ಇತ್ತೀಚಿನ ಸುದ್ದಿ
Kodagu | ಕುಶಾಲನಗರ: ಸ್ಕೂಟಿಯಲ್ಲಿ ಜಾಲಿ ರೈಡಿಗೆ ರೆಡಿಯಾದ ಹಾವು!; ಕೊನೆಗೂ ಸೆರೆ
04/07/2025, 16:14
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.con
ಹಾವೊಂದು ಸ್ಕೂಟಿಯೊಳಗೆ ಸೇರಿಕೊಂಡು ಸವಾರನ್ನನ್ನು ಪೀಕಲಾಟಕ್ಕೆ ಸಿಲುಕಿಸಿದ ಘಟನೆ ಕುಶಾಲನಗರ ಸಮೀಪದ ಕೊಪ್ಪದಲ್ಲಿ ನಡೆದಿದೆ.
ಕೊಪ್ಪದ ಡೆಂಟಲ್ ಕ್ಲಿನಿಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೂದನ ಗಣೇಶ್ ಎಂಬುವವರು ನಿಲ್ಲಿಸಿದ್ದ ಸ್ಕೂಟಿಯನ್ನೇರಿ ಸೀಟ್ ಕೆಳಭಾಗದ ಡಿಕ್ಕಿ ಒಳಗೆ ತೂರಿಕೊಂದ್ದಿದ್ದು ಗಣೇಶ್ ಅವರು
ಸೀಟ್ ನ್ನು ಮೇಲಕ್ಕೆ ಎತ್ತಿದಾಗ ಉರಗ ಪ್ರತ್ಯಕ್ಷವಾಗಿ ಭಯ ಮೂಡಿಸಿದೆ. ಅದನ್ನು ಓಡಿಸಲು ಯತ್ನಿಸಿದಾಗ ಇಂಜಿನ್ ಒಳಗೆ ಸೇರಿಕೊಂಡು ಆತಂಕ ಸೃಷ್ಟಿಸಿತ್ತು. ಬಳಿಕ ಉರಗ ತಜ್ಞರನ್ನು ಕರೆಸಿ ಹಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿನತ್ತ ಬಿಡಲಾಗಿದೆ.














