ಇತ್ತೀಚಿನ ಸುದ್ದಿ
ರಂಗ ಸ್ವರೂಪದಿಂದ ಬೇಸಿಗೆ ಶಿಬಿರ ಸಂಪನ್ನ ; ರಂಗಸ್ವರೂಪ ಪ್ರಶಸ್ತಿ ಪ್ರದಾನ
22/04/2025, 11:20

ಮಂಗಳೂರು(reporter Karnataka.com)
ರಂಗ ಸ್ವರೂಪದ 20ನೇ ವರ್ಷದ 4ದಿನಗಳ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಹಾಗೂ ರಂಗಸ್ವರೂಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮರಕಡ ಕುಂಜತ್ತಬೈಲ್ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ದ.ಕ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗೋವಿಂದ ಮಡಿವಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈಗಿನ ಕಾಲದಲ್ಲಿ ಪುಟಾಣಿ ಮಕ್ಕಳಿಗೆ ಬೋಧನೆ ಮಾಡುವುದು ಒಂದು ಚಾಲೆಂಜ್ ಅಗಿದೆ. ದ.ಕ. ಜಿಲ್ಲೆಯಲ್ಲಿ 1772 ಶಾಲೆಗಳಿವೆ. ರಂಗ ಸ್ವರೂಪ ಸಂಸ್ಥೆಯೊಂದಿಗೆ ಕೈಜೋಡಿಸಿ ಮರಕಡ ಶಾಲೆ ಆಯೋಜಿಸಿದ ಬೇಸಿಗೆ ಶಿಬಿರ ಇತರ ಶಾಲೆಗಳಿಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭ ಜಾನಪದ ವಿದ್ವಾಂಸ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ.ಕೆ ಪೇಜಾವರ್ ಅವರಿಗೆ ರಂಗಸ್ವರೂಪ-2025 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಳಿಕ ಮಾತನಾಡಿದ ಅವರು ಈ ಶಿಬಿರ ನಿತ್ಯ ಶಿಬಿರವಾಗಬೇಕು ಮಕ್ಕಳು ನಿತ್ಯ ಸಂಭ್ರಮಿಸಬೇಕು ನಿತ್ಯ ಸಂಭ್ರಮಿಸಿದಾಗ ಶಿಕ್ಷಣಕ್ಕೆ ಹೆಚ್ಚು ಒತ್ತು ಬರುತ್ತದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ರವರನ್ನು ಸನ್ಮಾನಿಸಲಾಯಿತು. ರಂಗ ಸ್ವರೂಪ ಗೌರವ ಸಲಹೆಗಾರ ಎನ್. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಕಾರ್ಪೊರೇಟರ್ ಶರತ್ ಕುಮಾರ್, ಮರಕಡ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಾದ ಎ.ನೇತ್ರಾವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಂಗ ಸ್ವರೂಪ ಅಧ್ಯಕ್ಷ ರೆಹಮಾನ್ ಖಾನ್ ಕುಂಜತ್ತಬೈಲ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಶಿಬಿರ ನಿರ್ದೇಶಕ ಝುಬೇರ್ ಖಾನ್ ಕುಡ್ಲ ಸ್ವಾಗತಿಸಿದರು. ಸದಸ್ಯರಾದ ತಸ್ಲೀಮಾ ಬಾನು,ಅನೀಸಾ ಸವಾದ್ ಪ್ರಶಸ್ತಿ ಪತ್ರ ವಾಚಿಸಿದರು, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ವಂದಿಸಿದರು.
ಗೌರವಾಧ್ಯಕ್ಷ ಪ್ರೇಂನಾಥ್ ಮರ್ಣೆ ನಿರೂಪಿಸಿದರು.
ಶಿಬಿರಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.