10:10 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

Raichuru | ಮಸ್ಕಿ: ಸಮಾಜದ ಅಭಿವೃದ್ಧಿಗಾಗಿ ಸಂಘಟನೆ ಬಲಪಡಿಸಲು ಸಿಂಪಿ ಸಮಾಜದ ಮುಖಂಡರ ಸಭೆ

02/06/2025, 20:38

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ನಾಗಲೀಕ ಸಿಂಪಿ ಸಮಾಜದ ಬಾಂಧವರ ಸಮಾಜದ ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಂಘಟನೆಗಾಗಿ ಸಭೆ ನಡೆಸಿದರು.
ಸಮಾಜದ ಅಭಿವೃದ್ಧಿಗಾಗಿ ಮತ್ತು ಉನ್ನತಿಗಾಗಿ ಸಂಘಟನೆಯು ಅತ್ಯಂತ ಅವಶ್ಯಕವಾಗಿದೆ ಸಮಾಜದ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಸಮಾಜ ಬಾಂಧವರ ನೋವುಗಳಿಗೆ ಎಲ್ಲರೂ ಸ್ಪಂದಿಸಬೇಕೆಂದು ಸಾಮಾಜದ ಗೌರವ ಅಧ್ಯಕ್ಷರಾದ ದೊಡ್ಡಪ್ಪ ಬುಳ್ಳಾರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಿಂಪಿ ಸಮಾಜ ಭಾಂದವರಲ್ಲಿ ಎಲ್ಲಾ ಗುಣಗಳು ಅಡಕವಾಗಿವೆ. ಸದ್ಬಳಕೆ ಮಾಡಿಕೊಂಡು ರಾಜ್ಯ ಮಟ್ಟದ ಸಂಘಟನೆಗಾಗಿ ಎಲ್ಲರೂ ಒಂದಾಗೋಣ ಎಂದು ಮಸ್ಕಿ ನಾಗಲೀಕ ಸಿಂಪಿ ಸಾಮಾಜದ ಅಧ್ಯಕ್ಷರು ಮತ್ತು ಪುರಸಭೆ ಸದಸ್ಯರಾದ ಸುರೇಶ ಹರಸೂರ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದು ಅವರು ನುಡಿದರು.
ಸಮಾಜದ ಮಹಿಳಾ ಸಬಲೀಕರಣ ಮತ್ತು ಕರಕುಶಲ ಕಲೆಗಳು ಮತ್ತು ಟೈಲರಿಂಗ್ ವೃತ್ತಿಗಳಿಗೆ ಆದ್ಯತೆ ನೀಡಿ ಆರ್ಥಿಕವಾಗಿ ಸುಧಾರಣೆಗೆ ಒತ್ತು ನೀಡಬೇಕು ಎಂದು ಬಳ್ಳಾರಿ ಜಿಲ್ಲಾ ಸಂಘಟನಾ ಸಂಚಾಲಕರಾದ ಸುರೇಶ ನಾಗ್ಲಿಕರ ತಿಳಿಸಿದರು.
ನಮ್ಮ ಸಮಾಜದ ಪ್ರತಿಭಾನ್ವಿತ ಯುವಕರು ರಾಜ್ಯಮಟ್ಟ ಹಾಗೂ ರಾಷ್ಟ್ರ ಮಟ್ಟದ ಸಂಘಟನೆಗಾಗಿ ಒತ್ತು ನೀಡಬೇಕು ಮತ್ತು ಸಮುದಾಯದ ಉನ್ನತಿಗಾಗಿ ಸಂಘಟನೆಯನ್ನು ಮಾಡಬೇಕೆಂದು ರಾಯಚೂರು ಜಿಲ್ಲಾ ಸಂಘಟನಾ ಸಂಚಾಲಕರು ಮತ್ತು ಮಸ್ಕಿ ಸಮಾಜದ ಕಾರ್ಯದರ್ಶಿಯಾದ ಶ್ರೀಧರ ಮಸ್ಕಿ ಹೇಳಿದರು.
ನಮ್ಮ ಸಮಾಜದ ಸಮಾವೇಶಗಳು ಸಾಮಾಜಿಕ ಸುಧಾರಣೆಯ ದೃಷ್ಟಿಯಿಂದಲೂ ಹಾಗೂ ಸ್ಥಳೀಯ ಸಂಘಟನೆಗೆ ಸಮಾವೇಶಗಳು ಅತ್ಯಂತ ಅವಶ್ಯಕ ಹಾಗೂ ಶೀಘ್ರದಲ್ಲೇ ಸಮಾಜ ಮುಖಂಡರ ಸಭೆ ಕರೆದು ಸಮಾವೇಶ ಮಾಡಲು ಚರ್ಚೆ ನಡೆಸಬೇಕೆಂದು ಯಾದಗಿರಿ ಜಿಲ್ಲಾ ಸಂಘಟನಾ ಸಂಚಾಲಕರಾದ ಪ್ರಕಾಶ ಬಣಗಾರ ಹೇಳಿದರು.
ರಾಯಚೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸಿಂಪಿ ಸಮಾಜದ ಬಾಂಧವರು ಇರುವ ಸ್ಥಳ ಮಸ್ಕಿ ಇಲ್ಲಿ ಎಲ್ಲರೂ ಶ್ರಮವಹಿಸಿ ಕಾರ್ಯಕ್ರಮ ಯಶಸ್ವಿಗಾಗಿ ದುಡಿಯುತ್ತಿರುವ ಸಮಾಜ ಎಂದು ಸಾಮಾಜದ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂದ್ಗಲ ತಿಳಿಸಿದರು.
ಈ ಸಭೆಯಲ್ಲಿ ಸಾಂಬಾಶಿವಪ್ಪ ಧನ ಶೆಟ್ಟಿ,ವೀರೇಶ ಆನೆಹೊಸೂರ,ಶರಣಪ್ಪ ಅನ್ವರಿ.ಶಿವಪ್ಪ ಮುದ್ಗಲ್,ವೀರಭದ್ರಪ್ಪ ಧನಶೆಟ್ಟಿ,ಶಿವಪುತ್ರಪ್ಪ ಧನಶೆಟ್ಟಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು