ಇತ್ತೀಚಿನ ಸುದ್ದಿ
ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ ಮುಷ್ಕರ
07/07/2025, 20:13

ಬೆಂಗಳೂರು(reporterkarnataka.com): ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಕಾರ್ಮಿಕರ ಮಕ್ಕಳಿಗೆ ರೂ.1125 ಕೋಟಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನಿಧಿ ಬಳಸಿ ವಸತಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿರುವ ಕ್ರಮವನ್ನು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿ ತೀವ್ರವಾಗಿ ವಿರೋಧಿಸಿದ್ದು, ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿ ಮತ್ತು ಹೈಕೋರ್ಟ ತೀರ್ಪಿನಂತೆ ಶೈಕ್ಷಣಿಕ ಧನ ಸಹಾಯ ಪಾವತಿಸಬೇಕು ಮತ್ತು ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಈ ಕೆಳಕಂಡ ಕಾರಣಗಳಿಂದಾಗಿ ಕಾರ್ಮಿಕ ಇಲಾಖೆ ಅಥವಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದಲೇ ವಸತಿ ಶಾಲೆ ಆರಂಭಿಸುವ ನಿರ್ಧಾರ ಸೂಕ್ತವಾದುದ್ದಲ್ಲ ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯವಾಗಿದೆ.
1. ಕರ್ನಾಟಕ ರಾಜ್ಯ ಸರ್ಕಾರದ ಅಡಿಯಲ್ಲಿ 47449 ಸರ್ಕಾರಿ ಶಾಲೆಗಳು ನಡೆಯುತ್ತಿವೆ. ಇದರಲ್ಲಿ 2023-24 ನೇ ಸಾಲಿನಲ್ಲಿ 42,66.645 ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಮತ್ತು 1,73,647 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಖಾಸಗಿ ಶಿಕ್ಷಣ ಶಾಲೆಗಳಲ್ಲಿ 46,43,225 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
2. ರಾಜ್ಯದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಇಲಾಖೆಗಳು ಸೇರಿ ನಡೆಸುತ್ತಿರುವ 833 ವಸತಿ ಶಾಲೆಗಳಲ್ಲಿ 2.5 ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ಬಹುತೇಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿಭಾಗಗಳಿಗೆ ಸೇರಿರುವವರು ಮತ್ತು ಬಹುತೇಕರ ಮಕ್ಕಳು ಈಗಾಗಲೇ ಇಂತಹ ಸರ್ಕಾರಿ ಹಾಗೂ ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
3. ಈಗಾಗಲೇ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು ನಡೆಸುತ್ತಿರುವ ಈ ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿ ಕಟ್ಟಡ ಮತ್ತು ಇತರೆ ಅಸಂಘಟಿತ ವಲಯದ ಮಕ್ಕಳು ಅತ್ಯಂತ ಕಡಿಮೆ ಶುಲ್ಕ ಪಾವತಿಸುತ್ತಿದ್ದಾರೆ. ಅವರುಗಳಿಗೆ ಮಧ್ಯಾನ್ಹ ಬಿಸಿಯೂಟ ದೊರೆಯುತ್ತಿದೆ. ಶೂ ಹಾಗೂ ಸಮವಸ್ತ್ರಗಳು, ಉಚಿತ ಪಠ್ಯಪುಸ್ತಕಗಳು. ಮೀಸಲಾತಿ ಸೌಲಭ್ಯಗಳು. ಕ್ರೀಡಾ ಹಾಗೂ ಸಾಂಸ್ಕೃತಿಕ ಪರಿಕರಗಳು ಹಾಗೂ ಉತ್ತೇಜನ ಪ್ರೋತ್ಸಾಹಗಳು ಮತ್ತು ಅದಕ್ಕಿಂತ ಹೆಚ್ಚಾಗಿ ಅತ್ಯಂತ ಪ್ರತಿಭಾವಂತ ಶಿಕ್ಷಕರು ಲಭ್ಯವಾಗುತ್ತಿದ್ದಾರೆ. ಮತ್ತು ಇಂತಹ ವಸತಿ ಶಾಲೆಗಳಲ್ಲಿ ಆಹಾರದ ಗುಣಮಟ್ಟ ಸೇರಿ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಾಕಷ್ಟು ಅನದಾನವನ್ನು ಒದಗಿಸುತ್ತಿದೆ.
