ಇತ್ತೀಚಿನ ಸುದ್ದಿ
ಲವ್- ದೋಖಾ- ಕಿಡ್ ಪ್ರಕರಣ: ಪುತ್ತೂರು ಬಿಜೆಪಿ ಮುಖಂಡನ ಪುತ್ರನ ಬಂಧನ; ತಲೆಮರೆಸಿಕೊಂಡಿದ್ದ ಆರೋಪಿಯ ಮೈಸೂರಿನಲ್ಲಿ ಸೆರೆ
05/07/2025, 13:05

ಮಂಗಳೂರು(reporterkarnataka.com): ಸಹಪಾಠಿ ವಿದ್ಯಾರ್ಥಿನಿಯ ಬಸಿರು ಮಾಡಿ ಮಗು ಜನಿಸಿದ ಮೇಲೆ ಮದುವೆಯಾಗದೆ ವಂಚಿಸಿದ ಆರೋಪದ ಮೇಲೆ ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಗೆ ವಂಚಿಸಿ ತಲೆಮರೆಸಿಕೊಂಡ ಆರೋಪಕ್ಕೊಳಗಾದ ಕೃಷ್ಣ ರಾವ್ ಅವರನ್ನು ಪುತ್ತೂರು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.
ಕೃಷ್ಣ ರಾವ್ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿತ್ತು. ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ . ಇದೀಗ ಆರೋಪಿಯನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸರು 4 ರಂದು ರಾತ್ರಿ ಮೈಸೂರಿನ ಟಿ ನರಸಿಪುರ ಎಂಬಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.