7:01 PM Sunday27 - April 2025
ಬ್ರೇಕಿಂಗ್ ನ್ಯೂಸ್
Kodagu | ಪಿರಿಯಾಪಟ್ಟಣ: ಒಂದೇ ದಿನ 430 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳ… Belagavi | ಉಗ್ರರ ಸದೆಬಡಿಯಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೆಎಸ್ಸಾರ್ಟಿಸಿ ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 1 ಕೋಟಿ ಪರಿಹಾರ: ಕಾಲು ಕಳೆದುಕೊಂಡ ಸಿಬ್ಬಂದಿಗೆ… ಮುಖ್ಯಮಂತ್ರಿ ಮಾತು ಆಘಾತ ತಂದಿದೆ, ಕೂಡಲೇ ಕ್ಷಮೆ ಯಾಚಿಸಲಿ: ಪ್ರತಿಪಕ್ಷ ನಾಯಕ ಆರ್.ಅಶೋಕ್… ಕಲ್ಲಡ್ಕ ಕೇಟಿಗೆ 70ರ ಸಂಭ್ರಮ!: ಹಾಲಿನ ಮೇಲೆ ಲೀಲಾಜಾಲವಾಗಿ ತೇಲುವ ಟೀ ಡಿಕಾಕ್ಷನ್… Opposition Leader | ಬೆಲೆಯೇರಿಕೆ ವಿರುದ್ಧ 3 ದಿನಗಳ ಕಾಲ ಹೋರಾಟ: ಪ್ರತಿಪಕ್ಷ… VHP protest | ಕಾಶ್ಮೀರದಲ್ಲಿ ನರಮೇಧ: ಚಿಕ್ಕಮಗಳೂರಿನಲ್ಲಿ ವಿಎಚ್ ಪಿ ಪ್ರತಿಭಟನೆ; ಉಗ್ರರ… Bangalore | ಇಸ್ರೋ ಮಾಜಿ ಅಧ್ಯಕ್ಷ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಕೆ.… BBMP | ಸಾರ್ವಜನಿಕರಿಂದ ದೂರು ಬಾರದಂತೆ ಘನತ್ಯಾಜ್ಯ ನಿರ್ವಹಣೆ ಮಾಡಿ: ಬಿಬಿಎಂಪಿಗೆ ಲೋಕಾಯುಕ್ತ… Chamarajanagara | ಸಂಪುಟ ಸದಸ್ಯರು ದೇವಾಲಯಕ್ಕೆ: ಸಚಿವ ಮಹದೇವಪ್ಪ ಬುಡಕಟ್ಟು ಸಮುದಾಯಗಳ ಕಾಲೋನಿಗಳಿಗೆ…

ಇತ್ತೀಚಿನ ಸುದ್ದಿ

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ: ವಯಸ್ಸಾದ ಹೃದ್ರೋಗಿಗೆ ವಿನೂತನ ಶೈಲಿಯ ಚಿಕಿತ್ಸೆಯಿಂದ ಜೀವದಾನ

26/04/2025, 17:22

ಮಂಗಳೂರು(reporterkarnataka.com): ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ವೈದ್ಯರ ತಂಡ ವಯಸ್ಸಾದ ಹೃದ್ರೋಗಿಗೆ ವಿನೂತನ ಶೈಲಿಯ ಚಿಕಿತ್ಸೆಯ ಮೂಲಕ ಜೀವದಾನ ನೀಡಿದ ಘಟನೆ ನಡೆದಿದೆ.
ವೈದ್ಯರು ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಮತ್ತು ಗಮನಾರ್ಹ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹೊನ್ನಾವರ (ಉತ್ತರ ಕನ್ನಡ) ನಗರ ಮೂಲದ 69 ವಯಸ್ಸಿನ ಹೃದ್ರೋಗಿಯು, ತೀವ್ರ ಎದೆ ನೋವು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಹಾಗೂ ಹೃದ್ರೋಗ ಶಾಸ್ತ್ರ‌ ತಜ್ಞ ಡಾ. ಪ್ರಭಾಕರ್ ಅವರನ್ನು ಭೇಟಿ ಮಾಡಿ ತಮ್ಮ ಹೃದ್ರೋಗದ ಸಮಸ್ಯೆಗಳನ್ನು ವಿವರಿಸಿದರು. ರೋಗಿಯನ್ನು ಸೂಕ್ಷ್ಮವಾಗಿ ತಪಾಸಣೆ ಮಾಡಿದಾಗ ವೈದ್ಯರು ರೋಗಿಯು ತೀವ್ರ ಹೃದ್ರೋಗ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದು, ಹೃದಯದ ಅಪದಮನಿಯಲ್ಲಿ ಕ್ಯಾಲ್ಸಿಯಂ ಕಣಗಳಿದ್ದು, ರಕ್ತದ ಚಲನವಲನಕ್ಕೆ ಅಡ್ಡಿ ಮಾಡುತ್ತಿತ್ತು. ಅದಲ್ಲದೆ ರೋಗಿಯು 10 ವರ್ಷದ ಹಿಂದೆ ಬೈಪಾಸ್ ಶಸ್ತ್ರ ಚಿಕಿತ್ಸೆಗೆ ಒಳಗೊಂಡಿದ್ದರು. ಈ ಕಾರಣ 2ನೇ ಬೈಪಾಸ್ ಶಸ್ತ್ರ ಚಿಕಿತ್ಸೆಯು ರೋಗಿಯ ಜೀವಕ್ಕೆ ಗಂಭೀರ ಸಮಸ್ಯೆ ಮತ್ತು ಅಪಾಯಕಾರಿಯಾಗಿತ್ತು. ತಕ್ಷಣ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಡಾ. ಪ್ರಭಾಕರ್‌ ಅವರು ಈ ಗಂಭೀರ ಸಮಸ್ಯೆ ಮತ್ತು ಜೀವಕ್ಕೆ ಅಪಾಯಕಾರಿಯಾಗುವ ಸವಾಲನ್ನು ಸ್ವೀಕರಿಸಿ, 1 1/2 ಗಂಟೆ ಅವಧಿಯ ವಿನೂತನ ಶೈಲಿಯ ಕ್ಲಿಷ್ಟಕರವಾದ ಅರ್ಬಿಟಲ್ ಅಥೆರೆಕ್ಟೆಮಿ ಚಿಕಿತ್ಸೆಯನ್ನು ನಿರ್ವಹಿಸಿ ಹೃದಯದಲ್ಲಿರುವ ಕ್ಯಾಲ್ಸಿಯಂ ಕಣಗಳನ್ನು ನಿರ್ಮೂಲಿಸಿ 2 ಸ್ಟೆಂಟ್‌ಗಳನ್ನು ಅಳವಡಿಸಿ ಸಾಮಾನ್ಯ ರಕ್ತ ಚಾಲನೆಗೆ ಅನುವುಮಾಡಿಕೊಟ್ಟರು.
ಈ ಚಿಕಿತ್ಸೆಗೆ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಪ್ರದೀಪ್ ಪಿರೇರಾ ಮತ್ತು ಡಾ. ಜೋಸ್ಟಲ್ ಪಿಂಟೋ ಸಹಕರಿಸಿದ್ದರು. ರೋಗಿಯು ಚಿಕಿತ್ಸೆಗೆ ಸ್ಪಂದಿಸಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಏ.26 ರಂದು ಬಿಡುಗಡೆಗೊಂಡಿದ್ದಾರೆ.
ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ಫಾ. ರಿಚರ್ಡ್ ಕುವೆಲ್ಲೋ ಅವರು ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ನೆರವೇರಿಸಲಾಗಿದೆ ಎಂದು ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು