಹಿನ್ನಲೆಯನ್ನು ಅವಲೋಕಿಸಿದಾಗ
ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ.
ನಾಗರೀಕತೆಯ ಉತ್ತುಂಗದಲ್ಲಿರುವ ಈ ಕಾಲಘಟ್ಟದಲ್ಲಿ ನಾಗರೀಕತೆಯನ್ನು ಕಂಡರೆ ದೂರು ಉಳಿಯುವ ಜನರು ಕೊಡಗಿನ ಹಾಡಿಗಳಲ್ಲಿ ವಾಸಿಸುವ ಗಿರಿಜನರು.
ನಾಗರೀಕ ಪ್ರಪಂಚಕ್ಕೂ ತಮಗೂ ಯಾವುದೇ ಸಂಭಂದವಿಲ್ಲಾ ಎಂದೇ ಭಾವಿಸಿ ಅದರಂತೆ ಅಡವಿಯಲ್ಲಿಯೇ ಬದುಕು ಕಟ್ಟಿಕೊಂಡವರು.ಈಗ ಎ.ಎಸ್.ಪೊನ್ನಣ್ಣ ನವರು ಜನಪ್ರತಿನಿಧಿಯಾದ ನಂತರ ನಾಗರೀಕ ಸಮಾಜದ ನಡುವೆ ಅಲ್ಲಿ ಇಲ್ಲಿ ಕಾಣಿಸಲು ಆರಂಭಿಸಿದ್ದಾರೆ.
ಅದಕ್ಕೆ ಕಾರಣವೂ ಇದೆ.ಕಳೆದ ಬಾರಿ ಕ್ಷೇತ್ರ ಪ್ರವಾಸದಲ್ಲಿ ಇದ್ದಾಗ ಪೊನ್ನಣ್ಣ ನವರು ಬುಡಕಟ್ಟು ಮಹಿಳೆಯೊಬ್ಬರನ್ನು ಗೃಹ ಲಕ್ಷ್ಮಿ ಯೋಜನೆಯ 2000 ರೂ ಸಿಕ್ಕಿದೆಯೇ ಎಂದು ವಿಚಾರಿಸಿದ್ದಾರೆ.ಆಕೆ ಇಲ್ಲಾ ಅಂದಾಗ ಅದರ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆಗ ಬೆಳಕಿಗೆ ಬಂದಿದ್ದು ಆಕೆಗೆ ವೋಟರ್ ಐಡಿ,ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ದಾಖಲೆ ಯಾವುದೂ ಇರಲಿಲ್ಲ. ಆಕೆ ಯಾವ ಮನೆಯಲ್ಲಿ ಕೆಲಸ ಮಾಡುತ್ತಿದ್ದಳೋ ಆ ಮನೆ ಯಜಮಾನಿಗೆ ತಿಂಗಳಿಗೆ 2000 ರೂ ಗೃಹಲಕ್ಮಿ ಯೋಜನೆಯಲ್ಲಿ ಸಿಗುತ್ತಿತ್ತು. ಆದರೆ ದಾಖಲೆಗಳು ಇಲ್ಲದೆ ನೈಜ ಫಲಾನುಭವಿಯಾದ ಈ ಬುಡಕಟ್ಟು ಮಹಿಳೆ ಅವಕಾಶದಿಂದ ವಂಚಿತಳಾಗಿದ್ದಳು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊನ್ನಣ್ಣನವರು ಅಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರಿಗೆ ದಾಖಲೆಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ ಹಿನ್ನಲೆಯಲ್ಲಿ ವಿಶೇಷ ಅಭಿಯಾನದಡಿ 1200 ಕ್ಕೂ ಹೆಚ್ಚು ಜನರಿಗೆ ದಾಖಲೆಗಳನ್ನು ಮಾಡಿಕೊಡಲಾಯಿತು. ಅರ್ಥಾತ್ 1200ಕ್ಕೂ ಅಧಿಕ ಜನ ನೈಜ ಭಾರತೀಯರಾಗಿ ಸರ್ಕಾರದ ದಾಖಲೆಗಳಲ್ಲಿ ಸೇರಿದರು.ಈಗ ಅವರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತಾಗಿದೆ.ಈ ಪ್ರಕರಣದ ನಂತರ ಸಂಕೋಚ ಸ್ವಭಾವದ ಹಾಡಿಗಳ ಬುಡಕಟ್ಟು ಜನರು ತಮ್ಮ ಬೇಡಿಕೆಗಳೊಂದಿಗೆ ಪೊನ್ನಣ್ಣ ಬಳಿ ಬರಲು ಆರಂಭಿಸಿದ್ದಾರೆ.
ಪೊನ್ನಣ್ಣ ನವರ ಅಪ್ಯಾಯಮಾನವಾದ ನಡವಳಿಕೆ ಅವರ ಭಾವನೆಗಳನ್ನು ಜಾಗೃತಗೊಳಿಸಿದೆ.
ಮುಕ್ತವಾಗಿ ತಮ್ಮ ಜನಪ್ರತಿನಿಧಿಯನ್ನು ಸಂಪರ್ಕಿಸುವ ಸಲುಗೆ ಅವರಿಗೆ ಬಂದಿದೆ.
ಎ.ಎಸ್.ಪೊನ್ನಣ್ಣ ನವರು ಸರ್ವರಿಗೂ ಸಮಬಾಳು ಸಮಪಾಲು ಎಂಬ ಧ್ಯೇಯದೊಂದಿಗೆ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟವರು.
ಶಾಸಕರಾಗಿ ಕ್ಷೇತ್ರದಲ್ಲಿ ಅಭೂತಪೂರ್ವ ಕೆಲಸ ಮಾಡಿ ಅಭಿವೃದ್ದಿಯ ಹರಿಕಾರರಾಗಿ ಗುರುತಿಸಲ್ಪಟ್ಟಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಪರಿಣಾಮ ಕೋಟ್ಯಂತರ ರೂಗಳ ಅನುದಾನ ತಂದಿದ್ದಾರೆ.ತಮ್ಮ ಪಾಂಡಿತ್ಯ ಮತ್ತು ಸಾಮರ್ಥ್ಯದಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.

ಇವೆಲ್ಲಾ ಸಾಧನೆಗಳ ನಡುವೆ ಸಂವಿಧಾನ ಜಾರಿಗೆ ಬಂದು ಮುಕ್ಕಾಲು ಶತಮಾನಗಳ ಕಾಲಗಳ ಸರಿಪಡಿಸಲಾಗದ ವ್ಯವಸ್ಥೆಯೊಂದು ಬದಲಾಗುತ್ತಿದೆ.ನಾಗರೀಕತೆಯಿಂದ ದೂರ ಉಳಿದ ಕಾನನದ ಕುಸುಮಗಳ ಬದುಕಿನಲ್ಲಿ ಬೆಳಕು ಕಾಣಿಸುತ್ತದೆ.ಈ ಸಾಧನೆ ಎಲ್ಲಾ ಸಾಧನೆಗಳಿಗಿಂತಲೂ ಮಾನವೀಯ ದೃಷ್ಟಿಕೋನದಿಂದ ಮಿಗಿಲಲ್ಲವೇ.
ಇಂದು ಎ.ಎಸ್.ಪೊನ್ನಣ್ಣ ನವರ 51 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ.ಜಿಲ್ಲೆಯಲ್ಲೆಡೆ ಅವರ ಹುಟ್ಟು ಹಬ್ಬವನ್ನು ವೈವಿಧ್ಯಮಯವಾಗಿ ಆಚರಿಸುತ್ತಿದ್ದಾರೆ.ಒಬ್ಬ ಜನಪ್ರತಿನಿಧಿ ಜನಾನುರಾಗಿಯಾಗಿದ್ದರೆ ಜನ ಅವರನ್ನು ಹೇಗೆ ಗೌರವಿಸುತ್ತಾರೆ ಎಂಬುದಕ್ಕೆ ಇಂದು ನಡೆಯುತ್ತಿರುವ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ.
ಎಲ್ಲರನ್ನೂ ತನ್ನವರು ಎಂದು ತನ್ನೊಂದಿಗೆ ಕರೆದೊಯ್ಯುತ್ತಿರುವ ಎ.ಎಸ್.ಪೊನ್ನಣ್ಣ ನವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಅವರಿಗೆ ತಾಯಿಕಾವೇರಿ ಆಯುರಾರೋಗ್ಯ ಕರುಣಿಸಲಿ.

ಇತ್ತೀಚಿನ ಸುದ್ದಿ

ಜಾಹೀರಾತು