4. ಉಚಿತ ಹಾಗೂ ಕಡ್ಡಾಯ ನೀಡುವುದು ಪ್ರತಿಯೊಂದು ಸರ್ಕಾರದ ಹೊಣೆಯಾಗಿದೆ ಮತ್ತು ಸಂವಿಧಾನ ಕೊಡಮಾಡಿರುವ ಈ ಹಕ್ಕನ್ನು ಇದೀಗ ಎಲ್ಲ ಸರ್ಕಾರಗಳು ಜಾರಿಗೊಳಿಸುವ ಪ್ರಯತ್ನಗಳನ್ನು ನಡೆಸುತ್ತಿವೆ. ಹೀಗಾಗಿ ಪ್ರತ್ಯೇಕ ವಸತಿ ಶಾಲೆಗಳನ್ನು ಆರಂಭಿಸುವುದು ಅದಕ್ಕಾಗಿ 1125 ಕೋಟಿ ಕಲ್ಯಾಣ ನಿಧಿಯನ್ನು ಬಳಕೆ ಮಾಡುವುದು ಕಾರ್ಮಿಕ ಇಲಾಖೆ ಆಥವಾ ಕಲ್ಯಾಣ ಮಂಡಳಿ ಕಾರ್ಯಕ್ರಮವಾಗಬಾರದು.
ಆದ್ದರಿಂದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯು ಈಗಾಗಲೇ ಘೋಷಿಸಿರುವ ಸೌಲಭ್ಯಗಳಾದ ಪೂರ್ವಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಶೈಕ್ಷಣಿಕ ಧನ ಸಹಾಯವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಮತ್ತು ಉನ್ನತ ಹಾಗೂ ವಿದೇಶಿ ಶಿಕ್ಷಣ ಪಡೆಯುವವರ ಮಕ್ಕಳಿಗೆ ಶಿಕ್ಷಣ ಸಾಲ ಪ್ರೋತ್ಸಾಹ ಇತ್ಯಾಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕ್ರಮವಹಿಸಬೇಕು. ಜೊತೆಗೆ ಇತರೆ ಪಿಂಚಣಿ, ವೈದ್ಯಕೀಯ, ಸಾವು, ಮನೆ, ಹೆರಿಗೆ, ಮದುವೆ, ಕೌಶಲ್ಯತೆ ಮೊದಲಾದ ಕಲ್ಯಾಣ ಕಾರ್ಯಕ್ರಮಗನ್ನು ಜಾರಿಗೊಳಿಸಲು ಮತ್ತು ಅವುಗಳಿಗೆ ನೀಡುತಿರುವ ಧನ ಸಹಾಯ ಪರಿಷ್ಕರಿಸಲು ಗಮನ ಹರಿಸಲು ಗಮನ ಹರಿಸಬೇಕು ಎನ್ನುವುದು ನಮ್ಮ ಕೋರಿಕೆಯಾಗಿದೆ. ಹೀಗಾಗಿ ಮಂಡಳಿಯಿಂದ ವಸತಿ ಶಾಲೆಗಳು ಬೇಕಿಲ್ಲ.
1. ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ ಕೈಬಿಡಿ: ಕಟ್ಟಡ ಕಾರ್ಮಿಕರು ಅವರ ಮಕ್ಕಳಿಗೆ ವೃತ್ತಿ ಬುನಾದಿ ಹಾಗೂ ಉನ್ನತೀಕರಿಸಿದ ಕೌಶಲ್ಯದ ತರಬೇತಿ ಕೇಂದ್ರಗಳನ್ನು ಧಾರವಾಡ ಮತ್ತು ಮೈಸೂರಿನಲ್ಲಿ ಸ್ಥಾಪಿಸಿ. ಈ ಕೇಂದ್ರಗಳ ಮೂಲಕ ಯುವಜನರಿಗಾಗಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಯೋಜಿಸಿದೆ. ಇದಕ್ಕಾಗಿ ಪ್ರತಿ ಕೇಂದ್ರಕ್ಕೆ ರೂ.434 ಕೋಟಿಯಂತೆ ಎರಡೂ ಕೇಂದ್ರಗಳಿಗೆ ಒಟ್ಟು ರೂ.968 ಕೋಟಿ ಖರ್ಚು ಮಾಡಲು ಉದ್ದೇಶಿಸಲಾಗಿದೆ.
09:42
5.00 x 4G+ ಕೆಬಿ/ಸೆಕೆಂಡು
66%
2. ಕಿಟ್ ಖರೀದಿ ಕೈ ಬಿಡಿ: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಅವಶ್ಯಕತಾ ಕಿಟ್/ವಿದ್ಯಾಭ್ಯಾಸ ಪೂರಕ ಕೆಟ್/ಡಿಜಿಟಲ್ ಕ್ಯೂಆರ್ ಕೋಡ್ ಪುಸ್ತಕ/ಪಠ್ಯಕ್ರಮ ಆಧಾರಿತ E-Learning Material ಕೊಡುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದೊಂದು ನಿರರ್ಥಕ ಯೋಜನೆಯಾಗಿದೆ. ಮಕ್ಕಳಿಗೆ ಶಾಲೆಗಳಲ್ಲೇ ಅಗತ್ಯವಿರುವ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಹಣದ ಕೊರತೆಯ ಕಾರಣವನ್ನು ಮುಂದುಮಾಡಿ ಶೈಕ್ಷಣಿಕ ಸಹಾಯಧನ ನಿಲ್ಲುಸುವ ಕಲ್ಯಾಣ ಮಂಡಳಿಯು, ಪ್ರೊಕ್ಯೂರ್ ಮೆಂಟ್ ಯೋಜನೆಗಳನ್ನು ಜಾರಿಗೊಳಿಸಲು ಆಸಕ್ತಿ ತೋರುತ್ತದೆ.
