ಇತ್ತೀಚಿನ ಸುದ್ದಿ
Kodagu | ಪೊನ್ನಂಪೇಟೆ ಕಳತ್ಮಾಡು ಗ್ರಾಮದಲ್ಲಿ ಕಾಡಾನೆ ದಾಂಧಲೆ: ಭತ್ತದ ಸಸಿಮಡಿ ನಾಶ
03/07/2025, 20:30

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕು ಅಮ್ಮತ್ತಿ ಹೊಸೂರು ಪಂಚಾಯತ್ ವ್ಯಾಪ್ತಿಯ ಕಳತ್ತ ಮಾಡು ಗ್ರಾಮದ ಕತ್ರಿಕೊಲ್ಲಿ ದೇವಿ ಮತ್ತು ಕೊಲ್ಲಿರ ಧಿನು ಅವರಿಗೆ ಸೇರಿದ ಬಿತ್ತನೆ ಮಾಡಿದ್ದ ಭತ್ತದ ಸಸಿಮಡಿಯನ್ನು ಕಾಡಾನೆಗಳು ತುಳಿದು ನಾಶ ಮಾಡಿದೆ.
ಇಂದು ಬೆಳಗಿನ ಜಾವ ಕಾಡಾನೆಗಳು ಲಗ್ಗೆ ಇಟ್ಟಿದ್ದು ಕೃಷಿಕರು ಆತಂಕಕ್ಕೆ ಈಡಾಗಿದ್ದಾರೆ. ಕಾಡಾನೆ ದಾಳಿ ತಪ್ಪಿಸಲು ಆನೆ ಸ್ಥಳಾoತರ ಮಾಡುವ ನಿಟ್ಟಿನಲ್ಲಿ
ತಕ್ಷಣ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದು ಸ್ಥಳದಲ್ಲಿಯೇ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿ ಸಿದ್ದಾರೆ.