ಇತ್ತೀಚಿನ ಸುದ್ದಿ
Mangaluru North | 1 ಕೋಟಿ ವೆಚ್ಚದ ಗುರುಪುರ-ಕೈಕಂಬ-ಕಾಮಪಾದೆ ರಸ್ತೆ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿಪೂಜೆ
29/04/2025, 19:13

ಗುರುಪುರ(reporterkarnataka.com): ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುರುಪುರ ಕೈಕಂಬ-ಕಾಮಪಾದೆವರೆಗೆ 1 ಕೋಟಿ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಅವರು ಗುದ್ದಲಿಪೂಜೆ ನೆರವೇರಿಸಿದರು.
ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಹಿಂದಿನ ಅವಧಿಯಲ್ಲಿ ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಈ ಭಾಗದ ಬಹುದಿನಗಳ ಬೇಡಿಕೆಯಂತೆ ಇದೀಗ ಈ ರಸ್ತೆ ಅಭಿವೃದ್ಧಿಗೊಳ್ಳುತ್ತಿದೆ. ೫.೭೫ ಅಗಲದೊಂದಿಗೆ ಒಟ್ಟು ೫೦೦ ಮೀಟರ್ ಉದ್ದಕ್ಕೆ ರಸ್ತೆ ಅಭಿವೃದ್ಧಿಗೊಳ್ಳಲಿದೆ. ಮಳೆಗಾಲಕ್ಕೆ ಮುಂಚೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಉದಯ ಕುಮಾರ್, ಸದಸ್ಯರಾದ ಸುದರ್ಶನ್ ಕವಿತಾ, ಅದ್ರಮೋನು, ತಾಪಂ ಮಾಜಿ ಸದಸ್ಯ ವಿಶ್ವನಾಥ ಶೆಟ್ಟಿ, ಗಂಜಿಮಠ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶೋಧನ್ ಆದ್ಯಪಾಡಿ, ಉತ್ತರ ಮಂಡಲದ ಉಪಾಧ್ಯಕ್ಷ ಸೋಹನ್ ಅತಿಕಾರಿ, ಬಿಜೆಪಿ ಮುಖಂಡರಾದ ಭರತ್‌ರಾಜ್ ಕೃಷ್ಣಾಪುರ, ಅಮೃತಲಾಲ್ ಜಾಯ್ಸ್ ಡಿ’ಸೋಜ, ಬೂತ್ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.