ಇತ್ತೀಚಿನ ಸುದ್ದಿ
Chikkamagaluru | ಸಾಯಲೆಂದ ಕೆರೆಗೆ ಹಾರಿ ಬದುಕಲೆಂದು ಆಂಜನೇಯನ ಕೂಗಿದ ಗೃಹಿಣಿ!: ಸ್ಥಳೀಯ ಹುಡ್ಗರಿಂದ ಮಹಿಳೆಯ ರಕ್ಷಣೆ
09/07/2025, 11:51

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸಾಯಲೆಂದು ನಿರ್ಧರಿಸಿ ನೀರಿಗೆ ಹಾರಿ ನಂತರ ಬದುಕಿಸುವಂತೆ ಆಂಜನೇಯನನ್ನು ಬೇಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ಹುಡ್ಗರು ರಕ್ಷಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ.
ಗಂಡನ ಜೊತೆ ಜಗಳವಾಡಿ ರಾಮನಹಳ್ಳಿ ನಿವಾಸಿ ರಂಜಿತಾ (35) ಎಂಬ ಗೃಹಿಣಿ ಕೆರೆ ಹಾರಿದ್ದರು. ನಂತರ ಮುಳುಗುತ್ತಿದ್ದಂತೆ ಆಂಜನೇಯ ಕಾಪಾಡು…. ಆಂಜನೇಯ ಕಾಪಾಡು.. ಎಂದು ಸಹಾಯಕ್ಕಾಗಿ ಬೊಬ್ಬೆ ಹಾಕಿದರು. ಪಕ್ಕದ ಹೋಂ ಸ್ಟೇ ಮಾಲೀಕ ರಮೇಶ್ ಅವರು ಇದನ್ನು ನೋಡಿ ಸ್ಥಳಕ್ಕೆ ಬಂದು ಹುಡುಗರ ಕರೆಸಿದ್ದಾರೆ. ಸಂಮತ್ ಮತ್ತು ಪ್ರಸನ್ನ ಎಂಬರು ತಕ್ಷಣ ನೀರಿಗೆ ಹಾರಿ ಮಹಿಳೆಯನ್ನು ದಡಕ್ಕೆ ತಂದಿದ್ದಾರೆ. ರಂಜಿತಾ ಅವರ
ಅದೃಷ್ಟ ಚೆನ್ನಾಗಿತ್ತು. ಸಕಾಲದಲ್ಲಿ ಹುಡುಗರು ಬಂದು ರಕ್ಷಿಸಿದ್ದಾರೆ.
ಚಿಕ್ಕಮಗಳೂರು ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.