3:10 AM Saturday10 - May 2025
ಬ್ರೇಕಿಂಗ್ ನ್ಯೂಸ್
Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ… ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್… Doddaballapura | ಘಾಟಿ ಸುಬ್ರಹ್ಮಣ್ಯ ಕ್ಷೇತ್ರ: ಸರಳ ಸಾಮೂಹಿಕ ವಿವಾಹದಲ್ಲಿ 66 ಜೋಡಿಗಳಿಗೆ…

ಇತ್ತೀಚಿನ ಸುದ್ದಿ

ರೋಹನ್ ಕಾರ್ಪೊರೇಷನ್ ರಾಯಭಾರಿಯಾಗಿ ಸೂಪರ್‌ ಸ್ಟಾರ್ ಶಾರುಖ್ ಖಾನ್‌: ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಮರು ವ್ಯಾಖ್ಯಾನ

07/05/2025, 15:50

ಬೆಂಗಳೂರು(reporterkarnataka.com): ಕರ್ನಾಟಕದ ರಿಯಲ್ ಎಸ್ಟೇಟ್ ವಲಯಕ್ಕೆ ಅವಿಸ್ಮರಣೀಯ ಕ್ಷಣದಲ್ಲಿ, ಮಂಗಳೂರಿನ ಪ್ರಮುಖ ಬಿಲ್ಡರ್‌ಗಳು ಹಾಗೂ ಡೆವಲಪರ್‌ಗಳಾದ ರೋಹನ್ ಕಾರ್ಪೊರೇಷನ್, ಕರ್ನಾಟಕಕ್ಕೆ ತನ್ನ ಅಧಿಕೃತ ಬ್ರ್ಯಾಂಡ್ ರಾಯಭಾರಿಯಾಗಿ ಬಾಲಿವುಡ್ ದಂತಕಥೆ ಶಾರುಖ್ ಖಾನ್‌ರನ್ನು ಹೆಮ್ಮೆಯಿಂದ ಘೋಷಿಸುತ್ತಿದೆ.
ಕರ್ನಾಟಕದ ಮಂಗಳೂರಿನಲ್ಲಿ ಸ್ಥಾಪನೆಯಾದ ಮತ್ತು ಕೇಂದ್ರ ಕಚೇರಿ ಹೊಂದಿರುವ, ರೋಹನ್ ಕಾರ್ಪೊರೇಷನ್ ವಿಶ್ವಾಸ, ದರ್ಜೆ ಹಾಗೂ ಅತ್ಯುತ್ತಮತೆಗೆ ಅನುರೂಪ ಪದವಾಗಿದೆ. ಕಳೆದ ಮೂರು ದಶಕಗಳಿಂದ, ಕಂಪನಿ ಹಿಲ್ ಕ್ರೆಸ್ಟ್, ಹೈ ಕ್ರೆಸ್ಟ್, ರೋಹನ್ ಸಿಟಿ ಮತ್ತು ರೋಹನ್ ಸ್ಕ್ವೇರ್ ಇತ್ಯಾದಿ ಪ್ರಮುಖ ಡೆವಲಪ್‌ಮೆಂಟ್‌ಗಳೊಂದಿಗೆ ಮಂಗಳೂರಿನ ಆಕಾಶದೆತ್ತರದ ಕಟ್ಟಡಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಯೋಜನೆಗಳು ಆಧುನಿಕತೆ, ಸಮುದಾಯ ಚಾಲಿತ ನಗರ ಸ್ಥಳದ ದೃಷ್ಟಿಕೋನವನ್ನು ಪ್ರತಿಫಲಿಸುತ್ತದೆ.
ಶಾರುಖ್‌ ಖಾನ್‌ರೊಂದಿಗಿನ ಈ ಅವಿಸ್ಮರಣೀಯ ಸಂಯೋಜನೆ ಅತ್ಯುತ್ತಮತೆ, ನಾವೀನ್ಯತೆ ಹಾಗೂ ಸಮುದಾಯ ನಿರ್ಮಾಣಕ್ಕೆ ಸಮರ್ಪಿತ ಮನೋಭಾವವನ್ನು ಪ್ರತಿಫಲಿಸುತ್ತದೆ. ಇದು ರೋಹನ್ ಕಾರ್ಪೊರೇಷನ್‌ನ ಪ್ರಯಾಣವನ್ನು ನಿರಂತರವಾಗಿ ರೂಪಿಸಿದ ಮೌಲ್ಯಗಳನ್ನು ಒಳಗೊಂಡಿದೆ. 25 ಪೂರ್ಣಗೊಳಿಸಲಾದ ಹೆಗ್ಗುರುತಿನ ಯೋಜನೆಗಳು ಹಾಗೂ ಸುಸ್ಥಿರತೆ, ಗ್ರಾಹಕ ಕೇಂದ್ರಿತ ಅಭಿವೃದ್ಧಿಯೆಡೆಗೆ ನಿರಂತರ ಬದ್ಧತೆಯೊಂದಿಗೆ, ಕಂಪನಿ ಕರ್ನಾಟಕದ ರಿಯಲ್ ಎಸ್ಟೇಟ್ ವಲಯದಲ್ಲಿ ಹೊಸ ಗುರುತನ್ನು ಮೂಡಿಸುವುದನ್ನು ಮುಂದುವರೆಸಿದೆ.

