ಇತ್ತೀಚಿನ ಸುದ್ದಿ
ಹತ್ಯೆಗೀಡಾದ ಸುಹಾಸ್ ಶೆಟ್ಟಿ ಮನೆಗೆ ಬಾರ್ಕೂರು ಮಹಾ ಸಂಸ್ಥಾನದ ಪೀಠಾಧಿಪತಿ ಡಾ. ಸಂತೋಷ್ ಗುರೂಜಿ ಭೇಟಿ
04/05/2025, 17:09

ಮಂಗಳೂರು(reporterkarnataka.com):ಹತ್ಯೆಗೀಡಾದ ರೌಡಿ ಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಬಾರ್ಕೂರು ಮಹಾ ಸಂಸ್ಥಾನಂನ ಪೀಠಾಧಿಪತಿ ಡಾ.ಸಂತೋಷ್ ಗುರೂಜಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
ಸುಹಾಸ್ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮೇಲೆ ಅನುಮಾನ ಬರುತ್ತದೆ. ಕಳೆದ 15 ದಿನಗಳಿಂದ ಒಬ್ಬನೇ ಓಡಾಡಬೇಕು, ಆಯುಧ ಇಡಬಾರದು ಎಂದು ಪೊಲೀಸರು ಹೇಳಿದ್ದಾರೆ.
ಇದರ ಹಿಂದೆ ಏನೋ ಇದೆ. ಪೊಲೀಸರ ಸಹಕಾರ ಇದೆಯಾ ಅನ್ನೋದಕ್ಕಾಗಿ ನ್ಯಾಯಾಂಗ ತನಿಖೆ ಅಥವಾ ಎನ್ ಐಎ ತನಿಖೆ ನಡೆಸಬೇಕು.
ಸುಹಾಸ್ ಕುಟುಂಬ ಬಹಳ ಬಡತನದಲ್ಲಿರೋ ಕುಟುಂಬ.
ಆಧಾರ ಸ್ತಂಬವಾಗಿದ್ದ ಮಗ ಇಲ್ಲದಂತಾಗಿದೆ. ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಯಾವುದೇ ರಾಜಕೀಯ ಯಾರೂ ಮಾಡಬಾರದು.
ಹೆಣದ ಮೇಲೆ ರಾಜಕೀಯ ಮಾಡೋದು ಸೂಕ್ತವಲ್ಲ ಎಂದು ಅವರು ನುಡಿದರು.