ಇತ್ತೀಚಿನ ಸುದ್ದಿ
Chikkamagaluru | ಯುದ್ಧ ಗೆದ್ದು ಬರಲಿ ಭಾರತ: ಕೊಟ್ಟಿಗೆಹಾರದ ಅತ್ತಿಗೆರೆ ಸೋಮೇಶ್ವರನಿಗೆ ವಿಶೇಷ ಪೂಜೆ
08/05/2025, 14:06

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ, ಕೊಟ್ಟಿಗೆಹಾರ ಹತ್ತಿರದ ಅತ್ತಿಗೆರೆ ಗ್ರಾಮದಲ್ಲಿ ಭಾರತೀಯ ಸೇನೆಗೆ ಶಕ್ತಿ ಸಿಗಲೆಂದು ಹಾಗೂ ಭಾರತ ಯುದ್ಧದಲ್ಲಿ ಗೆಲುವು ಸಾಧಿಸಲೆಂದು ವಿಶೇಷ ಪೂಜೆ ನಡೆಸಲಾಯಿತು.
ಅತ್ತಿಗೆರೆ ಗ್ರಾಮದ ಪ್ರಸಿದ್ಧ ಸೋಮೇಶ್ವರ ದೇವಾಲಯದಲ್ಲಿ ಗ್ರಾಮಸ್ಥರು ಬೃಹತ್ ಸಂಖ್ಯೆಯಲ್ಲಿ ಸೇರಿ ಪೂಜಾ ಕಾರ್ಯಕ್ರಮ ನಡೆಸಿದರು. ವಿಶೇಷ ಹೋಮ, ಅಭಿಷೇಕ, ಹಾಗೂ ಅರ್ಥಶಾಂತಿ ಯಾಗದ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ದೇಶದ ರಕ್ಷಣೆಗಾಗಿ ಶ್ರದ್ಧಾಪೂರ್ವಕವಾಗಿ ಹಾರೈಸಿದರು.
ಗ್ರಾಮದ ಹಿರಿಯರು, ಮಹಿಳೆಯರು, ಮಕ್ಕಳೂ ಸಹ ಭಾಗವಹಿಸಿದ್ದ ಈ ಪೂಜಾ ಕಾರ್ಯಕ್ರಮದಲ್ಲಿ ದೇಶಭಕ್ತಿಯ ಭಾವನೆ ಉಕ್ಕಿ ಹರಿದುಬಂದಿತು. “ಸೈನಿಕರ ಧೈರ್ಯವರ್ಧನೆಗೆ ಇದು ನಮ್ಮ ಕಡೆಯಿಂದ ಸಣ್ಣ ಕೊಡುಗೆ ಎಂದು ಗ್ರಾಮಸ್ಥರಾದ ನಾಗೇಶ್ ಗೌಡ ಹೇಳಿದರು.
ದೇಶಕ್ಕಾಗಿ ಹೋರಾಡುತ್ತಿರುವ ಯೋಧರಿಗೆ ಈ ಪ್ರಾರ್ಥನೆ ಶಕ್ತಿ ನೀಡಲಿ ಎಂಬದು ಎಲ್ಲರ ಆಶಯವಾಗಿದೆ.
ಇದೊಂದು ದೇಶಭಕ್ತಿಯ ನಿದರ್ಶನವಾಗಿದ್ದು, ಇಡೀ ಗ್ರಾಮದಲ್ಲಿ ದೇಶದ ಪರ ಭಕ್ತಿಯ ಚೈತನ್ಯ ಮೂಡಿಸಿದೆ.