ಇತ್ತೀಚಿನ ಸುದ್ದಿ
VHP protest | ಕಾಶ್ಮೀರದಲ್ಲಿ ನರಮೇಧ: ಚಿಕ್ಕಮಗಳೂರಿನಲ್ಲಿ ವಿಎಚ್ ಪಿ ಪ್ರತಿಭಟನೆ; ಉಗ್ರರ ಪ್ರತಿಕೃತಿ ದಹನ
25/04/2025, 18:39

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಶ್ಮೀರದಲ್ಲಿ ಉಗ್ರರಿಂದ ಹಿಂದೂಗಳ ಹತ್ಯೆ ಖಂಡಿಸಿ
ಚಿಕ್ಕಮಗಳೂರಿನ ವಿಎಚ್ ಪಿ ವತಿಯಿಂದ ನಗರದ ಆಜಾದ್ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಉಗ್ರರ ಜೊತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕೃತಿ ದಹನ ಮಾಡಲಾಯಿತು. ಪಾಕಿಸ್ತಾನ ಧ್ವಜದ ಫ್ಲೆಕ್ಸ್ ಮೇಲೆ ಪ್ರತಿಕೃತಿ ನಿಲ್ಲಿಸಿ ಬೆಂಕಿ ಹಚ್ಚಲಾಯಿತು.
ಪ್ರತಿಕೃತಿ ದಹನಕ್ಕೆ ಮುನ್ನ ಮೆರವಣಿಗೆ ನಡೆಸಲಾಯಿತು.
ಓಂಕಾರೇಶ್ವರ ದೇವಸ್ಥಾನದಿಂದ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವರೆಗೆ ಮೆರವಣಿಗೆ ನಡೆಸಲಾಯಿತು. ಆಜಾದ್ ಪಾರ್ಕ್ ನಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು. ಉಗ್ರರು ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಮಮತಾ ಬ್ಯಾನರ್ಜಿ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನಾಕಾರರು
ಆಕ್ರೋಶ ವ್ಯಕ್ತಪಡಿಸಿದರು.