ಇತ್ತೀಚಿನ ಸುದ್ದಿ
MRPL CSR | ಅದ್ಯಪಾಡಿ ಪ್ರಾಥಮಿಕ ಶಾಲೆಯ ನೂತನ ಕೊಠಡಿಗೆ ಶಾಸಕ ಡಾ. ಭರತ್ ಶೆಟ್ಟಿ ಚಾಲನೆ
09/04/2025, 15:07

ಬಜಪೆ(reporterkarnataka.com): ಅದ್ಯಪಾಡಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಆರ್ ಪಿಎಲ್ ನ ಸಿಎಸ್ ಆರ್ ಯೋಜನೆಯಡಿ ಸುಮಾರು 19 ಲಕ್ಷ ಅನುದಾನದಲ್ಲಿ ನಿರ್ಮಿಸಿದ ನೂತನ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ರಾಜಕೀಯ, ಧರ್ಮವನ್ನು ಆವರಣ ಗೋಡೆಯ ಹೊರಗೆ ಇಟ್ಟು ಮಕ್ಕಳು ದೇವರ ಸಮಾನವೆಂದು ಭಾವಿಸಿ, ಪ್ರಬುದ್ಧ ಸಮಾಜವನ್ನು ಮಾಡುವ ಜವಾಬ್ದಾರಿ ನಮ್ಮ ಹಾಗೂ ಶಿಕ್ಷಣ ಸಂಸ್ಥೆಯ ಮೇಲಿದೆ ಎಂದರು.