ಇತ್ತೀಚಿನ ಸುದ್ದಿ
ಕಳವಾರು ಪೆಜಾರ್ ಸಂತ ಜೋಸೆಫರ ಚರ್ಚ್: ಗಾಯನ ಮಂಡಳಿಯಿಂದ ಸುಶ್ರಾವ್ಯ ಭಕ್ತಿ ಗೀತೆ
17/04/2025, 10:43

ಮಂಗಳೂರು(reporterkarnataka.com): ಮಂಗಳೂರಿನ ಕಳವಾರು ಪೆಜಾರ್ ಸಂತ ಜೋಸೆಫರ ಚರ್ಚ್ ವತಿಯಿಂದ ಮಂಗಳವಾರ ನಡೆದ 241ನೇ ಶಿಲುಬೆಯ ಹಾದಿ ಕಾರ್ಯಕ್ರಮದ ಬಲಿಪೂಜೆಯ ವೇಳೆ ಚರ್ಚ್ ನ ಗಾಯನ ಮಂಡಳಿಯ ಸದಸ್ಯರು ಸುಶ್ರಾವ್ಯ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾದರು. ಗಾಯನ ತಂಡದಲ್ಲಿ ಅಧ್ಯಕ್ಷೆ ಸೆಲಿನ್ ಕೊರೆಯಾ, ಸದಸ್ಯರಾದ ಪ್ರೀತಂ ಡಿ’ಸೋಜಾ, ಪ್ರೀವಲ್ ಡಿ’ಸೋಜಾ, ಡಯಾನಾ ಪಿರೇರಾ, ಜನೀಶಾ ಸಿಕ್ವೇರಾ, ಲೀಶಾ ಪಿರೇರಾ, ಕೆನಿತ್ ಕ್ರಾಸ್ತಾ, ಮೆಟಿಲ್ಡಾ ಕ್ರಾಸ್ತಾ, ಮರಿಯಾ ಪಿರೇರಾ, ಅನ್ಸ್‌ಯಾ ಫೆರಾವೊ, ಅನಿತಾ ಪೆರಿಸ್, ರೋಶಲ್ ಡಿ’ಸೋಜಾ, ಸ್ವೀಡಲ್ ಡಿ’ಸೋಜಾ ಅವರಿದ್ದರು. ಆಲ್ವಿನ್ ನೊರೊನ್ಹಾ ಅವರು ಕೀ ಬೋರ್ಡ್ ನಲ್ಲಿ ಸಹಕರಿಸಿದರು.