ಇತ್ತೀಚಿನ ಸುದ್ದಿ
ಡಿಸಿಸಿ ಬ್ಯಾಂಕ್ ಹಗರಣ: ಇಡಿ ಬಂಧನಕ್ಕೊಳಗಾದ ಕಾಂಗ್ರೆಸ್ ಮುಖಂಡ ಮಂಜುನಾಥ್ ಗೌಡರಿಗೆ ಕೊನೆಗೂ ಜಾಮೀನು
02/07/2025, 22:56

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಡಿಸಿಸಿ ಬ್ಯಾಂಕ್ ಹಗರಣ ಸಂಬಂಧಪಟ್ಟಂತೆ
ಇಡಿ ಕಸ್ಟಡಿಯಲ್ಲಿದ್ದ ಕಾಂಗ್ರೆಸ್ ಮುಖಂಡ ಆರ್. ಎಂ. ಮಂಜುನಾಥ್ ಗೌಡ ಅವರು ನ್ಯಾಯಾಲಯದಲ್ಲಿ
ಸಲ್ಲಿಸಿದ್ದ ಜಾಮೀನು ಅರ್ಜಿ ಕಡೆಗೂ ಪುರಸ್ಕೃತಗೊಂಡಿದೆ.
ಡಿಸಿಸಿ ಬ್ಯಾಂಕ್ ಹಗರಣ ವಿಚಾರದಲ್ಲಿ ಇಡಿ ಕೈಲಿ ಸಿಕ್ಕಿ ಬಿದ್ದಿದ್ದ ಮಂಜುನಾಥ್ ಗೌಡರು ತಾವು ಸಲ್ಲಿಸಿದ್ದ ಒಟ್ಟು ಮೂರು ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕೃತ ಮಾಡಿತ್ತು. ಆದರೆ ಇಂದು ಕಡೆಗೂ ಜಾಮೀನು ಮಂಜೂರು ಮಾಡಲಾಗಿದೆ.
ಆರ್ ಎಂ ಎಂ ಬಂಧನಕ್ಕೊಳಗಾಗಿ ಎರಡುವರೇ ತಿಂಗಳಿಗೂ ಜಾಸ್ತಿ ಆಗಿತ್ತು. ಇಡಿ ಬಲೆಗೆ ಬಿದ್ದು ಸರಿ ಸುಮಾರು 83 ದಿನಗಳ ಕಾಲ ಆಗಿತ್ತು. ಹಾಗಾಗಿ ಜಾಮೀನು ಕೋರಿ ನ್ಯಾಯಾಲಯದ ಮೋರೆ ಹೋಗಿದ್ದ ಆರ್ ಎಂ ಎಂಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.