ಇತ್ತೀಚಿನ ಸುದ್ದಿ
Mangaluru | ಗುಂಪು ದಾಳಿಯಿಂದ ಯುವಕನ ಸಾವು: ಇನ್‌ಸ್ಪೆಕ್ಟರ್ ಸೇರಿದಂತೆ 3 ಮಂದಿ ಪೊಲೀಸರ ಅಮಾನತು
01/05/2025, 12:16

ಮಂಗಳೂರು(reporterkarnataka.com): ನಗರದ ಹೊರವಲಯದ ಕುಡುಪು ಬಳಿ ಯುವಕನೊಬ್ಬ ಗುಂಪು ದಾಳಿಗೊಳಗಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 20ಕ್ಕೇರಿದೆ.
ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್
ಶಿವಕುಮಾರ್, ಹೆಡ್ ಕಾನ್‌ಸ್ಟೇಬಲ್ ಚಂದ್ರ ಪಿ. ಮತ್ತು ಕಾನ್‌ಸ್ಟೇಬಲ್ ಎಲ್ಲಾಲಿಂಗ ಅವರು ಅಮಾನತುಗೊಂಡಿದ್ದಾರೆ.
ಕುಡುಪು ಭಟ ಕಲ್ಲುರ್ಟಿ ದೈವಸ್ಥಾನದ ಸಮೀಪದಲ್ಲಿ ಭಾನುವಾರ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿಲ್ಲ ಎಂಬ ಕಾರಣಕ್ಕೆ ಅಮಾನತುಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಪೊಲೀಸರು 25 ಜನರನ್ನು ತನಿಖೆಗೆ ಒಳಪಡಿಸಿ ಮೊದಲಿಗೆ 15 ಜನರನ್ನು ಬಂಧಿಸಿದ್ದರು, ಬಳಿಕ ಬಂಧಿತರ ಸಂಖ್ಯೆ 20 ಕ್ಕೆ ಏರಿದೆ.