1:19 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

NISE | ಸೌರಶಕ್ತಿಯಲ್ಲಿ ಭಾರತ ಶೇ.3700ಕ್ಕಿಂತ ಹೆಚ್ಚಿನ ಬೆಳವಣಿಗೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

22/04/2025, 20:31

* 2014ರಲ್ಲಿ ಇದ್ದ 2.82
* ಸೌರ ಉತ್ಪಾದನೆ ಇದೀಗ 106 GWಗೆ ಏರಿಕೆ
* ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಭೂತಪೂರ್ವ ಸಾಧನೆ

ನವದೆಹಲಿ(reporterkarnataka.com): ಭಾರತದ ಸ್ಥಾಪಿತ ಸೌರಶಕ್ತಿ ಸಾಮರ್ಥ್ಯ 2014ರಲ್ಲಿ ಕೇವಲ 2.82 GW ಇತ್ತು. ಅದೀಗ 106 GWಗೆ ಏರಿದ್ದು, ಒಂದು ದಶಕದಲ್ಲಿ ಶೇ.3700ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.


ಹರಿಯಾಣದ ಬಂಧ್ವಾರಿಯ ಗ್ವಾಲ್ ಪಹಾರಿಯಲ್ಲಿರುವ ರಾಷ್ಟ್ರೀಯ ಸೌರಶಕ್ತಿ ಸಂಸ್ಥೆಯಲ್ಲಿ (NISE) PV ಮಾಡ್ಯೂಲ್ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯ ಉದ್ಘಾಟಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸೌರಶಕ್ತಿ ಉತ್ಪಾದನೆಯಲ್ಲಿ ಅಭೂತಪೂರ್ವ ಸಾಧನೆಗೈಯುತ್ತಿದೆ ಎಂದು ಪ್ರತಿಪಾದಿಸಿದರು.
2014ರಲ್ಲಿ 2 GW ಇದ್ದಂಥ ಸೌರ ಮಾಡ್ಯೂಲ್ ಉತ್ಪಾದನೆ ಇಂದು 80 GWಗೆ ಏರಿದೆ. 2030ರ ವೇಳೆಗೆ 150 GW ತಲುಪುವ ಗುರಿ ಹೊಂದಿದೆ. ಸೌರ ಪ್ರಗತಿ ಜತೆಗೆ ಪವನ ಶಕ್ತಿ ಸಾಮರ್ಥ್ಯದಲ್ಲೂ 50 GW ಸಾಧನೆ ತೋರಲಿದ್ದು, ಭಾರತ 500 GW ಪಳೆಯುಳಿಕೆಯೇತರ ಇಂಧನ ಗುರಿ ಸಾಧಿಸುವ ಹಾದಿಯಲ್ಲಿ ದೃಢವಾಗಿ ಸಾಗುತ್ತಿದೆ ಎಂದು ಹೇಳಿದರು.
*NISE ನ ಹೊಸ PV ಪ್ರಯೋಗಾಲಯ:*
NISE ಈಗ ಸಮಗ್ರ ಪರೀಕ್ಷೆ, ಮಾಪನಾಂಕ ನಿರ್ಣಯ ಮತ್ತು ಪ್ರಮಾಣೀಕರಣ ಸೇವೆ ನೀಡಲು ಸಜ್ಜಾಗಿದೆ. NISE ಹೊಸ PV ಪ್ರಯೋಗಾಲಯ ಜಾಗತಿಕ ಮಾನದಂಡಗಳನ್ನು ಸ್ಥಾಪಿಸಲಿದೆ. ಸೌರ ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ, ತರಬೇತಿಯು ಸ್ವಾವಲಂಬನೆ, ನಾವೀನ್ಯತೆ ಮತ್ತು ಜಾಗತಿಕ ಶ್ರೇಷ್ಠತೆಯತ್ತ ದಿಟ್ಟ ಹೆಜ್ಜೆಯನ್ನು ಗುರುತಿಸುತ್ತದೆ ಎಂದು ಹೇಳಿದರು.
NISE ಹೊಸ PV ಪ್ರಯೋಗಾಲಯ BIS ಮಾನದಂಡಗಳೊಂದಿಗೆ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (PLI) ಯೋಜನೆಗೆ ಪ್ರಮುಖ ಉತ್ತೇಜನ ನೀಡುತ್ತದೆ ಮತ್ತು ಜಾಗತಿಕ ಉತ್ಪಾದನಾ ಕೇಂದ್ರವಾಗುವ ಭಾರತದ ಆಕಾಂಕ್ಷೆಯನ್ನು ಬೆಂಬಲಿಸುತ್ತದೆ. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಅದರ ದಕ್ಷತೆ, ಗುಣಮಟ್ಟ ಮತ್ತು ಸಂಶೋಧನೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಹೇಳಿದರು.
*55,000ಕ್ಕೂ ಹೆಚ್ಚು ಸೂರ್ಯಮಿತ್ರ ತಂತ್ರಜ್ಞರಿಗೆ ತರಬೇತಿ:*
NISE ಸರ್ಕಾರಿ ಅಧಿಕಾರಿಗಳು, ಕೈಗಾರಿಕಾ ವೃತ್ತಿಪರರು ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ ಒಂದು ತರಬೇತಿ ಕೇಂದ್ರ ಆದಂತಾಗಿದೆ. 55,000ಕ್ಕೂ ಹೆಚ್ಚು ಸೂರ್ಯಮಿತ್ರ ತಂತ್ರಜ್ಞರಿಗೆ ತರಬೇತಿ ನೀಡುವಲ್ಲಿ ಮತ್ತು ರೈತರಿಗೆ 300ಕ್ಕೂ ಹೆಚ್ಚು ಸೌರ ಗಾಳಿ ಡ್ರೈಯರ್-ಕಮ್-ಸ್ಪೇಸ್ ವ್ಯವಸ್ಥೆ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಶ್ಲಾಘಿಸಿದರು.
*ಸೌರ ಚಾಲಿತ EV ಚಾರ್ಜಿಂಗ್ ಸ್ಟೇಷನ್‌ ನಾವೀನ್ಯತೆಗೆ ಸಲಹೆ:*
ಸೌರಶಕ್ತಿ ಮುನ್ಸೂಚನೆಗಾಗಿ AI, ಕಟ್ಟಡ-ಸಂಯೋಜಿತ ಫೋಟೊವೋಲ್ಟಾಯಿಕ್ಸ್ (BIPV) ಮತ್ತು ಸೌರ-ಚಾಲಿತ EV ಚಾರ್ಜಿಂಗ್ ಸ್ಟೇಷನ್‌ಗಳಂತಹ ನಾವೀನ್ಯತೆಗಳ ಸಾಮೂಹಿಕ ಅಳವಡಿಕೆಗೆ NISE ಕ್ರಮ ಕೈಗೊಳ್ಳಬೇಕು. ಸೌರಶಕ್ತಿ ಮೂಲಕ ಸುಸ್ಥಿರ EV ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸುವುದು ಪ್ರಧಾನಿ ಮೋದಿಯವರ ದೃಷ್ಟಿಕೋನದ ಒಂದು ಭಾಗವಾಗಿದೆ. NISE ಇದನ್ನು ಅನ್ವೇಷಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಸಚಿವ ಜೋಶಿ ಅವರು “ಏಕ್ ಪೇಡ್ ಮಾ ಕೆ ನಾಮ್’ ನೆಡುತೋಪು ಅಭಿಯಾನದ ಪ್ರಯುಕ್ತ ಸಸಿ ನೆಡುವ ಮೂಲಕ ಪ್ರತಿಯೊಂದು ಸಸಿಯೂ ನಾಳೆಯ ಹಸಿರಿನ ಭರವಸೆಯಾಗಿದೆ. ವಿಶ್ವ ಭೂ ದಿನದಂದು ಸ್ವಚ್ಛ, ಹಸಿರು ಮತ್ತು ಹೆಚ್ಚು ಸುಸ್ಥಿರ ಗ್ರಹವನ್ನು ನಿರ್ಮಿಸುವ ಬದ್ಧತೆಯಾಗಿದೆ ಎಂದು ಹೇಳಿದರು. MNRE ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ, ISA ಮಹಾನಿರ್ದೇಶಕ ಆಶಿಶ್ ಖನ್ನಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು