10:03 PM Sunday28 - June 2026
ಬ್ರೇಕಿಂಗ್ ನ್ಯೂಸ್
ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ…

ಇತ್ತೀಚಿನ ಸುದ್ದಿ

ಎಲ್ಲರಿಗಿಂತ ದೊಡ್ಡ ಯೋಗಿ ಶಿವ: ಯೋಗರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ

30/06/2025, 21:50

ಬೆಂಗಳೂರು(reporterkarnataka.com): ಎಲ್ಲರಿಗಿಂತ ದೊಡ್ಡ ಯೋಗಿ ಶಿವ. ಶಿವನ ಜೊತೆ ಯಾವಾಗಲು ನಮ್ಮ ಯೋಗ ಸಂಬಂಧ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.


ಅವರು ಶ್ವಾಸ ಯೋಗ ಸಂಸ್ಥೆ ಹಾಗೂ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಯೋಗ ರತ್ನ ಪ್ರಶಸ್ತಿ 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಕ್ರೇನ್ ನ ಯೋಗಿನಿ ಒಲೈನಾ ತಾರಾಸೋವಾ ಅವರಿಗೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು.
ಶ್ವಾಸ ಗುರು ವಚನಾನಂದ ಸ್ವಾಮೀಜಿ ಕರ್ನಾಟಕದಲ್ಲಿ ಯೋಗದ ದೊಡ್ಡ ಕ್ರಾಂತಿ ಮಾಡಿದ್ದಾರೆ. ಕೇವಲ ಯೋಗಿಗೆ ಸೀಮಿತವಾಗಿದ್ದ ಯೋಗವನ್ನು ಮನೆ ಮನೆಗೆ ತಲುಪಿಸುವ ಕೆಲಸ ವಚನಾನಂದ ಸ್ವಾಮಿಜಿ ಮಾಡಿದ್ದಾರೆ. ಯೋಗ ಜಗತ್ತಿನಲ್ಲಿ ಅವರ ದೊಡ್ಡ ಹೆಸರು ಇರುವುದರಿಂದ ಜಗತ್ತಿನ ಅವರ ಅಭಿಮಾನಿಗಳು ಬಂದಿದ್ದಾರೆ ಎಂದರು.
ಎಲ್ಲರಿಗಿಂತ ದೊಡ್ಡ ಯೋಗಿ ಶಿವ. ಶಿವನ ಜೊತೆ ಯಾವಾಗಲು ನಮ್ಮ ಯೋಗ ಸಂಬಂಧ ಇರುತ್ತದೆ. ನಾವು ಶ್ವಾಸ ತೆಗೆದುಕೊಂಡಾಗ ಅದು ಪರಮಾತ್ಮನ ಜೊತೆ ಸಂಪರ್ಕ ಹೊಂದುತ್ತದೆ. ಕಷ್ಟ ಪಡುವುದು ಯೋಗವಲ್ಲ. ಸಹಜವಾಗಿ ಮಾಡುವುದೇ ಯೋಗ, ಟು ಲೀವ್ ವೆರಿ ಲೆಸ್ ಬದುಕು ಎಷ್ಟು ಸಣ್ಣದು ಮಾಡುತ್ತೇವೆಯೊ ಅದು ಸುಂದರವಾಗಿರುತ್ತದೆ. ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳುತ್ತಾರೆ ಅವರು ಸಾವಿನ ನಂತರ ಬದುಕುವವರು ಸಾಧಕರು ಎಂದು ಹೇಳುತ್ತಾರೆ. ಸ್ವಾಮಿಜಿಗಳು 500 ವರ್ಷ ಬದುಕಿದ್ದರು ಅಂದರೆ ಅವರ ವಿಚಾರಗಳು ಈಗಲು ಇವೆ. ಕಾಲ ಮಿತಿಯನ್ನು ಮೀರಿ ಸಾಧಿಸುವುದೇ ಯೋಗ ಎಂದು ಹೇಳಿದರು.
ಸಚಿವ ಸಂತೋಷ ಲಾಡ್ ಪಾದರಸದಂತೆ ಓಡಾಡುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಂತು ಯೋಗ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ವಾಸ ಗುರು ವಚನಾನಂದಸ್ವಾಮಿ, ಸಚಿವ ಸಂತೋಷ ಲಾಡ್, ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು