10:12 PM Tuesday21 - April 2026
ಬ್ರೇಕಿಂಗ್ ನ್ಯೂಸ್
ಇಡಿ ದಾಳಿಗೂ ತಂದೆ ಹ್ಯಾರಿಸ್ ಗೂ ಯಾವುದೇ ಸಂಬಂಧವಿಲ್ಲ; ನಾನೊಬ್ಬ ಒಳ್ಳೆಯ ಮಗನಾಗಲು… ಕಳಸ: ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ; ಓರ್ವ… ಪ್ರಧಾನಿ ಮೋದಿ ಜತೆ ಗುಟ್ಟಾಗಿ ಮಾತನಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಇಡಿ ಶಾಕ್: ಶಾಸಕ ಹ್ಯಾರಿಸ್, ನಲಪಾಡ್ ನಿವಾಸ ಸೇರಿ 17… ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ… ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ಜಲಸಮಾಧಿ: ದರ್ಗಾಕ್ಕೆ ಬಂದವರು… ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭಯದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿಲ್ಲ:… ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಸಂತ್ರಸ್ತರ ಕುಟುಂಬಕ್ಕೆ ಕಡೆಗೂ ಸಿಕ್ತು ಸರ್ಕಾರಿ ನೌಕರಿ… ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ…

ಇತ್ತೀಚಿನ ಸುದ್ದಿ

ಕಾರ್ಕಳ: ಪತಿ ಹಂತಕಿ ಪ್ರತಿಮಾಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು

17/06/2025, 10:40

ಕಾರ್ಕಳ(reporterkarnataka.com): ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ಪತಿಯನ್ನು ಸಂಚು ಮಾಡಿ ಕೊಲೆ ಮಾಡಿದ ಆರೋಪಿ ಪತ್ನಿಗೆ ಹೈಕೋರ್ಟ್ ಶರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ಕಳೆದ ವರ್ಷ ಅಕ್ಟೋಬರ್ 20 ರಂದು ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ನಡೆದಿದ್ದ ಬಾಲಕೃಷ್ಣ ಪೂಜಾರಿ (44) ಅವರ ಸಂಚುಪೂರ್ವಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಪತ್ನಿ ಪ್ರತಿಮಾ (36) ಅವರಿಗೆ ಕರ್ನಾಟಕ ರಾಜ್ಯ ಹೈಕೋರ್ಟ್ ಶರತ್ತುಬದ್ದ ಜಾಮೀನು ನೀಡಿದೆ.
ಮೃತ ಬಾಲಕೃಷ್ಣ ಪೂಜಾರಿಯ ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಎಂಬವರು ಸೇರಿ ಈ ಕೊಲೆ ಎಸಗಿದ್ದಾರೆ ಎಂಬ ಆರೋಪದಡಿ ಅಕ್ಟೋಬರ್ 25ರಂದು ಅಜೆಕಾರು ಪೊಲೀಸ್ ಠಾಣೆಯ ಪೊಲೀಸರು ಇಬ್ಬರನ್ನೂ ಬಂಧಿಸಿದ್ದರು. ತನಿಖೆ ಸಂದರ್ಭದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅಜೆಕಾರು ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.
ಇದೀಗ ರಾಜ್ಯ ಹೈಕೋರ್ಟ್, ಪ್ರಕರಣದ ಪರಿಶೀಲನೆಯ ನಂತರ, ಪ್ರತಿಮಾಳಿಗೆ ನಿಗದಿತ ಷರತ್ತುಗಳೊಂದಿಗೆ ಜಾಮೀನು ನೀಡಿದೆ. ಕಳೆದ ಕೆಲವು ತಿಂಗಳ ಹಿಂದೆ
ಪ್ರಿಯಕರ ದಿಲೀಪ್ ಹೆಗ್ಡೆ ಕೂಡ ಜಮೀನಿನ ಮೇಲೆ ಬಿಡುಗಡೆ ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು