ಇತ್ತೀಚಿನ ಸುದ್ದಿ
ಕೂಡ್ಲಿಗಿ: ಬಂಡಿ ಓಟದ ಸ್ಪರ್ಧೆ; ಆಂಧ್ರ ಅನಂತಪುರದ ಅಗಸ್ತ್ಯ ಹಾಗೂ ಭೀರಗೆ ಪ್ರಥಮ ಸ್ಥಾನ; ಕೂಡ್ಲಿಗಿಯ ಜಾಕಿ ಜೋಡೆತ್ತು ದ್ವಿತೀಯ
19/05/2025, 17:07

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದಲ್ಲಿ ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಘೋಷ ವಾಕ್ಯದಡಿ ಶ್ರೀಊರಮ್ಮ ದೇವಿ ಜಾತ್ರೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರೈತರ ಜೋಡಿ ಬೇಸಾಯ ಎತ್ತಿನ ಬಂಡಿ ಓಟ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಆಂಧ್ರದ ಅನಂತಪುರದ ಅಗಸ್ತ್ಯ ಹಾಗೂ ಭಿರ ಜೋಡೆತ್ತುಗಳು ಪಡೆದು ಕೊಂಡವು.
ಪಟ್ಟಣದ ವಾಲ್ಮೀಕಿ ಸಮುದಾಯದ ಯುವ ಮುಖಂಡ ಕುಸ್ತಿ ದುರ್ಗಣ್ಣ ಹಾಗೂ ಸ್ನೇಹಿತರು ಮತ್ತು ಪಟ್ಟಣದ ಸಕಲ ದೈವಸ್ಥರ ಸಹಯೋಗದಲ್ಲಿ. ಪಟ್ಟಣದ ಹೊರ ವಲಯ ಹೊಸಪೇಟೆ
ರಸ್ತೆಯಲ್ಲಿ ದಿವಂಗತ ಗುಳಿಗಿನಾಗರಾಜರವರ ಹೊಲದಲ್ಲಿ ಸ್ಪರ್ಧೆ ಜರುಗಿತು. ಶಾಸಕ ಡಾ. ಎನ್. ಟಿ. ಶ್ರೀನಿವಾಸ್ , ಮಾಜಿ ಸಚಿವ ಶ್ರೀರಾಮುಲು , ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲ್ಲಿ ಸಿವಪ್ಪನಾಯಕ ಸೇರಿದಂತೆ ಪಟ್ಟಣ ಪಂಚಾಯ್ತಿ ಸಧಸ್ಯರು , ವಿವಿದ ಜನಪ್ರತಿನಿಧಿಗಳು , ಪಟ್ಟಣ ಹಿರಿಯರು ಗಣ್ಯರು. ವಿವಿದ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. *ಸ್ಪರ್ಧೆಯಲ್ಲಿ ಬಹುಮಾನ ಪಡೆದ ಜೋಡೆತ್ತುಗಳು-* ಮೇ 15 ಹಾಗೂ 16ರಂದು ಜರುಗುವ ಸ್ಪರ್ಧೆಯಲ್ಲಿ, ಕೂಡ್ಲಿಗಿ ಪಟ್ಟಣ ಸೇರಿದಂತೆ , ನೆರೆ ರಾಜ್ಯದ ಆಂಧ್ರ ಪ್ರದೇಶದ ಅನಂತಪುರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ತಾಲೂಕುಗಳಿಂದ ಆಗಮಿಸಿದ್ದ, ಒಟ್ಟು 47 ಜೋಡೆತ್ತುಗಳು ಬಂಡಿ ಸಮೇತ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯ ನಿಯಮಾನುಸಾರ ಸ್ಪರ್ಧೆಯಲ್ಲಿ ಭಾಗವಹಿಸಿ , ಪ್ರಥಮ (100 ,101)ರೂ ನಗದು ಬಹುಮಾನವನ್ನು ಆಂದ್ರ ಪ್ರದೇಶದ ಅನಂತಪುರದ ಅಗಸ್ತ್ಯ ಹಾಗೂ ಭೀರ ಎಂಬ ಜೋಡೆತ್ತುಗಳು ಪಡೆದಕೊಂಡವು. ದ್ವಿತೀಯ ಬಹುಮಾನವನ್ನು ಕೂಡ್ಲಿಗಿಯ ಜಾಕಿ ಜೋಡೆತ್ತುಗಳು (50 ,101ರೂ ನಗದು)ಪಡೆದುಕೊಂಡಿದ್ದು. ತೃತೀಯ ಬಹುಮಾನವನ್ನು ಕೂಡ್ಲಿಗಿಯ ಸೋಲಿಲ್ಲದ ಸರದಾರರು ಜೋಡೆತ್ತುಗಳು (25 ,101ರೂ ನಗದು) ಮತ್ತು ಉತ್ತಮವಾಗಿ ಸ್ಪರ್ಧೆ ನೀಡಿ ಪ್ರಯತ್ನ ಮಾಡಿದ , ವಿವಿದ ಜೋಡೆತ್ತುಗಳಿಗೆ ಸಮಾಧಾನಕರ ಟ್ರೋಪಿ ನೀಡಲಾಗಿದೆ ಎಂದು ಮಾಹಿತಿ ಇದೆ. ಸ್ಪರ್ಧೆಯ ಸಂಚಾಲಕರಾದ ದುರ್ಗಪ್ಪ , ಕಾಯಿಕೆಡವ ಕರಿವೀರಪ್ಪರ ವೀರೇಶ , ಕಾಯಿಕೆಡವ ವಿಜಯಕುಮಾರ , ಕಾಯಿಕೆಡವ ಪತ್ರೆಪ್ಪರ ವೀರೇಶ ಸೇರಿದಂತೆ ಮುಂತಾದವರು ಇದ್ದರು.