9:34 PM Sunday18 - October 2026
ಬ್ರೇಕಿಂಗ್ ನ್ಯೂಸ್
ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20…

ಇತ್ತೀಚಿನ ಸುದ್ದಿ

ಅಹಲ್ಯಾಬಾಯಿ ಹೋಳ್ಕರ್ ಅಖಂಡ ರಾಷ್ಟ್ರ ತಪಸ್ವಿನಿ: ಲೇಖಕಿ ಮೇಘಾ ಪ್ರಮೋದ್

01/06/2025, 15:18

ಬೆಂಗಳೂರು(reporterkarnataka.com): ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ರಾಷ್ಟ್ರದ ಅಖಂಡತೆಯನ್ನು ನಿರ್ಮಿಸುವುದರಲ್ಲಿ ಪಾತ್ರವಹಿಸಿದ ಅಖಂಡ ರಾಷ್ಟ್ರ ತಪಸ್ವಿನಿ ಎಂದು ಲೇಖಕಿ ಮೇಘಾ ಪ್ರಮೋದ್ ಹೇಳಿದರು.
ಬಸವನಗುಡಿಯ ಅಬಲಾಶ್ರಮದಲ್ಲಿ ನಡೆದ ಮಂಥನ ಶಂಕರಪುರ ವತಿಯಿಂದ ‘ಅಖಂಡ ರಾಷ್ಟ್ರ ತಪಸ್ವಿನಿ ಅಹಲ್ಯಾಬಾಯಿ ಹೋಳ್ಕರ್’ ಪುಸ್ತಕದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪುನರುತ್ಥಾನಕ್ಕಾಗಿ ಮಹತ್ವದ ಕೊಡುಗೆ ನೀಡಿದ ಅಹಲ್ಯಾಬಾಯಿ ಹೋಳ್ಕರ್ ಅವರ ಕುರಿತು ನಮ್ಮ ಪಠ್ಯಪುಸ್ತಕಗಳು ಕಡೆಗಣಿಸಿವೆ. ಆದರೆ ರಾಷ್ಟ್ರದ ಸರ್ವಾಂಗೀಣ ಉನ್ನತಿಗಾಗಿ ಹಲವು ಮಜಲುಗಳಲ್ಲಿ ಕೊಡುಗೆ ನೀಡಿದ ದಕ್ಷ ಆಡಳಿತಗಾರ್ತಿ, ರಾಜನೀತಿತಜ್ಞೆ, ಲೋಕಮಾತೆ, ಪುಣ್ಯಶ್ಲೋಕಿ ಅಹಲ್ಯಾಬಾಯಿ ಹೋಳ್ಕರ್ ಎಂದರು.


ಅಹಲ್ಯಾ ಬಾಯಿ ಹೋಳ್ಕರ್ ಅವರ ಆಡಳಿತದ ಅವಧಿಯಲ್ಲಿ ಬ್ರಿಟಿಷರಾದಿಯಾಗಿ, ನಾಡಿನೊಳಗಿನ ಅನೇಕ ಮತಾಂಧರೂ ತಮ್ಮ ರಾಜಕೀಯ ಅಸ್ತಿತ್ವವನ್ನು ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದರು.‌ ಆದರೆ ಚಾಣಾಕ್ಷ ಅಹಲ್ಯಾ ಬಾಯಿ ಹೋಳ್ಕರ್ ಅವರಿಗೆ ಶತ್ರುಬೋಧೆ ಬಹಳ ಚೆನ್ನಾಗಿತ್ತು. ಟಿಪ್ಪುವನ್ನು ನಂಬಿಕೆಗೆ ಅನರ್ಹನಾದ ವ್ಯಕ್ತಿ ಎಂದೂ, ಬ್ರಿಟಿಷರ ಕುತಂತ್ರದ ಬಗ್ಗೆ ಎಚ್ಚರಿಕೆ ವಹಿಸಬೇಕೆಂದೂ ತಿಳಿಸಿದ್ದರು ಎಂದು ನುಡಿದರು.
ಅಂದಿನ ಕಾಲದಲ್ಲೇ ಮಹಿಳೆಯರ ಉತ್ಕೃಷ್ಟ ಜೀವನಕ್ಕಾಗಿ ಬಾಲ್ಯ ವಿವಾಹ ರದ್ಧತಿ, ಮಹಿಳಾ ಸೇನೆ ಮತ್ತು ಅದರಲ್ಲಿ ವಿಧವೆಯರ ಸಹಭಾಗಿತ್ವ, ಗುಡಿ ಕೈಗಾರಿಕೆಗಳಿಗೆ ಮಹತ್ವ, ಮಾಹೇಶ್ವರಿ ಸೀರೆಗಳ ತಯಾರಿಕೆ ಮುಂತಾದವುಗಳಿಗೆ ಪ್ರೋತ್ಸಾಹ ನೀಡಿದರು ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರದ ಉದ್ದಗಲಕ್ಕೂ ಅನೇಕ ತೀರ್ಥಕ್ಷೇತ್ರಗಳ ನಿರ್ಮಾಣ, ಪುನರುಜ್ಜೀವನ, ಗಂಗಾಜಲ ವಿತರಣೆ, ಸ್ವಾವಲಂಬಿ ಆರ್ಥಿಕತೆಗೆ ಒತ್ತು ನೀಡಿ ಎಲ್ಲಾ ಸೇವಾಕಾರ್ಯಗಳಿಗೆ ರಾಜ್ಯದ ಬೊಕ್ಕಸದ ಹಣವನ್ನು ಬಳಸದೆ ಸ್ವಂತದ್ದೇ ಹಣ ಬಳಸಿ ಅಹಲ್ಯಾಬಾಯಿ ಹೋಳ್ಕರ್ ಎಲ್ಲಾ ತಲೆಮಾರುಗಳಿಗೂ ಮಾದರಿಯಾಗಿದ್ದಾರೆ ಎಂದು ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು