6:03 AM Sunday12 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2: ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ ಆರಂಭ

04/06/2025, 11:30

ಬೆಂಗಳೂರು(reporterkarnataka.com): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರಿನ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿ (ಎಂಎಪಿ) ಜೊತೆಗೆ ಕೈಜೋಡಿಸಿ, ಟರ್ಮಿನಲ್ 2 ರಲ್ಲಿ ಪ್ರಯಾಣಿಕರಿಗೆ ವಿಶಿಷ್ಟವಾದ ಸಾಂಸ್ಕೃತಿಕ ಅನುಭವವನ್ನು ನೀಡಲು ಮುಂದಾಗಿದೆ. ವಿಮಾನ ನಿಲ್ದಾಣವನ್ನು ಸಕ್ರಿಯ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವುದು ಮತ್ತು ಪ್ರಯಾಣಿಕರಿಗೆ ದಕ್ಷಿಣ ಏಷ್ಯಾದ ಕಲಾ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಬೆರೆಯಲು ಅವಕಾಶವನ್ನು ನೀಡುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ.
ಟರ್ಮಿನಲ್‌ 2ರ ಪ್ರಮುಖ ಆಕರ್ಷಣೆ ಕಲೆಯಾಗಿದ್ದು, ಈಗಾಗಲೇ 60ಕ್ಕೂ ಹೆಚ್ಚು ಕಲಾವಿದರ 210ಕ್ಕೂ ಹೆಚ್ಚು ಕಲಾಕೃತಿಗಳ ಸಂಗ್ರಹವನ್ನು ಹೊಂದಿದೆ. ಇದೀಗ ಪ್ರಾರಂಭವಾದ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಸಂವಾದಾತ್ಮಕ ಕಲಾ ಸಂಗ್ರಹವು ಟರ್ಮಿನಲ್‌ 2ರ ಸೌಂದರ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತವೆ. ಅಲ್ಲದೇ, ಹೊಸ ಕಲಾಕೃತಿಗಳ ಸ್ಥಾಪನೆಯು ಪ್ರಯಾಣಿಕರ ಬಿಡುವಿನ ಸಮಯದ ಅನುಭವವನ್ನು ಹೆಚ್ಚಿಸುತ್ತವೆ.

● ಬೇಡಿಕೆಯ ಮೇರೆಗೆ ಗ್ಯಾಲರಿ- ಪ್ರಮುಖ ಖ್ಯಾತ ಕಲಾವಿದರಾದ ಜಾಮಿನಿ ರಾಯ್, ಜಂಗರ್ ಸಿಂಗ್ ಶ್ಯಾಮ್, ಜ್ಯೋತಿ ಭಟ್, ಸುರೇಶ್ ಪಂಜಾಬಿ, ಎಲ್‌ಎನ್‌ ತಲ್ಲೂರ್‌ ಮುಂತಾದವರು ರಚಿಸಿದ ಹಲವು ಕಲಾಕೃತಿಗಳನ್ನು ಒಳಗೊಂಡ ಡಿಜಿಟಲ್ ಲೈಬ್ರರಿಯನ್ನು ಇಲ್ಲಿ ಅನುಭವಿಸಬಹುದಾಗಿದೆ. ಅಷ್ಟೆ ಅಲ್ಲದೇ, ಬಾಲಿವುಡ್ ಪೋಸ್ಟರ್‌ಗಳು, ಲಾಬಿ ಕಾರ್ಡ್‌ಗಳು ಸಹ ನೋಡಸಿಗಲಿವೆ. ಈ ಕಿರುಚಿತ್ರಗಳ ಸರಣಿಯು ಆಯ್ದ ಕಲಾವಿದರ ಜೀವನ ಮತ್ತು ಅಭ್ಯಾಸಗಳ ಬಗ್ಗೆ ನಿಕಟ ಒಳನೋಟಗಳನ್ನು ನೀಡುತ್ತದೆ.

● ಕಲಾಕೃತಿಗಳ ಸಂವಾದಾತ್ಮಕ ಅನುಭವ – ಎಸ್.ಎಚ್. ರಜಾ ಅವರ “ಯುನಿವರ್ಸ್”, ಜಾಮಿನಿ ರಾಯ್ ಅವರ “ಲಾಸ್ಟ್ ಸಪರ್”, ಎನ್.ಎಸ್. ಬೇಂದ್ರೆ ಅವರ “ದ ಲೋಟಸ್ ಸೆಲ್ಲರ್ಸ್” ಮುಂತಾದ ಅತ್ಯಂತ ಪ್ರಸಿದ್ಧ ಕಲಾಕೃತಿಗಳನ್ನು ಸ್ಪರ್ಶಾಧಾರಿತವಾಗಿ ಅನುಭವಿಸಬಹುದಾಗಿದೆ.

● ಡಿಜಿಟಲ್ ದೀಪ ಬೆಳಗಿಸುವುದು- ಭಾರತೀಯ ಸಂಪ್ರದಾಯದ ಪ್ರಕಾರ ಶುಭಾರಂಭವನ್ನು ಸೂಚಿಸುವ ದೀಪ ಬೆಳಗಿಸುವ ಪ್ರಕ್ರಿಯೆಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ‌ ಸ್ವತಃ ಪ್ರಯಾಣಿಕರೇ ಡಿಜಿಟಲ್ ರೂಪದಲ್ಲಿ ಅನುಭವಿಸಬಹುದಾಗಿದೆ.

● ಕ್ಯುಮುಲಸ್ – ಡಿಜಿಟಲ್ ಸಂಗ್ರಹ ವೀಕ್ಷಣೆ ವ್ಯವಸ್ಥೆ: ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಕ್ಯುಮುಲಸ್ ಅಪ್ಲಿಕೇಶನ್‌ ಬಳಸಿ ಸಂಗ್ರಹದಲ್ಲಿರುವ ಹಳೆಯ ಕಲಾಕೃತಿಗಳನ್ನು ಹುಡುಕಲು, ವೀಕ್ಷಿಸಲು ಮತ್ತು ಹಂಚಿಕೊಳ್ಳಲು ಅನುಕೂಲ ಕಲ್ಪಿಸಲಾಗುತ್ತದೆ.

* ವರ್ಚುವಲ್ ಶುಭಾಶಯಗಳು- ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಸಂಗ್ರಹದಲ್ಲಿನ ಕಲಾಕೃತಿಗಳಿಂದ ಪ್ರೇರಿತವಾದ ಶುಭಾಶಯಗಳನ್ನು ಡಿಜಿಟಲ್‌ ರೂಪದಲ್ಲಿ ಕಳುಹಿಸಲು ಅವಕಾಶ ಒದಗಿಸಲಾಗುತ್ತದೆ. ಜೊತೆಗೆ, ಪ್ರಯಾಣಿಕರು ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಸಂಗ್ರಹದ ಗೃಹೋಪಯೋಗಿ ಮತ್ತು ಜೀವನಶೈಲಿಯ ಉತ್ಪನ್ನಗಳ ವಿಶೇಷ ಚಿಲ್ಲರೆ ವಲಯಕ್ಕೆ ಭೇಟಿ ನೀಡಿ ಖರೀದಿಸಬಹುದಾಗಿದೆ


ಇದೇ ವೇಳೆ, ಪದ್ಮಶ್ರೀ ಪುರಸ್ಕೃತ ಭೂರಿ ಬಾಯಿ ಅವರ ಜೀವನ ಮತ್ತು ಕಲಾ ಪ್ರಯಾಣವನ್ನು ಪ್ರದರ್ಶಿಸುವ “ಭೂರಿ ಬಾಯಿ: ಮೈ ಲೈಫ್ ಅಸ್ ಆನ್ ಆರ್ಟಿಸ್ಟ್” ಎಂಬ ಪ್ರದರ್ಶನವನ್ನು ಟರ್ಮಿನಲ್ 2ರಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿ ವತಿಯಿಂದ ಆಯೋಜಿಸಲಾಗಿದೆ. ಕಲಾವಿದ ಭೂರಿ ಬಾಯಿ ಅವರ 1980ರ ದಶಕದ ಆರಂಭಿಕ ಕೃತಿಗಳಿಂದ ಹಿಡಿದು, ಇತ್ತೀಚಿನ ಭವ್ಯ ಕಲಾಕೃತಿಗಳವರೆಗೆ ಈ ಪ್ರದರ್ಶನವು ಅವರ ಕಲಾತ್ಮಕ ಬೆಳವಣಿಗೆಯ ಚಿತ್ರಣವನ್ನು ನೀಡುತ್ತದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಎಂಡಿ ಮತ್ತು ಸಿಇಒ) ಶ್ರೀ ಹರಿ ಮಾರಾರ್ ಅವರು ಮಾತನಾಡಿ, “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಮೂಲಕ ಪ್ರಯಾಣದ ಅರ್ಥವನ್ನು ನಾವು ಮರು ವ್ಯಾಖ್ಯಾನಿಸಿಸುತ್ತಿದ್ದೇವೆ. ಪ್ರಯಾಣವನ್ನು ಸಂಸ್ಕೃತಿ, ಸೃಜನಶೀಲತೆ ಮತ್ತು ಸಂಪರ್ಕದಿಂದ ಸಮೃದ್ಧವಾಗಿರುವ ಅನುಭವವನ್ನಾಗಿ ನಾವು ಪರಿಗಣಿಸುತ್ತೇವೆ. ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಜೊತೆಗಿನ ಈ ಸಹಭಾಗಿತ್ವವು ಟರ್ಮಿನಲ್ 2 ನ್ನು ಕಲಾ ಜಗತ್ತಿನ ಅನ್ವೇಷಣೆ ಮತ್ತು ತೊಡಗಿಸಿಕೊಳ್ಳುವ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವತ್ತ ಒಂದು ಹೆಜ್ಜೆಯಾಗಿದೆ. ಕಲೆಯನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಿ, ಸಂವಾದಾತ್ಮಕ ಶೈಲಿಯಲ್ಲಿ ಪ್ರಯಾಣಿಕರ ಅನುಭವದ ಭಾಗವನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ಮೂಲಕ ನಾವು ಪ್ರಯಾಣಿಕರಿಗೆ ವಿಶ್ರಾಂತಿ, ಪ್ರೇರಣೆ ಮತ್ತು ಹೊಸ ಚಿಂತನೆಗೆ ಅಮೂಲ್ಯ ಕ್ಷಣಗಳನ್ನು ಒದಗಿಸಲು ಆಶಿಸುತ್ತೇವೆ. ಹೊಸ ಉಪಕ್ರಮವು ಈ ಪ್ರದೇಶದ ಸಾಂಸ್ಕೃತಿಕ ವೈಭವವನ್ನು ವಿಮಾನ ನಿಲ್ದಾಣದ ಒಟ್ಟು ಅನುಭವದೊಂದಿಗೆ ಜೋಡಿಸುವುದು ನಮ್ಮ ಪ್ರಯತ್ನವಾಗಿದೆ” ಎಂದು ತಿಳಿಸಿದ್ದಾರೆ.
ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಸ್ಥಾಪಕ ಅಭಿಷೇಕ್ ಪೊಡ್ಡಾರ್ ಅವರು ಮಾತನಾಡಿ,
“ಕಲೆಯು ಜೀವನವನ್ನು ಸಮೃದ್ಧಗೊಳಿಸುವ ಶಕ್ತಿ ಹೊಂದಿದೆ ಎಂಬ ನಂಬಿಕೆಯೊಂದಿಗೆ, ಬಿಐಎಎಲ್ ಜೊತೆಗಿನ ಈ ವಿಶಿಷ್ಟ ಸಹಭಾಗಿತ್ವದ ಮೂಲಕ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯು ದಕ್ಷಿಣ ಏಷ್ಯಾದ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಆಸಕ್ತಿ ಮತ್ತು ಅರಿವನ್ನು ಹೆಚ್ಚಿಸಲು ಉದ್ದೇಶಿಸಿದೆ” ಎಂದು ತಿಳಿಸಿದರು.
ಪ್ರಯಾಣಿಕರಿಗೆ ವಿಶ್ವದರ್ಜೆಯ ಕಲಾತ್ಮಕ ಅನುಭವವನ್ನುನೀಡುವ ಉದ್ದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಆಧುನಿಕ ಹೆಬ್ಬಾಗಿಲಾಗಿ ತನ್ನ ಪಾತ್ರವನ್ನು ಮರು ವ್ಯಾಖ್ಯಾನಿಸುತ್ತಿದೆ. ಪ್ರಯಾಣಿಕರು ಕೇವಲ ತಡೆರಹಿತ ಸಂಪರ್ಕವಷ್ಟೇ ಅಲ್ಲದೇ, ಸೃಜನಶೀಲತೆ, ಕುತೂಹಲ ತಣಿಸುವ ಕಲೆಯ ಅನುಭವವನ್ನು ವಿಮಾನ ನಿಲ್ದಾಣದಲ್ಲಿ ಪಡೆಯಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು