ಇತ್ತೀಚಿನ ಸುದ್ದಿ
ಬಪ್ಪನಾಡು ರಥೋತ್ಸವದ ಸಂದರ್ಭ ಕುಸಿದು ಬಿದ್ದ ರಥದ ಮೇಲ್ಭಾಗ
19/04/2025, 10:04

ಮುಲ್ಕಿ(reporterkarnataka.com) : ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ತಡರಾತ್ರಿ ನಡೆದ ರಥೋತ್ಸವದ ಸಂದರ್ಭದಲ್ಲಿ ರಥದ ಮೇಲ್ಭಾಗ ಕುಸಿದ್ದು ಬಿದ್ದ ಘಟನೆ ನಡೆದಿದೆ.
ರಾತ್ರಿ 1.30ರ ವೇಳೆಗೆ ರಥ ಎಳೆಯುತ್ತಿದ್ದ ಸಂದರ್ಭದಲ್ಲಿ ರಥದ ಮೇಲ್ಭಾಗ ರಥದ ಎಡಭಾಗಕ್ಕೆ ಕುಸಿದು ಬಿದ್ದಿದ್ದು, ಸುತ್ತಲಿದ್ದವರಿಗಾಗಲಿ ರಥದ ಒಳಗಿದ್ದ ಅರ್ಚಕರಿಗಾಗಲಿ ಯಾವುದೇ ಗಂಭೀರ ಗಾಯಗಳು ಉಂಟಾಗಿಲ್ಲ. ಬಳಿಕ ದೇವಾಲಯದ ಚಂದ್ರಮಂಡಲ ರಥದಲ್ಲಿ ದೇವರ ಉತ್ಸವ ನಡೆಯಿತು.
ಈ ಘಟನೆ ಭಕ್ತ ಜನ ಸಮೂಹದಲ್ಲಿ ಆತಂಕವನ್ನು ಉಂಟು ಮಾಡಿದ್ದು, ಯಾಕಾಗಿ ರಥದ ಮೇಲ್ಭಾಗ ಉರುಳಿತು ಎನ್ನುವ ಪ್ರಶ್ನೆ ಮೂಡಿದೆ.