1:30 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಆಗಾಗ ಮುಳುಗುವ ಮಂಗಳೂರು: ಕಾರಣವೇನು?; ಪ್ರಾಕೃತಿಕವೋ? ಮಾನವ ನಿರ್ಮಿತವೋ?; ಅಲ್ಲ, ಜನಪ್ರತಿನಿಧಿಗಳ ನಿಷ್ಕ್ರಿಯತೆಯೋ?

15/06/2025, 19:16

ವಿಶೇಷ ವರದಿ ಮಂಗಳೂರು
info.reporterkarnataka@gmail.com

ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳು ಮಳೆಗಾಲ ಆರಂಭವಾದ ತಕ್ಷಣವೇ ನೀರಿನಲ್ಲಿ ಮುಳುಗುತ್ತಿವೆ. ರಸ್ತೆಗಳು ನದಿಯಾಗುತ್ತಿವೆ, ಮನೆಗಳಿಗೆ ನೀರು ನುಗ್ಗುತ್ತಿದೆ, ಜನಜೀವನ ಅಸ್ತವ್ಯಸ್ತವಾಗುತ್ತಿದೆ.
ಈ ಸಮಸ್ಯೆಯನ್ನು “ಪ್ರಾಕೃತಿಕ ವಿಕೋಪ” ಎಂದು ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳು ಖಂಡಿತವಾಗಿ ಘೋಷಿಸುತ್ತಾರೆ. ಆದರೆ ಸ್ಥಳೀಯ ಜನರ ಅನುಭವ ಮತ್ತು ಕೆಲವು ತಜ್ಞರ ವಿಶ್ಲೇಷಣೆಗಳು ಮಾತ್ರ ಬೇರೆ ರೀತಿಯಲ್ಲಿ ಚಿತ್ರಣವೊಂದನ್ನು ಒಡ್ಡುತ್ತಿವೆ.

*ಸ್ಥಳೀಯ ಕಾಮಗಾರಿಗಳ ಮೇಲೆ ನಾಗರೀಕರ ಸಂಶಯ:*
ಸಾರ್ವಜನಿಕ ಮೂಲಸೌಕರ್ಯ ಕಾಮಗಾರಿಗಳಲ್ಲಿ ಕಂಡು ಬರುವ ಅಸಡ್ಡೆ, ಕಾಲುವೆ ಮಾರ್ಗದ ತೊಂದರೆಗಳು, ನದಿಪಾತ್ರದ ಅಕ್ರಮ ಆವರಣಗಳು, ಸರಿ ನಿಯೋಜಿಸಲ್ಪಟ್ಟ ವ್ಯವಸ್ಥೆಯ ಕೊರತೆ — ಈ ಎಲ್ಲವುಗಳು ಮಂಗಳೂರಿನಲ್ಲಿ ನೆರೆ ಸಮಸ್ಯೆಗೆ ಕಾರಣವಾಗುತ್ತಿವೆ ಎಂದು ಪ್ರಬುದ್ದ ನಾಗರಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಕಮೀಷನ್ ಕಮಿಷನರ್ ಕಾರಣ ಎನ್ನುತ್ತಾರೆ.
ಕೆಲ ಕಾಲಕ್ಕೆ ಮಾತ್ರ ಸರಿಪಡಿಸಲಾಗುವ ರಸ್ತೆ ಇಂಜಿನಿಯರಿಂಗ್, ನಕಾಶೆ ಲೈನಿನ ಮೇಲಿನ ಅಕ್ರಮ ಕಟ್ಟಡಗಳು, ಮತ್ತು ಮಳೆ ನೀರನ್ನು ಸಾಗಿಸುವ ಕೇವಲ ಕಾಗದದ ಯೋಜನೆಗಳು.

*ಭಾಷಣಕಾರ ಶಾಸಕರ ನಿಷ್ಕ್ರಿಯತೆ: ಜನರಲ್ಲಿ ಆಕ್ರೋಶ:*
ನೆರೆ ಮುಳುಗಿದ ಮನೆಗಳಿಗೆ ಭೇಟಿನೀಡಿ ಮೊತ್ತಮಾಡುವ ರಾಜಕಾರಣಿಗಳು ಬರುವಷ್ಟು ಬೇಗ ಜನರ ಸಮಸ್ಯೆ ಪರಿಹರಿಸುವ ಕೆಲಸವಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. “ಪ್ರತಿ ಬಾರಿ ಮಳೆ ಬಂದ್ರೆ ನಮಗೆ ಮನೆ ಬಿಟ್ಟು ಕಾಲುವೆ ಹೊತ್ತೊಯ್ಯಬೇಕು. ನಾವು ಬದುಕೋದು ಪುನಃ ಪುನಃ ಆರಂಭಿಸೋದೇ,” ಎಂದು ಪಾಂಡೇಶ್ವರದ ನಿವಾಸಿ ಒಬ್ಬರು ಬೇಸರ ವ್ಯಕ್ತಪಡಿಸಿದರು.

*ಜನರಿಗೆ ಅನುಕೂಲವಿಲ್ಲದ ಯೋಜನೆಗಳು:*
ಸಮಸ್ಯೆಯ ಮೂಲವೆಂದರೆ ಯೋಜನೆಗಳ ಉದ್ದೇಶ ಹಾಗೂ ಜವಾಬ್ದಾರಿಯ ಕೊರತೆ. ನಗರಾಭಿವೃದ್ಧಿಗೆ ಕೋಟ್ಯಂತರ ಹಣ ಬಿಡುಗಡೆಯಾಗುತ್ತಿದೆ. ಆದರೆ ಈ ಅನುದಾನಗಳು ಎಲ್ಲಿ ಬಳಕೆಯಾಗುತ್ತಿವೆ ಎಂಬುದರ ಮೇಲಿಲ್ಲದ ಲೆಕ್ಕಪತ್ರ, ಫಲಿತಾಂಶವಿಲ್ಲದ ಕಾಮಗಾರಿಗಳು, ಮತ್ತು ಸಾರ್ವಜನಿಕ ತಪಾಸಣೆಯ ಕೊರತೆ.

*ಪರಿಹಾರಕ್ಕೊಂದು ಮಾರ್ಗವೇ ಇಲ್ಲವೇ? ಜನರ ಜಾಗೃತಿ ಅಗತ್ಯ:
ವಿಶೇಷ ತಜ್ಞ ಸಮಿತಿಯೊಂದನ್ನು ರಚಿಸಿ, ನದಿಪಾತ್ರದ ಸಮಗ್ರ ಸಮೀಕ್ಷೆ, ಮಳೆ ನೀರಿನ ಹರಿವಿನ ತಂತ್ರಜ್ಞಾನ ಅನುಭವಿಸಿದ ನಗರಗಳ ಮಾದರಿಯನ್ನು ಅಳವಡಿಸುವಂತಹ ದಿಟ್ಟ ಕ್ರಮಗಳು ಅಗತ್ಯ. ಜವಾಬ್ದಾರಿಯುತ ನಗರ ಯೋಜನೆ ಮತ್ತು ಅಧಿಕಾರಿಗಳ ಮೇಲ್ಪರಿಹಾರಣೆಯ ವ್ಯವಸ್ಥೆಯೊಂದೇ ಮುಂದಿನ ನೆರೆ ಸಂದರ್ಭಗಳಲ್ಲಿ ಜನರ ಬದುಕು ಉಳಿಸಬಹುದು.
ಮಳೆಯು ದೇವರ ಕೊಡುಗೆ; ಆದರೆ ಅದರಿಂದ ಆಗುವ ನಾಶವು ಜನರ ದುರ್ವ್ಯವಸ್ಥೆ. ಮಂಗಳೂರು ನೆರೆ ಸಮಸ್ಯೆ ಪ್ರಾಕೃತಿಕವಲ್ಲ — ಅದು ಮಾನವ ನಿರ್ಮಿತ. ಇದು ತಪ್ಪು ಯೋಜನೆಗಳ, ನಿರ್ಲಕ್ಷ್ಯ ಆಡಳಿತದ, ಮತ್ತು ರಾಜಕೀಯ ಬೇಪರವಾಯಿನ ಪರಿಣಾಮ. ಈ ಮೌನದ ನಡುವೇ ಮೌಜು ಮಾಡುತ್ತಿರುವ ನಿರ್ಧಾರಕರ್ತರು ಎಚ್ಚರಗೊಳ್ಳುವುದು ಈಗ ಬೇಕಾಗಿರುವ ತುರ್ತು ಅಗತ್ಯ.

ಇತ್ತೀಚಿನ ಸುದ್ದಿ

ಜಾಹೀರಾತು