12:09 PM Saturday2 - August 2025
ಬ್ರೇಕಿಂಗ್ ನ್ಯೂಸ್
ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ… ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಏನಿಲ್ಲ ಏನಿಲ್ಲ ಎನ್ನುವುದರ ನಡುವೆ ಸಿಕ್ಕೇ ಬಿಡ್ತು…

ಇತ್ತೀಚಿನ ಸುದ್ದಿ

ರಸ್ತೆಯಲ್ಲೇ ಹರಿಯುವ ಮಳೆ ನೀರು: ಅವೈಜ್ಞಾನಿಕ ಕಾಮಗಾರಿ ವಿರುದ್ಧ ಹಾರೆ ಹಿಡಿದು ತೋಡು ಮಾಡಿಕೊಟ್ಟ ಪುತ್ತೂರು ಶಾಸಕ ಅಶೋಕ್ ರೈ!

15/06/2025, 20:00

ಪುತ್ತೂರು(reporterkarnataka.com): ಪುತ್ತೂರು ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಮಳೆಗಾಲದಲ್ಲಿ ಉಂಟಾಗುತ್ತಿರುವ ನೀರು ನಿಲ್ಲುವ ಸಮಸ್ಯೆ, ಹಳ್ಳ-ಮೋರಿಯ ತೊಂದರೆ, ರಸ್ತೆಗಳ ಹಾಳುಸ್ಥಿತಿ ಮತ್ತು ವಿಳಂಬದ ಕಾಮಗಾರಿಗಳು ಜನರಲ್ಲಿ ಆಕ್ರೋಶ ಹುಟ್ಟಿಸುತ್ತಿವೆ. ಲಕ್ಷ ಲಕ್ಷ ಸಂಬಳ ಪಡೆಯುವ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಸ್ಪಂದಿಸದಂತಾಗಿರುವ ಸ್ಥಿತಿಯಲ್ಲಿ, ರಾಜ್ಯದ ಸರಕಾರದ ಶಾಸಕರೇ ಕಾರ್ಯರೂಪದಲ್ಲಿ ಇಳಿದು ಕೆಲಸ ಮಾಡಬೇಕಾದ ಅಗತ್ಯ ಉಂಟಾಗಿದೆ.


ಇದಕ್ಕೆ ಸ್ಪಷ್ಟ ಉದಾಹರಣೆ ಪುತ್ತೂರಿನ ಶಾಸಕ ಅಶೋಕ್ ರೈ ಮಳೆ ನೀರು ಹೋಗಲು ದಾರಿ ಕಲ್ಪಿಸುವ ಕೆಲಸವನ್ನು ಸ್ವತಃ ಕೈಹಿಡಿದು, ಕಾರ್ಮಿಕನಂತೆ ಅವೈಜ್ಞಾನಿಕ ರಸ್ತೆಗಳ ಕಾಮಗಾರಿ ಕಾರ್ಯದ ವಿರುದ್ದ ತಾನೆ ಪಿಕ್ಕಾಸು ಹಿಡಿದು ಕೆಲಸಕ್ಕೆ ಇಳಿದಿದ್ದಾರೆ. ಇದೊಂದು ರಾಜಕೀಯ ಪ್ರತಿಭಟನೆ ಮಾತ್ರವಲ್ಲ; ಇದು ಸತ್ತಿರುವ ಅಧಿಕಾರ ವ್ಯವಸ್ಥೆಯ ವಿರುದ್ಧ ಪಟ್ಟು ಹಿಡಿದಿರುವ ಹೋರಾಟವಾಗಿದೆ.

*ಪ್ರಶ್ನೆಗೆ ಒಳಪಡುವುದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅವರೆಲ್ಲಿ ?*

ಮಳೆಗಾಲದ ಮುನ್ನೆಚ್ಚರಿಕೆ, ಮುಂಜಾಗ್ರತಾ ಕ್ರಮಗಳ ಜವಾಬ್ದಾರಿ ಹೊತ್ತ ಅಧಿಕಾರಿಗಳು ಏನು ಮಾಡಿದ್ದಾರೆ?

*ಜಿಲ್ಲಾಡಳಿತ ಜಿಲ್ಲಾಧಿಕಾರಿ ಏಕೆ ಸುಮ್ಮನಾಗಿದ್ದಾರೆ?*

*ಜಿಲ್ಲಾಧಿಕಾರಿಗಳು, ಜಿಳ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು , ಜಿಲ್ಲಾಡಳಿತದ ಅಧಿಕಾರಿಗಳು ಯಾವ ಮಟ್ಟಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ?*

ಜನಪ್ರತಿನಿಧಿಗಳು ರಸ್ತೆಗೆ ಇಳಿಯಬೇಕಾದರೆ, ವಿದೇಶಿ ವಾಹನಗಳಲ್ಲಿ ಓಡಾಡುವ ಸಚಿವರು ಹಾಗೂ ಅಧಿಕಾರಿಗಳು ಎ.ಸಿ. ರೂಮಿನಿಂದ ಹೊರಗೆ ಬರಬೇಕಾದ ಅಗತ್ಯ ಎಷ್ಟಿದೆ ಎಂಬುದನ್ನು ಜನತೆ ಈಗ ಗಟ್ಟಿಯಾಗಿ ಕೇಳುತ್ತಿದ್ದಾರೆ.

ಜವಾಬ್ದಾರಿಯ ಯುಗದಲ್ಲಿ ನಾವು ಬದುಕುತ್ತಿದ್ದರೆ, ಅಧಿಕಾರಿಗಳಿಂದ ಕಾರ್ಯಕ್ಷಮತೆ ನಿರೀಕ್ಷಿಸುವುದು ಜನರ ಹಕ್ಕು. ಪುತ್ತೂರಿನ ಜನತೆ ಈಗ ಎಚ್ಚರಕ್ಕೆ ಬಂದಿದ್ದಾರೆ. ಅಧಿಕಾರಿಗಳು ಕಾರ್ಯನಿರತವಾಗದಿದ್ದರೆ, ಜನತೆಯೇ ರಸ್ತೆಗಿಳಿದು ಅವರನ್ನು ಹೊರಗೆ ಕರೆತರುತ್ತಾರೆ ಎಂಬ ಎಚ್ಚರಿಕೆಯ ಸಂದೇಶ ಈಗ ರಾಜ್ಯವ್ಯಾಪಿಯಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು