2:32 AM Friday3 - October 2025
ಬ್ರೇಕಿಂಗ್ ನ್ಯೂಸ್
Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ…

ಇತ್ತೀಚಿನ ಸುದ್ದಿ

ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ: ಜಿಲ್ಲಾ ಸಹಕಾರ ಭಾರತಿ ಸಂಸ್ಥೆಯ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ

21/05/2025, 15:46

ಮಂಗಳೂರು(reporterkarnataka.com): ಇತ್ತೀಚೆಗೆ ನಡೆದ ದ. ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಭಾರತಿಯ ವಿಜೇತ ಅಭ್ಯರ್ಥಿಗಳನ್ನು ಮಂಗಳೂರು ಮಹಾನಗರ ಜಿಲ್ಲೆ ಮತ್ತು ಸಹಕಾರ ಭಾರತಿ ದ. ಕ. ಜಿಲ್ಲೆಯ ವತಿಯಿಂದ ನಗರದ ಕ್ಯಾಂಪ್ಕೊ ಸಭಾ ಭವನದಲ್ಲಿ ಅಭಿನಂದಿಸಲಾಯಿತು. ಹಿರಿಯ ಸಹಕಾರಿ, ಸಹಕಾರ ಭಾರತಿ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ ಮತ್ತು ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಪದ್ಮನಾಭ ಕೊಂಕೋಡಿ ಅವರು ತಮ್ಮ ಅಭಿನಂದನಾ ಭಾಷಣದಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ಹಾಗೂ ಚುನಾವಣೆಯಲ್ಲಿ ಶ್ರಮವಹಿಸಿದ ಕಾರ್ಯಕರ್ತರನ್ನು ಪ್ರಶಂಶಿಸಿದರು. ಕರ್ನಾಟಕದಲ್ಲಿ ಸಹಕಾರ ಭಾರತಿ ಬೆಳೆದು ಬಂದ ವಿವರ, ಈ ಪಥದಲ್ಲಿ ಏಳು ಬೀಳುಗಳು, ಸಾಧನೆ, ಅತ್ತು ಅದರ ಹಿಂದಿನ ಪರಿಶ್ರಮ ಎಲ್ಲವೂ ಸೇರಿ ಒಟ್ಟಾರೆ ಸಂಘಟನೆಯ ಬೆಳವಣಿಗೆಯೇ ಒಂದು ಪಾಠ ಮತ್ತು ಸಂಘಟನೆಯು ವ್ಯಕ್ತಿಯ ಯಶಸ್ಸಿಗೆ ಉತ್ತಮ ಅನುಭವದ ಸಾರವಾಗಲಿದೆ ಎಂದರು.
ನಿರ್ದೇಶಕರಾಗಿ ಆಯ್ಕೆಯಾದವರು, ಗೊ ಸಾಕಾಣೆದಾರರ ಸಂಕಷ್ಟ, ಮತ್ತು ಅಹವಾಲುಗಳಿಗೆ ತುರ್ತು ಸ್ಪಂದಿಸುವ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಹಕಾರ ಭಾರತಿಯ ಮಾಜಿ ಸಂಘಟನಾ ಕಾರ್ಯದರ್ಶಿ ಸೂರ್ಯಕಾಂತ್ ಕೇಳ್ಕಾರ್ ಅವರು ಸಂಘಟನೆ ಬೆಳೆಯುವ ದೃಷ್ಟಿಯಿಂದ ಕೆಲವು ಬಾರಿ ತನ್ನ ಸ್ವಹಿತವನ್ನು ಬದಿಗಿಡುವ ಸಂದರ್ಭ ಬಂದಾಗಲೂ ಸದಸ್ಯರುಗಳು ಸಂಘಟನೆಯ ಬಗ್ಗೆ ಆಸಕ್ತಿ ಕಳೆದು ಕೊಳ್ಳಬಾರದು ಎಂದು ಹೇಳಿದರು.
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಒಕ್ಕೂಟದ ನಿಕಟ ಪೂರ್ವ ನಿರ್ದೇಶಕ ಶ್ರೀ ನರಸಿಂಹ ಕಾಮತ್ ಅವರು ಮಾತನಾಡಿ ಸಹಕಾರ ಭಾರತಿ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ,ಮೂಲಕ ಜವಾಬ್ದಾರಿ ನಿರ್ವಹಿಸುವ ಕುರಿತು ಹೇಳಿದರು.
ವಿಭಾಗ ಸಂಘಟನಾ ಪ್ರಮುಖ್ ಮೋಹನ್ ಕುಂಬ್ಲೇಕರ್ ತನ್ನ ಅಭಿಪ್ರಾಯ ಮಂಡಿಸಿದರು. ಇದೇ ಸಂದರ್ಭದಲ್ಲಿ ಸಹಕಾರ ಭಾರತಿ ದ.ಕ. ಜಿಲ್ಲಾಧ್ಯಕ್ಷ ಹಾಗೂ ಒಕ್ಕೂಟ ನಿರ್ದೇಶಕರಲ್ಲಿ ಒಬ್ಬರಾದ ಸುಧಾಕರ ರೈ ಅವರು,ದ.ಕ ಹಾಲು ಒಕ್ಕೂಟದ ಚುನಾವಣಾ ಸಂದರ್ಭ ಸಹಕಾರ ಮತ್ತು ಮಾರ್ಗದರ್ಶನ ನೀಡಿದ ಸಂಘ ಹಾಗೂ ಸಹಕಾರ ಭಾರತಿಯ ವರಿಷ್ಠರು ಮತ್ತು ಭಾರತೀಯ ಜನತಾ ಪಕ್ಷದ ಜನ ಪ್ರತಿನಿಧಿಗಳು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಹಾಲು ಒಕ್ಕೂಟದ ಚುನಾವಣಾ ಅಭ್ಯರ್ಥಿ ಹಾಗೂ ನಿಕಟ ಪೂರ್ವ ನಿರ್ದೇಶಕಿ, ಸಹಕಾರ ಭಾರತಿ ದ. ಕ. ಜಿಲ್ಲಾ ಮಹಿಳಾ ಪ್ರಮುಖ್ ಸುಭದ್ರಾ ರಾವ್ ಅವರು ತನ್ನ ಅನುಭವ ಹಂಚಿಕೊಂಡು, ವೈಯಕ್ತಿಕ ಸೋಲು ಗೆಲುವುಗಳನ್ನು ಸಮಾನ ಮನಸ್ಕರಾಗಿ ಸ್ವೀಕರಿಸುವಂತೆ ಕರೆ ನೀಡಿದರು. ಸಂಘಟನೆಯನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ತೊಡಗಿಸಿ ಕೊಳ್ಳುವ ಕುರಿತು ಹೇಳಿದರು.
ಮಂಗಳೂರು ಮಹಾನಗರ ಜಿಲ್ಲೆಯ ಅಧ್ಯಕ್ಷರಾದ ಜಿ. ಆರ್. ಪ್ರಸಾದ್ ಸ್ವಾಗತಿಸಿ ಪ್ರಸ್ತಾವನೆಗೈದರು. ದಯಾನಂದ ಅಡ್ಯಾ‌ರ್ ಅವರು ವಂದಿಸಿದರು. ಜಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು