ಇತ್ತೀಚಿನ ಸುದ್ದಿ
ಸೀಬಿನಕೆರೆ ಸರ್ಕಲ್: ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಮೋರಿ ಹೊಂಡ: ಮೇಲೆದ್ದ ಕಬ್ಬಿಣದ ಕಂಬಿಗಳು!
06/07/2025, 13:12

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಟ್ಟಣದ ಸೀಬಿನಕೆರೆ ಸರ್ಕಲ್ ಬಳಿ ಮಂಜಪ್ಪಣ್ಣನವರ ಅಂಗಡಿಯ ಪಕ್ಕ ಚರ್ಚ್ ಓಣಿ ತಿರುಗುವ ರಸ್ತೆಯಲ್ಲಿ ಮೋರಿಯಲ್ಲಿ ಹಾಕಿದ ಸ್ಲ್ಯಾಬ್ ಒಂದು ಹೊಂಡ ಬಿದ್ದಿದ್ದು ಆ ಹೊಂಡದಲ್ಲಿ ಕಬ್ಬಿಣದ ಕಂಬಿಗಳು ಎದ್ದು ಕಾಣಿಸುತ್ತಿವೆ.
ಈ ರಸ್ತೆಯಲ್ಲಿ ಗ್ಯಾರೇಜಿಗೆ ಬರುವ ದೊಡ್ಡ ದೊಡ್ಡ ಲಾರಿಗಳು ಶಾಲಾ ಮಕ್ಕಳ ವಾಹನಗಳು ಸಾರ್ವಜನಿಕರು ಸೇರಿದಂತೆ ಅನೇಕ ವಾಹನಗಳು ಸಂಚರಿಸುತ್ತವೆ. ಈ ಮೋರಿ ಹೊಂಡ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ತಕ್ಷಣ ಗಮನಿಸಿ ತಕ್ಷಣ ದುರಸ್ತಿಗೊಳಿಸಿಕೊಡಬೇಕಾಗಿ ಆ ಭಾಗದ ಸಾರ್ವಜನಿಕರ ಒತ್ತಾಯವಾಗಿದೆ.