12:55 AM Sunday14 - September 2025
ಬ್ರೇಕಿಂಗ್ ನ್ಯೂಸ್
ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ…

ಇತ್ತೀಚಿನ ಸುದ್ದಿ

Kannada | ಪಿಲಿಕುಳಕ್ಕೆ ಕೋಟ ಶಿವರಾಮ ಕಾರಂತರ ಹೆಸರು ಇಟ್ಟಿಲ್ಲ: ಡಾ. ಹರಿಕೃಷ್ಣ ಪುನರೂರು ವಿಷಾದ

21/04/2025, 10:53

ಕಿನ್ನಿಗೋಳಿ(reporterkarnataka.com): ಮಂಗಳೂರಿನ ನಿಸರ್ಗಧಾಮ ಪಿಲಿಕುಳಕ್ಕೆ ಕೋಟ ಶಿವರಾಮ ಕಾರಂತರ ಹೆಸರನ್ನು ಇಡಬೇಕೆಂದು ಸರಕಾರಕ್ಕೆ ಹಲವು ಬಾರಿ ಒತ್ತಾಯಿಸಲಾಗಿತ್ತು. ಕಾನೂನು ಹೋರಾಟ ಮಾಡಿದ್ದೇನೆ. ಆದರೆ ಇದುವರೆಗೆ ಪಿಲಿಕುಳಕ್ಕೆ ಶಿವರಾಮ ಕಾರಂತರ ಹೆಸರನ್ನು ಇಡುವ ಸರಕಾರದ ಆದೇಶವಾಗಲಿ, ನ್ಯಾಯಾಲಯದಿಂದ ಆದೇಶವಾಗಲಿ ಬಂದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ವಿಷಾದ ವ್ಯಕ್ತಪಡಿಸಿದರು.
ಅವರು ಯುಗ ಪುರುಷ ಕಿನ್ನಿಗೋಳಿ ಸಭಾಂಗಣದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪುಸ್ತಕ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಓದುವರು ಕಡಿಮೆಯಾಗುತ್ತಿದ್ದಾರೆ. ಕೊಂಡು ಓದುವವರು ಇಲ್ಲವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷಕ್ಕೆ 2500 ಕನ್ನಡ ಶಾಲೆಗಳು ಮುಚ್ಚುತ್ತಾ ಬರುತ್ತಿವೆ. ಶಾಲೆಗೊಂದು ಕನ್ನಡ ಅಧ್ಯಾಪಕರನ್ನು ಕೊಡದಿದ್ದರೆ ಸರಕಾರಿ ಶಾಲೆಗಳು ಉಳಿಯುವುದು ಹೇಗೆ ಎಂದು ಪುನರೂರು ಪ್ರಶ್ನಿಸಿದರು.
ಕನ್ನಡ ಭಾಷೆಯ ಬಗ್ಗೆ ಸರಕಾರಕ್ಕೆ ಕಳಕಳಿ ಇಲ್ಲ. ಕನ್ನಡ ಸಂಘಟನೆಗಳು ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಅವರು ನುಡಿದರು.
ದ.ಕ. ಜಿಲ್ಲಾ ಘಟಕವನ್ನು ಕನ್ನಡ ಧ್ವಜವನ್ನು ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅವರಿಗೆ ಹಸ್ತಾಂತರಿಸುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಚಾಲನೆ ನೀಡಿದರು. ಕನ್ನಡದ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ನಿರಂತರ ನಡೆಯಲಿ ಯುವ ಪ್ರತಿಭೆಗಳನ್ನು ಗುರುತಿಸಿ ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಅರ್ಹ ಪ್ರತಿಭೆಗಳಿಗೆ ಸೂಕ್ತ ಅವಕಾಶ ನೀಡಬೇಕು ಎಂದು ಅವರು ಹೇಳಿದರು.
ಮುಂಬೈಯ ವಿಶ್ವನಾಥ ದೊಡ್ಮನೆಯವರ ಸಂಪಾದಕತ್ವದ ಹೊರನಾಡಿನಲ್ಲಿ ತುಳುವರು ಕೃತಿಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಾನಂದ ಪೆರಾಜೆ ಬಿಡುಗಡೆಗೊಳಿಸಿದರು. 39 ಲೇಖಕರ ಲೇಖನಗಳನ್ನು ಒಳಗೊಂಡಿರುವ ಪುಸ್ತಕದ ಪರಿಚಯವನ್ನು ಡಾ.ಸುಮತಿ ಪಿ. ಕಾರ್ಕಳ ಮಾಡಿದರು.

*ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ ಪ್ರದಾನ:*
ಕಾಸರಗೋಡು ಕನ್ನಡ ಭವನ ಕೇಂದ್ರ ಸಮಿತಿಯ ಪ್ರತಿಷ್ಠಿತ ಪ್ರಶಸ್ತಿಯಾದ ರಾಷ್ಟ್ಟ್ರ ಕವಿ ಗೋವಿಂದ ಪೈ ರಾಷ್ಟ್ರ ಪ್ರಶಸ್ತಿ 2025ನ್ನು ಡಾ. ಹರಿಕೃಷ್ಣ ಪುನರೂರು, ಪ್ರದೀಪ ಕುಮಾರ ಕಲ್ಕೂರ, ಕ್ಯಾಪ್ಟನ್ ಗಣೇಶ ಕಾರ್ಣಿಕ್, ಶ್ರೀಪತಿ ಭಟ್ ಮೂಡುಬಿದಿರೆ, ಕೊಡೆತ್ತೂರು ಭುವನಾಭಿರಾಮ ಉಡುಪರಿಗೆ ಕಾಸರಗೋಡು ಕನ್ನಡ ಭವನ ರೂವಾರಿಗಳಾದ ಡಾ.ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ದಂಪತಿ ಸ್ಮರಣಿಕೆಗಳೊಂದಿಗೆ ಪ್ರದಾನ ಮಾಡಿದರು.
ಜಿಲ್ಲಾ ಕ.ಚು.ಸಾ.ಪ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಥಾಬಿಂದು ಪ್ರಕಾಶನದ ಪಿ.ವಿ.ಪ್ರದೀಪ ಕುಮಾರ್, ಜಾನಪದ ಪರಿಷತ್ತು ಅಧ್ಯಕ್ಷ ಪಮ್ಮಿ ಕೊಡಿಯಾಲ್ ಬೈಲು ಉಪಸ್ಥಿತರಿದ್ದರು. ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಸ್ವಾಗತ ಪರಿಚಯ ಮಾಡಿದರು. ರಾಜ್ಯ ಸಂಚಾಲಕಿ ಡಾ. ಶಾಂತಾ ಪುತ್ತೂರು ಪ್ರಾಸ್ತಾವಿಕ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಅನಿತಾ ಶೆಣೈ ಪ್ರಾರ್ಥಿಸಿದರು. ಕಾರ್ಯದರ್ಶಿ ಅಪೂರ್ವ ಕಾರಂತ ನಿರೂಪಿಸಿದರು. ಉಷಾ ಶಶಿಧರ ವಂದಿಸಿದರು.


ಪ್ರಥಮ ಚುಟುಕು ಕವಿಗೋಷ್ಠಿ ಬೆಂಗಳೂರು ಘಟಕದ ಅಧ್ಯಕ್ಷರಾಗಿ ಹಿರಿಯ ಚುಟುಕು ಕವಿ ಹಾ.ಮ. ಸತೀಶ ಬೆಂಗಳೂರು ಅವರಿಗೆ ಡಾ. ವಾಮನ್ ರಾವ್ ಬೇಕಲ್ ಧ್ವಜ ಹಸ್ತಾಂತರ ಮಾಡುವ ಮೂಲಕ ಜವಾಬ್ದಾರಿ ಘೋಷಣೆ ಮಾಡಿದರು.
ಕಾರ್ಯಕ್ರಮವನ್ನು ಸತ್ಯವತಿ ಭಟ್ ಕೊಳಚಪ್ಪು ದೀಪೋಜ್ವಲನ ಮಾಡಿ ಉದ್ಘಾಟಿಸಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾದ್ಯಂತದಿಂದ ಬಂದ 24 ಕವಿಗಳು ಕವನ ವಾಚನ ಮಾಡಿದರು. ಲಕ್ಷ್ಮೀ ಪೆರ್ಮುದೆ, ರೇಖಾ ಸುದೇಶ ರಾವ್ ನಿರೂಪಿಸಿದರು. ಅಕ್ಷತಾ ನಾಗನಕಜೆ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು