ಇತ್ತೀಚಿನ ಸುದ್ದಿ
Yadagiri | ಹುಣಸಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯ ಕೂಲಿಗಾರರಿಗೆ ಆರೋಗ್ಯ ತಪಾಸಣೆ
25/04/2025, 15:24

ಶಿವು ರಾಠೋಡ ಹುಣಸಗಿ ಯಾದಗಿರಿ
info.reporterkarnataka@gmail.com
ಹುಣಸಗಿ ತಾಲೂಕಿನ ರಾಜನಕೊಳುರು ಗ್ರಾಮದಲ್ಲಿ 2025-26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯ ಯೋಜನೆಯ ಅಡಿಯಲ್ಲಿ ಬರುವ ಕಾರ್ಮಿಕರ ಆರೋಗ್ಯ ಶಿಬಿರ ಜರುಗಿತು.
ರಾಜನಕೊಳುರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಸುಮಾರು 240 ಜನ ನರೇಗಾ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈರಮ್ಮ ಮಾತನಾಡಿ, ‘ಕೂಲಿಕಾರರು ತಮ್ಮ ದೇಹದ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಶಿಬಿರದಲ್ಲಿ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ಹಲ್ಲು ಪರೀಕ್ಷೆಯನ್ನು ಮಾಡಲಾಯಿತು.
ಈ ವೇಳೆ ಸ್ಥಳದಲ್ಲಿ ವೈದ್ಯರು ದ್ರ್.ಎಂ.ಬಿ.ಕೋರೆ, ಎಡಿ ಶಿವಕುಮಾರ್ ಚೌದ್ರಿ, ಪಿಡಿಒ ಈರಮ್ಮ, ಟಿ.ಸಿ ಸುನಿಲ್ ಕುಮಾರ್, ಶಾಂತ ಕುಮಾರ, ಮಾಹಾಂತೇಶ ಶೆಟ್ಟಿ, ಬಿಎಫ್ ಟಿ ಲಕ್ಕಪ್ಪ, ಸಂಜೀವಿನಿ, ನಾಗವೇಣಿ, ಕವಿತಾ, ಕುಸಿನ ಮನೆ- ರೇಣುಕಾ, ಭಾಗ್ಯ, ಗ್ರಾಕೋಸಕರು-ಮಲ್ಲಮ್ಮ ಕವಿತಾ ಇನ್ನಿತರರು ಇದ್ದರು.