3. ತಾತ್ಕಾಲಿಕ ವಸತಿ ಸರ್ಕಾರ/ಜಿಲ್ಲಾಡಳಿತ/ಸ್ಥಳಿಯಾಡಳಿತದಿಂದ ಜಾರಿಯಾಗಲಿ
ಕೆಲಸದ ಕಾರಣಕ್ಕಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ವಲಸೆ ಬರುವ ಕಟ್ಟಡ ಕಾರ್ಮಿಕರು ಉಳಿದುಕೊಳ್ಳಲು ತಾತ್ಕಾಲಿಕ ವಸತಿ ಸಮುಚ್ಛಯ ನಿರ್ಮಿಸಲು ಕಲ್ಯಾಣ ಮಂಡಳಿಯು ಮುಂದಾಗಿದೆ. ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಅತ್ಯಗತ್ಯವಾಗಿ ಬೇಕೆಂಬುದರಲ್ಲಿ ನಮ್ಮ ಸಹಮತವಿದೆ. ಈ ವ್ಯವಸ್ಥೆ ಕಟ್ಟಡ ಕಾರ್ಮಿಕರಿಗೆ ಮಾತ್ರವಲ್ಲದೇ, ಇತರೆ ಕಾರ್ಮಿಕರಿಗೂ ಆಗತ್ಯವಾಗಿ ಬೇಕಿದೆ. ಆದ್ದರಿಂದ ರಾಜ್ಯ ಸರ್ಕಾರ ಇಂತಹ ಟ್ರಾನ್ಸಿಸ್ಟ್ ಹೌಸ್‌ಗಳನ್ನು ನಿರ್ಮಿಸುವುದು ಸೂಕ್ತ. ಕಾರ್ಮಿಕರಿಗೆ ಉಪಯೋಗವಾಗುವ ಬದಲು, ಇದರ ನಿರ್ವಹಣೆಯೇ ಮಂಡಳಿಗೆ ಹೊರೆಯಾಗುವ ಅಪಾಯವಿದೆ.
ಕಲ್ಯಾಣ ಮಂಡಳಿಯ ಇಂತಹ ಹಲವು ಯೋಜನೆಗಳಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ಸುಮಾರು 2000 ಕೋಟಿ ಬಳಕೆ ಮಾಡಲು ಹೊರಟರುವ ತೀರ್ಮಾನವನ್ನು ಕೈಬಿಡಬೇಕೆಂದು ಕಟ್ಟಡ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿಯ ಎಲ್ಲ ಭಾಗಿದಾರ ಸಂಘಟನೆಗಳು ಒಕ್ಕೊರಲ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದೇವೆ. 1996 ರ ಕಾಯ್ದೆಯ ಉದ್ದೇಶವನ್ನು ಗೌರವಿಸಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೈಜ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವಂತಹ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡಿ, ಇವುಗಳನ್ನು ಪರಿಣಾಮಕಾರಿ ಜಾರಿ ಮಾಡುವಂತೆ ನಿರ್ದೇಶನ ನೀಡಬೇಕು ಮತ್ತು ಪ್ರೊಕ್ಯೂರ್ ಮೆಂಟ್ ಆಧಾರಿತ ಖರೀದಿ ಯೋಜನೆಗಳಿಗೆ ಕಡಿವಾಣ ಹಾಕಬೇಕೆಂದು ಈ ಆಗ್ರಹಿಸುತ್ತೇವೆ ಮತ್ತು ಈ ಕೆಳಕಂಡ ಬೇಡಿಕೆಗಳಿಗಾಗಿ ರಾಜ್ಯದ್ಯಾಂತ ಲಕ್ಷಾಂತರ ಕಟ್ಟಡ ಕಾರ್ಮಿಕರು ಜುಲೈ 9 ರಂದು ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದಾರೆ.
1. ಹೈಕೋರ್ಟ ತೀರ್ಪಿನಂತೆ ಶೈಕ್ಷಣಿಕ ಧನ ಸಹಾಯ ಪಾವತಿಸಬೇಕು:
2. ನೋಂದಣಿ ಹಾಗೂ ನವೀಕರಣ ಸಮಸ್ಯೆಗಳು ಇತ್ಯರ್ಥವಾಗಬೇಕು:
3. ಬಾಕಿ ಅರ್ಜಿಗಳು ವಿಲೇವಾರಿ ಆಗಬೇಕು:
4. ಬಾಕಿ ಇರುವ ಪಿಂಚಣಿ ಅರ್ಜಿಗಳಿಗೆ ಹಣ ಪಾವತಿಸಿ:
5. ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ ನೀಡಬೇಕು:
6. ಸ್ಲಂ ಬೋರ್ಡ್ ನೀಡಿದ ಹಣ ಮಂಡಳಿಗೆ ಮರು ಪಾವತಿ ಆಗಬೇಕು:
7. ಮಂಡಳಿ ತಂತ್ರಾಂಶ ಕುರಿತಾದ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು:
8. ಎಲ್ಲ ಖರೀದಿಗಳ ಟೆಂಡರ್ ನಿಲ್ಲಿಸಬೇಕು: ಭ್ರಷ್ಟಚಾರದಿಂದ ಮಂಡಳಿ ಮುಕ್ತಗೊಳಿಸಬೇಕು:
9. ವೈದ್ಯಕೀಯ ನೆರವು ಹೆಚ್ಚಿಸಬೇಕು:
10. ಕಲ್ಯಾಣ ಮಂಡಳಿ ಪುನರಚಿಸಿ ಕೇಂದ್ರ ಕಾರ್ಮಿಕ ಸಂಘಗಳಿಗೆ ಪ್ರಾತಿನಿಧ್ಯ ನೀಡಬೇಕು:
11. ಮಂಡಳಿ ನಿಧಿ ಅವ್ಯವಹಾರಗಳು ನಿಲ್ಲಬೇಕು:
12. ಹೆಚ್ಚುವರಿ ಸೆಸ್ ಸಂಗ್ರಹಕ್ಕೆ ಕ್ರಮ ವಹಿಸಬೇಕು:
13. ಕಾರ್ಮಿಕ ಸಂಹಿತೆಗಳ ಜಾರಿ ಬೇಡ:
(ಕೆ.ಮಹಾಂತೇಶ್)
ಪ್ರಧಾನ ಕಾರ್ಯದರ್ಶಿ
(ಲಿಂಗರಾಜ್ ) ಖಜಾಂಚಿ
ಕರ್ನಾಟಕ ರಾಜ್ಯ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (CITU)
(…)
(ಶಫೀ ಆಹಮ್ಮದ್)
ಅಧ್ಯಕ್ಷರು
ಒಂದೆರಡು
ಕರ್ನಾಟಕ ಸ್ಟೇಟ್ ಕನ್ಮಕ್ಷನ್ ವರ್ಕಸ್್ರ ಸೆಂಟ್ರಲ್ ಯೂನಿಯನ್ (NCL)
(ಹೆಚ್.ಜಿ.ಉಮೇಶ್ ) ಅಧ್ಯಕ್ಷರು
(৯৩) ಪ್ರಧಾನ ಕಾರ್ಯದರ್ಶಿ
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಕ್ವಾರಿ ಕಾರ್ಮಿಕರ ಸಂಘ (AITUC)
(ಶಾಮಣ್ಣರೆಡ್ಡಿ) ಉಪಾಧ್ಯಕ್ಷರು
(ಯಲ್ಲಪ್ಪ)
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ (INTUC)
(ಪಿ.ಪಿ. ಅಪ್ಪಣ್ಣ)
(ಪ್ರಭಾಕರ್)
ಅಧ್ಯಕ್ಷರು
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘ (AICCTU)
(ದೇವದಾಸ್) ಅಧ್ಯಕ್ಷರು
(ಶಣುಗಂ ಪಿ.ಎಸ್.) ಪ್ರಧಾನ ಕಾರ್ಯದರ್ಶಿ
(ಶ್ರೀ ನಾಗನಾಥ್)ಉಪಾಧ್ಯಕ್ಷರು ಕರ್ನಾಟಕ ಬಹುವಿಧ ಕಟ್ಟಡ ಕಾರ್ಮಿಕ ಸಂಘ (HMS )
ಶ್ರೀಮತಿ ಅನಿತಾ ರಾವ್
ಅಧ್ಯಕ್ಷರು
ಶ್ರೀಮತಿ ಮಹಾದೇವಿ
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ರಕ್ಷಕ ಮತ್ತು ಜನರಲ್ ವರ್ಕಸ್್ರ ಯೂನಿಯನ್ (TUCC)
ಚಿತ್ರ: ಇಂಡಿಯಾ ಮಾರ್ಟ್