10:21 PM Sunday18 - October 2026
ಬ್ರೇಕಿಂಗ್ ನ್ಯೂಸ್
ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20…

ಇತ್ತೀಚಿನ ಸುದ್ದಿ

ಮಸ್ಕಿ: ಗಚ್ಚಿನ ಮಠದಲ್ಲಿ ಪಕ್ಷಿಗಳಿಗೆ ನೀರಿನ ಅರವಟಿಗೆ ಕಾರ್ಯಕ್ರಮ

17/05/2025, 00:44

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ

info.reporterkarnataka@gmail.com

ಪ್ರಕೃತಿ ಫೌಂಡೇಶನ್ ಹಾಗೂ ಜಗದ್ಗುರು ರೇಣುಕಾಚಾರ್ಯ ಯುವ ಘಟಕ ವತಿಯಿಂದ ಕುಟುಂಬ ದಿನಾಚರಣೆ ಪ್ರಯುಕ್ತ ಪಕ್ಷಿಗಳಿಗೆ ನೀರಿನ ಅರವಟಿಗೆ ಕಾರ್ಯಕ್ರಮ ನಡೆಯಿತು.
ಗಚ್ಚಿನ ಮಠದಲ್ಲಿ ಮರಗಳಿಗೆ ಮಣ್ಣಿನ ಮಡಕೆ ಕಟ್ಟಿ, ಮಡಕೆಯಲ್ಲಿ ನೀರು, ಕಾಳು, ಅಕ್ಕಿಯನ್ನು ಹಾಕುವ ಮೂಲಕ ಪಕ್ಷಿಗಳಿಗೆ ದಾಹ, ಹಸಿವು ನೀಗಿಸುವ ಉತ್ತಮ ಕಾರ್ಯ ಎಂದು ಜಂಗಮ ಸಮಾಜದ ಯುವ ಘಟಕದ ಅಧ್ಯಕ್ಷ ಸಿದ್ದಯ್ಯ ಹೆಸರೂರು ಹಿರೇಮಠ ಹೇಳಿದರು.
ಪ್ರಕೃತಿ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ, ಶಿವಮೂರ್ತಿ ಗದ್ಗಿಮಠ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ 5ನೇ ವರ್ಷದ ನಮ್ಮ ನಡೆ ಪ್ರಾಣಿ, ಪಕ್ಷಿಗಳ ರಕ್ಷಣೆ ಕಡೆ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ .
ಬಿರು ಬೇಸಿಗೆಯಲ್ಲಿ ಪ್ರಕೃತಿಯಲ್ಲಿ ಕುಡಿಯಲು ನೀರಿನ ತೀವ್ರ ಕೊರತೆಯಿಂದ ಪ್ರಾಣಿ ಪಕ್ಷಿಗಳು ಸಂಕಷ್ಟಕ್ಕೀಡಾಗುತ್ತಿವೆ. ಹಾಗಾಗಿ ಸಾರ್ವಜನಿಕರು ಪ್ರಾಣಿ, ಪಕ್ಷಿಗಳಿಗಾಗಿ ತಮ್ಮ ತಮ್ಮ ಮನೆಯ ಮುಂದೆ ಹಾಗೂ ಮನೆಯ ಮೇಲೆ ನೀರು, ಕಾಳು ಇತರೆ ಧಾನ್ಯ ಅಥವಾ ಆಹಾರವನ್ನು ಇರಿಸಿ ಪ್ರಾಣಿ ಪಕ್ಷಿಗಳ ದಾಹ, ಹಸಿವು ನೀಗಿಸಿ ಮಾನವೀಯತೆ ಮೆರೆಯೋಣ. ಮೂಕ ಪ್ರಾಣಿ ಪಕ್ಷಿಗಳ ಸಂರಕ್ಷಣೆ ನಮ್ಮನಿಮ್ಮೆಲರ ಆದ್ಯ ಕರ್ತವ್ಯವಾಗಿದೆ ಎಂದರು.
ಪ್ರಸ್ತುತ ಮನುಷ್ಯ ಆಧುನಿಕ ನಾಗರಿಕತೆ ಅಪ್ಪಿಕೊಳ್ಳುತ್ತಿದ್ದು, ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ. ಈಚೆಗೆ ಅವಿಭಕ್ತ ಕುಟುಂಬಗಳು ಮರೆಯಾಗು­ತ್ತಿರುವುದೂ ಅರಾಜಕತೆಯ ಸಮಾಜ ನಿರ್ಮಾಣಕ್ಕೆ ಕಾರಣವಾ­ಗುತ್ತಿದೆ ಎಂದು ಜಂಗಮ ಸೇವಾ ಸಮಿತಿ ಯುವ ಘಟಕದ ಕಾರ್ಯದರ್ಶಿ ಯಾದ ವೀರೇಶ ಕ್ಯಾತ್ನಟ್ಟಿ ಅವರು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ, ಜಂಗಮ ಸಮಾಜದ ಅಧ್ಯಕ್ಷ ಕರಿಬಸವಯ್ಯ ಸಿಂಧನೂರುಮಠ,ಶಿವಶಂಕರಯ್ಯ ಸ್ವಾಮಿ ಗಚ್ಚಿನಮಠ, ಮಲ್ಲಿಕಾರ್ಜುನ, ಗ್ಯಾನಪ್ಪ ಮೆದಿಕಿನಾಳ, ಮಾರುತಿ ಜಿನ್ನಾಪುರ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು