ಇತ್ತೀಚಿನ ಸುದ್ದಿ
Kodagu | ಟೆರರ್ ಆಫ್ ಬೆಂಗಾಲ್ ಇನ್ ಕುಶಾಲನಗರ !: ಚಂದಕ್ಕೆ ಪೂರಕ , ಆರೋಗ್ಯಕ್ಕೆ ಬಲು ಮಾರಕ!!
02/07/2025, 14:13

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಅಕ್ಷರಶಃ ಕಳೆದ ಒಂದು ವಾರದಿಂದ ಕೊಡಗಿನ ಕುಶಾಲನಗರ -ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿ 275 ಬದಿಯಲ್ಲಿರುವ ಕುಶಾಲನಗರದ ತಾವರೆಕೆರೆಯಲ್ಲಿ ಅರಳಿ ನಿಂತಿರುವ ಲ್ಯಾವೆಂಡರ್/ ಬ್ಲೂ ವಾಯಿಲೆಟ್ ಬಣ್ಣದ ಹೂವು ಅಕ್ಷರಶಃ ಮಾರಕವಾಗಿದೆ. ವೈಜ್ಞಾನಿಕವಾಗಿ ನೋಡುವುದಾದರೆ ಇದೊಂದು ತ್ಯಾಜ್ಯದಿಂದ ಉದ್ಭವಿಸುವ ಒಂದು ಕಳೆಯಿಂದ ಅರಳಿರುವ ಸಸ್ಯ ಪ್ರಭೇಧ.”ಇಚ್ಹೊರ್ನಿಯಾ ಕ್ರೇಸ್ಸಿಪಿಸ್” ಹೆಸರಿನ ಈ ಕಳೆ ಬಾಂಗ್ಲಾದೇಶದಲ್ಲಿ ನಿಂತ ನೀರು, ಅದರಿಂದ ಉದ್ಭವ ಆಗುತ್ತಿದ್ದ ಸೊಳ್ಳೆ ಸೇರಿದಂತೆ ಕ್ರಿಮಿ ಕೀಟದಿಂದ ರೋಗ ರುಜಿನ ಉಂಟಾಗಿತ್ತು, ಸ್ವಲ್ಪ ನೀರಿನ ಸೆಲೆ ಸಿಕ್ಕರೆ ಸಾಕು ಅಲ್ಲಿ ಇದರ ಬೇರು ಕ್ಷಣಾರ್ಧದಲ್ಲಿ ಹಬ್ಬುವ ತಾಕತ್ತು ಇದಕ್ಕಿದೆ, ಮತ್ತೆ ಈ ತ್ಯಾಜ್ಯದ ಗಿಡ ನೀರಿನಲ್ಲಿನಲ್ಲಿರುವ ಜಲಚರ ಜೀವಿಗಳು(ಮೀನುಗಳು, ಆಮೆ, ಕಪ್ಪೆ), ತಾವರೆ, ವಾಟರ್ ಲಿಲ್ಲಿ ಯಂತಹ ಸೂಕ್ಷ್ಮ ಜೀವಿಗಳಿಗೆ ಆಮ್ಲಜನಕ ತಡೆಯುವ ಸಾಮರ್ಥ್ಯ ಹೊಂದಿದೆ. ಸಹಜವಾಗಿ ಇದರ ಎಲೆಗಳು ಸೂರ್ಯನ ಕಿರಣ ತಡೆಯುವ ಸಾಮರ್ಥ್ಯ ಹೊಂದಿದ್ದು, ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ತಡೆಯುತ್ತದೆ ಎಂದು ದೃಢಪಟ್ಟಿದೆ. ಒಂದು ವೇಳೆ ಇದು ಹಬ್ಬಿದ್ದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ತಾವರೆಕೆರೆ ಒಂದು ರೋಗ ಗುಂಡಿ ಆಗುವುದರಲ್ಲಿ ಸಂಶಯವಿಲ್ಲ.