ರೋಹನ್ ಕಾರ್ಪೊರೇಷನ್‌ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಡಾ. ರೋಹನ್ ಮೊಂತೇರೊ ಹೀಗೆ ಹೇಳಿದ್ದಾರೆ: “ಶಾರುಖ್ ಖಾನ್‌ರನ್ನು ಹೊಂದಿರುವುದು ರೋಹನ್ ಕಾರ್ಪೊರೇಷನ್ ಪಾಲುದಾರಿಕೆಗಿಂತ ಹೆಚ್ಚಿನದ್ದೆಂದು ಪ್ರತಿನಿಧಿಸುತ್ತದೆ. ಇದು ಕನಸು ಹಾಗೂ ಬದ್ಧತೆಯ ಸಮ್ಮಿಲನವಾಗಿದೆ. ಶಾರುಖ್ ಖಾನ್ ತಮ್ಮ ಪರಿಶ್ರಮ ಹಾಗೂ ಬದ್ಧತೆಯಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿರುವಂತೆ, ರೋಹನ್ ಕಾರ್ಪೊರೇಷನ್ ಜೀವನವನ್ನು ಮಾರ್ಪಡಿಸುವ ಮೂಲಕ ಸ್ಫೂರ್ತಿ ನೀಡುವ ಆಕಾಂಕ್ಷೆ ಹೊಂದಿದೆ. ಅವರನ್ನು ನಮ್ಮೊಂದಿಗೆ ಹೊಂದುವ ಮೂಲಕ, ನಾವು ಕರ್ನಾಟಕ ಹಾಗೂ ಅದರಾಚೆಗೆ ನಗರ ಜೀವನವನ್ನು ಮರು ವ್ಯಾಖ್ಯಾನಿಸುವ ನಮ್ಮ ಭರವಸೆಗೆ ಬದ್ಧರಾಗಿದ್ದೇವೆ.”
ಶಾರುಖ್ ಖಾನ್ ಹೀಗೆ ಹೇಳಿದ್ದಾರೆ: “ನನ್ನ ಪರಿಶ್ರಮ, ನಾವೀನ್ಯತೆ ಮತ್ತು ಹೃದಯವನ್ನು ಪ್ರತಿಫಲಿಸುವ ಬ್ರ್ಯಾಂಡ್ ಆಗಿರುವ ರೋಹನ್ ಕಾರ್ಪೊರೇಷನ್‌ನೊಂದಿಗೆ ಕೈಜೋಡಿಸುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಸುಸ್ಥಿರ, ಸಮುದಾಯ ಚಾಲಿತ ಜಾಗಗಳು ನನ್ನಲ್ಲಿ ಆಳವಾಗಿ ಪ್ರತಿಧ್ವನಿಸುತ್ತಿದೆ. ಹೃದಯ ಹಾಗೂ ದೃಷ್ಟಿಕೋನದೊಂದಿಗೆ ನಾಳಿನ ನಗರಗಳನ್ನು ರೂಪಿಸುವ ಅದ್ಭುತ ಪ್ರಯಾಣದ ಭಾಗವಾಗಿರಲು ನಾನು ಎದುರು ನೋಡುತ್ತಿದ್ದೇನೆ.”
ಪ್ರಕೃತಿಯೊಂದಿಗೆ ನಗರ ಜೀವನವನ್ನು ಸಾಮರಸ್ಯಗೊಳಿಸುವ ದೃಢವಾದ ದೃಷ್ಟಿಕೋನದ ಬೇರನ್ನು ಹೊಂದಿರುವ ರೋಹನ್ ಕಾರ್ಪೊರೇಷನ್ ಪರಿಸರವನ್ನು ಸಂರಕ್ಷಿಸುವುದರೊಂದಿಗೆ ಜೀವನದ ಗುಣಮಟ್ಟವನ್ನು ವಿಸ್ತರಿಸುವ ಉತ್ಸಾಹಭರಿತ ಸಮುದಾಯಗಳನ್ನು ಪೋಷಿಸಲು ಶ್ರಮಿಸುತ್ತಿದೆ. ಅತ್ಯುತ್ತಮ ವಿನ್ಯಾಸ, ಅತ್ಯದ್ಭುತ ನಿರ್ಮಾಣ ಗುಣಮಟ್ಟ ಹಾಗೂ ಗ್ರಾಹಕ ಸಂತೋಷದ ಮೇಲೆ ನಿರಂತರ ಕೇಂದ್ರೀಕರಿಸುವಿಕೆಯ ಮೂಲಕ ಅಸಾಧಾರಾಣ ಮೌಲ್ಯವನ್ನು ವಿತರಿಸುವುದು ಅವರ ಧ್ಯೇಯವಾಗಿದೆ.
ಸಮಗ್ರತೆ, ಅತ್ಯುತ್ತಮತೆ, ನಾವೀನ್ಯತೆ, ಹಾಗೂ ಸುಸ್ಥಿರತೆಯ ಪ್ರಮುಖ ಮೌಲ್ಯಗಳೊಂದಿಗೆ, ಶಾರುಖ್ ಖಾನ್‌ರೊಂದಿಗೆ ರೋಹನ್ ಕಾರ್ಪೊರೇಷನ್‌ರವರ ಪಾಲುದಾರಿಕೆ ಹೊಸ ಕ್ರಿಯಾತ್ಮಕ ಬೆಳವಣಿಗೆ, ವ್ಯಾಪಕ ತೊಡಗುವಿಕೆ ಮತ್ತು ದೃಢವಾದ ಬ್ರ್ಯಾಂಡ್ ಅಸ್ತಿತ್ವದ ನವಯುಗವನ್ನು ಸಂಕೇತಿಸುತ್ತಿದ್ದು, ಇದು ಕರ್ನಾಟಕದಾದ್ಯಂತ ಕನಸುಗಾರರ ಹೊಸ ತಲೆಮಾರು ಮತ್ತು ಮನೆ ಮಾಲೀಕರಿಗೆ ಸ್ಫೂರ್ತಿಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು