ಇತ್ತೀಚಿನ ಸುದ್ದಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಪ್ರತಿಮೆ ಅನಾವರಣ
14/05/2025, 20:51

ಬೆಂಗಳೂರು(reporterkarnataka.com): ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಂತಲಾ ಸಿಲ್ಕ್ಸ್ ಮುಂಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಪ್ರತಿಮೆ ಅನಾವರಣ ಮತ್ತು ವೃತ್ತ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಸಚಿವರುಗಳಾದ ಬೋಸರಾಜು, ಸುಧಾಕರ್, ಶಾಸಕರುಗಳಾದ ಪಿ.ಎಂ.ಅಶೋಕ್ ರಿಜ್ವಾನ್ ಅರ್ಹದ್, ವಿಧಾನ ಪರಿಷತ್ ಸಚೇತಕ ಸಲೀಮ್ ಅಹಮದ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ಟಬೂ ದಿನೇಶ್ ಗುಂಡೂರಾವ್, ಅನನ್ಯಾ ರಾವ್ ಅವರು ಪ್ರತಿಮೆಯನ್ನು ಉದ್ಘಾಟನೆಗೊಳಿಸಿದರು.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ರವರ ಪುತ್ಥಳಿ ಮತ್ತು ವೃತ್ತ (ಸರ್ಕಲ್)ಅನಾವರಣ ಮಾಡಲಾಗಿದೆ. ಗುಂಡೂರಾವ್ ರವರು ಮುಖ್ಯಮಂತ್ರಿಯಾಗಿದ್ದಾಗ, ಜನತಾ ಪಕ್ಷದಲ್ಲಿ ಇದ್ದೇ, ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಅವರನ್ನು ನೋಡಲು ಹೋಗಿದ್ದೇ.
1983ರಲ್ಲಿ ಮೂರು ವರ್ಷ ಮುಖ್ಯಮಂತ್ರಿಯಾಗಿದ್ದರು, ದೇವರಾಜ ಅರಸು ಕಾಂಗ್ರೆಸ್ ತೊರೆದಾಗ, ಗುಂಡೂರಾವ್ ರವರು ಕಾಂಗ್ರೆಸ್ ಪಕ್ಷದಲ್ಲಿ ಉಳಿದರು, ದೇವರಾಜ ಅರಸುರವರ ಪಾರ್ಟಿ ಒಂದು ಸೀಟು ಗೆಲ್ಲಲಿಲ್ಲ ಲೋಕಸಭಾ ಚುನಾವಣೆಯಲ್ಲಿ.
ಎಫ್.ಎಂ.ಖಾನ್ ರವರು ಇಂದಿರಾ ಗಾಂಧಿರವರ ಪೋಟೋ ತೋರಿಸಿದರೆ ಸಾಕು ಗೆಲ್ಲುತ್ತಿರ ಎಂದು ಹೇಳಿದ್ದರು ಅದರಂತೆ ಆರ್.ಗುಂಡೂರಾವ್ ರವರ ನೇತೃತ್ವದಲ್ಲಿ 27 ಲೋಕಸಭಾ ಕ್ಷೇತ್ರದಲ್ಲಿ ವಿಜಯಶಾಲಿಯಾದರು ಎಂದರು.
ಮೈಸೂರಿನಲ್ಲಿ ರೈತ ಸಂಘ ಚರ್ಚೆಯಲ್ಲಿ ನಂಜುಂಡಸ್ವಾಮಿರವರ ಜೊತೆಯಲ್ಲಿ ನಾನು ಭಾಗವಹಿಸಿದ್ದೇ. ಅಂದೇ ನಾನು ಗುಂಡೂರಾವ್ ರವರನ್ನ ನೇರ ಭೇಟಿ ಮಾಡಿದೆ.
ಆರ್.ಗುಂಡೂರಾವ್ ರವರು ದಕ್ಷ ಆಡಳಿತಗಾರ ಎಂಬುದು ಮುಖ್ಯ, ಮುಖ್ಯಮಂತ್ರಿಯಾಗಿ ಜನಪರ ಕೆಲಸ ಮಾಡಿದ್ದಾರೆ, ಆನೇಕ ಕೆಲಸ ಮಾಡಿ ಸಾಕ್ಷ್ಮಿ ಗುಡ್ಡೆಗಳು ಇವೆ, ಶಿಕ್ಷಣಕ್ಕೆ ಒತ್ತು ನೀಡಿದರು.
ವರ್ಗಾವಣೆ ನೀತಿಯಲ್ಲಿ ಕಠಿಣ ನಿಲುವು ತಾಳಿದ್ದರು, ದಿ.ಮಾಜಿ ಪ್ರಧಾನಿ ಇಂದಿರಾಗಾಂಧಿ, ಸಂಜಯ್ ರವರ ಹತ್ತಿರ ನಿಕಟ ಸಂಪರ್ಕವಿತ್ತು ಎಂದು ಸಿದ್ದರಾಮಯ್ಯ ನುಡಿದರು.
ರಾಜಕೀಯದಲ್ಲಿ ಹಲವಾರು ಜನರನ್ನ ಬೆಳಸಿದರು, 44 ವರ್ಷ ವಯಸ್ಸಿನಲ್ಲಿ ಮುಖ್ಯಮಂತ್ರಿಯಾದರು.
ಮೂರು ವರ್ಷ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ ಅವರ ಪ್ರತಿಮೆ ಸ್ಥಾಪಿಸಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.
ಸಚಿವ ದಿನೇಶ್ ಗುಂಡೂರಾವ್
ಅವರು ಮಾತನಾಡಿ ನಮ್ಮ ತಂದೆಯವರಾದ ಆರ್.ಗುಂಡೂರಾವ್ ರವರು ಮುಖ್ಯಮಂತ್ರಿಯಾಗಿರುವ ಇತಿಹಾಸ, ಬ್ರಾಹ್ಮಣ ಸಮುದಾಯ, ಶಿಕ್ಷಕ ಕುಟುಂಬದ ಮಗನಾದ ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದರು.ಹಂತ, ಹಂತವಾಗಿ ಬೆಳದ ಎರಡು ಬಾರಿ ಶಾಸಕರಾಗಿ ನಂತರ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾದರು. ರಾಷ್ಟ್ರ ಮಟ್ಟದ ರಾಜಕಾರಣ ತಮ್ಮ ಛಾಪು ಮೂಡಿಸಿದರು. ಮೂರು ವರ್ಷದ ಮುಖ್ಯಮಂತ್ರಿಯಾಗಿ ಆಡಳಿತ ಅವಧಿಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣ 40 ವರ್ಷಗಳ ಹಿಂದೆ ಸ್ಥಾಪಿಸಿದರು, ನಗರ ಸಿಲಿಕಾನ್ ಸಿಟಿಯಾಗಿ ಬೆಳಯಲು ಕಾರಣರಾದರು, ಇಂಜನಿಯರ್,ವೈದ್ಯಕೀಯ ಕಾಲೇಜು ಸ್ಥಾಪನೆ ಮತ್ತು ವಿಧಾನಸೌಧ ಮುಂಭಾಗ ಅಂಬೇಡ್ಕರ್ ಪ್ರತಿಮೆ, ವಿಧಾನಸೌಧ ಎಲ್ಲ ಕಛೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಮತ್ತು ವರ್ಗಾವಣೆಯಲ್ಲಿ ಕಠಿಣ ನಿಲುವು ಮತ್ತು ವಿಶ್ವ ಕನ್ನಡ ಸಮ್ಮೇಳನ, ಮೈಸೂರು ಕಲಾಮಂದಿರ, ಜಂಗಲ್ ಲಾಡ್ಜ್ ಹಲವಾರು ಜನ ಪರ ಕಾರ್ಯ ಮಾಡಿದ ಧೀಮಂತ ನಾಯಕರು, ಅಡತಡೆ ಬಂದರು ವರ್ಣರಂಜಿತ ರಾಜಕಾರಣಿ ಎಂದು ಕೀರ್ತಿ ಪಡೆದರು ಎಂದರು.